10/17/14

  ಶಾಪ


ದೈವದ ಎದುರು ನೀನು ಮಾತನಾಡಿದರೆ ಅದರ ಶಾಪ ಸಿಗದೆ ಇರಲಾರದು. ಇಡೀ ಊರಿನ ಜನರು ಅಷ್ಟೇಕೆ ಪರ ಊರಿನವರು ಕೂಡ ತಲೆತಲಾಂತರದಿಂದ ನಂಬಿಕೊಂಡು ಬಂದಿರುವ ದೈವಕ್ಕೆ ನೀನು ಎದುರು ಮಾತನಾಡುವುದೆ? ದೈವವೆಂದರೆ ಏನೆಂದು ತಿಳಿದಿದ್ದೀ? ಅದರ ಕೋಪದ ಉರಿಗೆ ಸಿಲುಕಿದರೆ ಪರಿಣಾಮ ಏನಾಗುತ್ತದೆ ಎಂದು ಬಲ್ಲೆಯ?. ಅದು ನಿನಗೆ ತಿಳಿದಿಲ್ಲವೆಂದರೆ ಹಿರಿಯರಲ್ಲಿ ಕೇಳಿ ತಿಳಿದುಕೋ, ಸಾಧ್ಯವಿಲ್ಲವೆಂದಾದರೆ ದೈವದ ಕೋಪದ ಪ್ರಭಾವ ಎಷ್ಟು ಅನ್ನುವುದನ್ನು ಅನುಭವಿಸಿ ನೋಡು. ಆಗ ನಿನಗೆ ಮಾತ್ರ ಯಾಕೆ ಎಲ್ಲರಿಗೂ ಅರ್ಥವಾಗುತ್ತದೆ.

ಹೌದು ನೀವು ಹೇಳುವ ಕಥೆಯನ್ನು ಕೇಳಲು ಈ ಊರಿನ ಜನರೆಲ್ಲರು ದಡ್ಡರಲ್ಲ. ನಮ್ಮ ತಲೆಗಳಲ್ಲಿ ಸಗಣಿ ತುಂಬಿಕೊಂಡಿದ್ದೇವೆ ಎಂದು ಭಾವಿಸಿದ್ದಿರೊ, ನಿಮ್ಮ ಕೆಟ್ಟ ಕೆಲಸಗಳು ಇಲ್ಲಿ ಯಾರಿಗೂ ತಿಳಿಯುವುದಿಲ್ಲವೆಂದು ನೀವು ನಂಬಿದ್ದರೆ ಅದು ನಿಮ್ಮ ಮೂರ್ಖತನವಷ್ಟೆ. ನಮ್ಮ ರೀತಿಯಲ್ಲಿ ಕೂಲಿ ಮಾಡುವವರೆಲ್ಲರು ಕೈಲಾಗದವರೆಂದು, ವಿದ್ಯೆ ಇಲ್ಲದವರೆಲ್ಲರೂ  ಬುದ್ಧಿ ಇಲ್ಲದವರೆಂದು ತಿಳಿದು ಎಲ್ಲರು ನಿಮ್ಮ ಅಡಿಯಾಳುಗಳೆಂದು ತಿಮರ್ಾನಿಸಿದರೆ ಮರೆತು ಬಿಡಿ. ನೀವು ಕೇವಲ ದೇವರು ದೈವ ಭೂತ ಎಂದು ಹೇಳಿ ಜನರನ್ನು ನಂಬಿಸುತ್ತೀರೇನೋ ಸರಿ. ಆದರೆ ನಾವು ದೇವರು ಮಾತ್ರವಲ್ಲ ಅದರೊಂದಿಗೆ ಅತ್ಮಸಾಕ್ಷಿಯನ್ನು ನಂಬುವವರು. ಒಳ್ಳೆಯ ಕೆಟ್ಟವುಗಳ, ಸರಿ ತಪ್ಪುಗಳ ಅರಿವು ನಮಗೂ ಇದೆ. ಇಷ್ಟಕ್ಕೂ ದೇವರು ಮೆಚ್ಚುವುದಾದರು ಏನನ್ನು? ಶ್ರೀಮಂತಿಕೆಯನ್ನೊ ಅಥವಾ ಹೃದಯವಂತಿಕೆಯನ್ನೊ? ಜನರ ಬೆವರಿನ ಸುಲಿಗೆಯ ಹಣದಿಂದ ಯಾರು ಉದ್ಧಾರವಾಗಲು ಸಾಧ್ಯವಿಲ್ಲ. ಅದರಿಂದ ಬರುವ ವೈಭವಗಳು ಅಲ್ಪದಿನವಷ್ಟೆ. ಅವರು ದುಃಖದಿಂದ ಮೈ ಮುರಿದು ಸಂಪಾದಿಸಿದ ಹಣ ಅದು ಕೇವಲ ಹಣವಲ್ಲ ಅದು ರಕ್ತದ ಬೆವರು. ಅದನ್ನು ಸಹ ದೇವರು ದೈವದ ಹೆಸರಿನಲ್ಲಿ ಬಲವಂತವಾಗಿ ಕಿತ್ತುಕೊಂಡರೆ ಅದು ನಿಮಗೆ ಅವರು ಕೊಡುವ ದೇಣಿಗೆಯಲ್ಲ ಶಾಪವಷ್ಟೆ. ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ. ಹಣ ಹಣವೆಂದು ನಮ್ಮನ್ನು ಪೀಡಿಸಿದರೆ ಹೇಗೆ ಕೊಡಲು ಸಾಧ್ಯ? ನಂಬಿರುವ ದೇವರಿಗೇನೂ ನಮ್ಮ ಕಷ್ಟಗಳು ಅರ್ಥವಾಗುವುದಿಲ್ಲವೆಂದೊ? ನಂಬುವ ದೇವರ ಮೇಲಿರುವ ಭಯಕ್ಕಿಂತಲು ನಿಮ್ಮ ಮೇಲಿರುವ ಭಯವೇ ಈ ಊರಿನ ಜನಕ್ಕೆ ಹೆಚ್ಚು. ನೀವೇನು ದೇವತಾ ಮನುಷ್ಯರೊ, ಮೂರು ತಲೆಮಾರಿಗೆ ಕೂತು ಉಣ್ಣುವಷ್ಟು ಕೂಡಿಸಿಟ್ಟದನ್ನು ಕೊಟ್ಟುಬಿಡಿ ದೇವರಿಗೆ. ದೈವವೇನು ಬೇಡವೆನ್ನುವುದೊ. ಗಮನವಿಟ್ಟು ಕೇಳಿ ಇನ್ನೂ ಮುಂದೆ ಯಾವುದೇ ದೈವ ದೇವರುಗಳ ಕಾರ್ಯಗಳಿಗೆ ನಾನು ಮಾತ್ರವಲ್ಲ, ಈ ಊರಿನ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಕೊಡಲು ಸಾಧ್ಯ. ಅಷ್ಟುಕೊಡಿ, ಇಷ್ಟು ಕೊಡಿ ಸಾಲುವುದಿಲ್ಲವೆಂಬ ಮಾತು ಮುಂದೆ ನಮ್ಮ ಜನರೆದುರು ಬರಬಾರದು. ಇದೇ ಕೊನೆ.

ಹೀಗೆ ಮಾತಿಗೆ  ಮಾತು ಬೆಳೆದು ತರ್ಕಗಳು ತಾರಕಕ್ಕೇರುತ್ತಿದ್ದವು. ಊರಿನ ಭೂತದ ದೈವ ದೇವರುಗಳ ದೈವಸ್ಥಾನದ ಆಡಳಿತ ಮುಖ್ಯಸ್ಥನೂ, ಊರಿನ ಶ್ರೀಮಂತನೂ ಆಗಿರುವ ಭವಾನಿ ಶೆಟ್ಟರಿಗೂ, ಸಾಧಾರಣ ನಾಲ್ಕು ಮನೆಗಳ ತೋಟಗಳಲ್ಲಿ ದುಡಿದು ಯಾರೋ ನೀಡಿರುವ ತುಂಡು ಗೇಣಿಯ ಜಾಗದಲ್ಲಿ ಕೂಲಿ ನಾಲಿ ಮಾಡಿ ಬದುಕು ಸಾಗಿಸಲು ಹೆಣಗಾಡುತ್ತಿರುವ ಭೋಜನಿಗೂ ದೈವಕ್ಕೂ ಹಾಗೂ ಅದರ ಜಾತ್ರಗೆ ಬೇಕಾದ ಖಚರ್ುವೆಚ್ಚಗಳಿಗಾಗಿ ವಂತಿಗೆ ನೀಡಬೇಕಾದ ಹಣದ ಕುರಿತು ಬಿಸಿ ಬಿಸಿಯಾಗಿ ವಾದ ವಿವಾದಗಳೊಂದಿಗೆ ಚಚರ್ೆಯಾಗುತ್ತಿತ್ತು. ಕರಾವಳಿ ತೀರದ ಜನರ ಬದುಕು ಹಲವಾರು ವೈವಿದ್ಯಗಳೊಂದಿಗೆ ಹಾಸುಹೊಕ್ಕಾಗಿದೆ. ಮೊಗವೀರರ ಬದುಕು ಮೀನು ಹಿಡಿಯುವುದರ ಮೂಲಕ ಸಮುದ್ರದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರೆ, ವ್ಯವಸಾಯದಲ್ಲಿ ಮೊಯ್ಲಿ, ಪೂಜಾರಿ, ಮೂಲ್ಯರು, ಬ್ರಾಹ್ಮಣ, ಜೈನ, ಶೆಟ್ಟಿ, ಗೌಡ, ಕ್ರೈಸ್ತ ಮತ್ತು ಮುಸಲ್ಮಾನ ಹೀಗೆ ಒಬ್ಬರಿಗೊಬ್ಬರು ಆಧರಿತರಾಗಿ ಜೀವನ ನಡೆಸುವುದು ಇಲ್ಲಿಯ ವಿಶೇಷತೆಯೇ ಅಗಿದೆ . ಕೆಲವೊಂದು ವಿಷಯಗಳು ಮನುಷ್ಯರನ್ನು ತನ್ನ ಮಾನವ ಚೌಕಟ್ಟಿನ ವಲಯದಿಂದ ಮಾನವೀಯತೆ ಮೀರಿ ವತರ್ಿಸುವಂತೆ ಮಾಡುವುದು ವಿಪಯರ್ಾಸವಾಗಿದೆ. ದೇವರು ಎಂಬ ಹೆಸರಿನಲ್ಲಿ ಪ್ರಪಂಚದಲ್ಲಿ ಈವರೆಗೆ ಸುರಿದಷ್ಟು ರಕ್ತ ಪ್ರಾಯಶಃ ಬೇರೆ ಯಾವುದೆ ಕಾರಣಕ್ಕೂ ಸುರಿದಿರಲಾರದು. ಮನುಷ್ಯನ ಇನ್ನೂ ಬೇಕೆಂಬ ಬಯಕೆಯು ಎಲ್ಲೆ ಮೀರಿದಾಗ ಮಾನವ ಸಂಬಂಧಗಳನ್ನು ಮುರಿಯಲು ಹೇಸಲಾರ.

ಕರಾವಳಿಯ ಜನರಲ್ಲಿ ದೈವ ನಂಬಿಕೆಯೇ ಪ್ರಧಾನ,ಹಲವಾರು ದೈವ ದೇವರುಗಳ ಗುಡಿಗಳು, ಚಾವಡಿಗಳು, ಜೀಣರ್ೋದ್ಧಾರ ಹೊಂದಿವೆ. ಜಾತ್ರೆಗಳು, ಸಾಂಸ್ಕ್ರತಿಕ ಆಚರಣೆಗಳು ವಿಜೃಂಭಿಸುತ್ತಾ ಬರುತ್ತಿವೆ. ಇಂತಹ ಒಂದು ಗುತ್ತಿನ ಮನೆತನದಲ್ಲಿ ಶ್ರಿಮಂತಿಕೆಯನ್ನು ಹೊಂದಿರುವ ಜನರಲ್ಲಿಭವಾನಿ ಶೆಟ್ಟರು ಒಬ್ಬರು. ನ್ಯಾಯ ಹೇಳುವುದಕ್ಕೆ, ಒಕ್ಕಲು ಕೂರಿಸುವುದಕ್ಕೂ ಏಳಿಸುವುದಕ್ಕೂ ಹೆಸರುವಾಸಿಯಾದವರು. ಶೆಟ್ಟರೆಂದರೆ ಸಾಕು ಊರೇ ನಡುಗುತ್ತಿತ್ತು. ಎದುರು ಮಾತನಾಡುವ ಒಬ್ಬನಿಗೂ ಉಳಿಗಾಲವಿಲ್ಲ. ಒಕ್ಕಲಿನ ಆಳಾಗಿರಲಿ, ಪಟೇಲರ ಬಂಟನೇ ಅಗಿರಲಿ ಎರಡು ಒಂದೆ. ಊರಿನ ಜನರಿಗೆ ಶೆಟ್ಟರ ಮಾತೆ ವೇದವಾಕ್ಯ. ಪ್ರಶ್ನಿಸುವ ಧೈರ್ಯ ಒಬ್ಬನಿಗೂ ಇಲ್ಲ. ಹೆಚ್ಚಾಗಿ ಅವಿದ್ಯಾವಂತರಿರುವ ಊರು ಅದು. ಆದರೆ ಭೋಜ ಕೂಲಿನಾಲಿ ಮಾಡಿ ಶಾಲೆಗೆ ಹೋಗಿ ನಾಲ್ಕನೆ ಕ್ಲಾಸು ಪಾಸುಮಾಡಿದ್ದ. ಮೊದಲೆ ಅವಿದ್ಯಾವಂತರಿರುವ ಹಳ್ಳಿಯದು. ಇನ್ನೂ ದೇವರ ಹೆಸರಿನಲ್ಲಿ ಹಣ ಮಾಡುವುದೆಂದರೆ ಅದನ್ನು ಕೇಳಬೇಕೆ. ವಿದ್ಯಾವಂತರಿಗೆ ವಿಚಾರಶೀಲತೆ ಇಲ್ಲವೆಂದಮೇಲೆ ಇನ್ನೂ ಅವಿದ್ಯಾವಂತರು ವಿಮಶರ್ಿಸಲು ಹೇಗೆ ಸಾಧ್ಯ? ದೈವದ ಭಯವು ಅವರನ್ನು ಹೆದರಿಸದೆ ಬಿಟ್ಟೀತೇ. ಹಳ್ಳಿಯ ಜನರೆಂದ ಮೇಲೆ ಗುತ್ತಿನ ಶೆಟ್ಟರು ಬಿಡುವುದುಂಟೆ? ಅದರು ಕೆಲವರು ಪ್ರಶ್ನೆಮಾಡುತ್ತಾರೆ. ಶೆಟ್ಟರು ಆಗರ್ಭ ಶ್ರೀಮಂತರಾದ ಕಾರಣ ಊರಿನ ಎಲ್ಲಾ ಧಾಮರ್ಿಕ ಉಸ್ತುವಾರಿಯ ಹೊಣೆ ಅವರೆ ಹೊರುತ್ತಿದ್ದರು. ಲಾಭವಿಲ್ಲದೆ ಹೊಣೆ ಹೊತ್ತುಕೊಳ್ಳುವ ಜಾಯಮಾನ ಶೆಟ್ಟರದಲ್ಲ. ಅವರ ಎಲ್ಲಾ ವಿಚಾರಗಳನ್ನು ಒಕ್ಕಲಿನ ಮೋಂತುವನ್ನು ಕೇಳಿದರೆ ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಾನೆ.

  ಊರಿನ ಜಾತ್ರೆಗೆ ಇನ್ನೂ ಎರಡು ದಿನಗಳಷ್ಟೆ ಬಾಕಿ ಉಳಿದಿತ್ತು, ಅದರ ಭರ್ಜರಿ ತಯಾರಿಗಾಗಿ ಜಾತ್ರೆ ನಡೆಯುವ ಮೈದಾನದ ಸುತ್ತಲು ಕಂಬಗಳನ್ನು ನೆಡಲಾಗಿತ್ತು. ಮೈದಾನದ ಇಕ್ಕೆಲಗಳಲ್ಲಿ ನಾಯಿ ಕೊಡೆಗಳಂತೆ ಚಿಕ್ಕ ಪುಟ್ಟ ಅಂಗಡಿಗಳು ವ್ಯಾಪಾರಕ್ಕೆ ಸಜ್ಜುಗೊಳ್ಳುತ್ತಿದ್ದವು. ಒಕ್ಕಲ ಮಕ್ಕಳು ಸಹ ಜಾತ್ರೆಗಾಗಿ ಮೈ ಮರಿದು ದುಡಿಯುತ್ತಿದ್ದರು. ಈ ಬಾರಿ ಹೆಚ್ಚು ಜನರು ಬಾಗವಹಿಸುವ ನಿರೀಕ್ಷೆ ಶೆಟ್ಟರದು. ಬಂದ ದೇಣಿಗೆಯನ್ನು ಲೆಕ್ಕ ಹಿಡಿದರೆ ಮೂರು ಜಾತ್ರೆಯನ್ನು ನಡೆಸಬಹುದಿತ್ತು. ಶೆಟ್ಟರ ಗುಟ್ಟು ಪ್ರಶ್ನಿಸುವಂತಿಲ್ಲ, ಉಳಿಗಾಲವು ಇಲ್ಲ. ಇತ್ತ ಕಡೆ ಮೈ ಬಾಗಿಸಿ ದುಡಿದರೆ ಮಾತ್ರ ಉದರ ತಂಪಾಗಿಸಲು ಸಾಧ್ಯ ಎನ್ನುವ ದಿನಚರಿ ಭೋಜನದು. ಎಂದಿನಂತೆ ಅಂದು ಸಹ ಮಗಳು ಜಲಜಳನ್ನು ಹೆಗಲ ಮೇಲೆ ಕೂರಿಸಿ ಮೂರು ಸುತ್ತು ಹೊಡೆದು ಆಕೆಯೊಡನೆ ಸ್ವಲ್ಪ ಸಮಯವನ್ನು ಕಳೆದು ಮಡದಿ ಸರಸು ಕಟ್ಟಿಕೊಟ್ಟ ಬುತ್ತಿಯ ಗಂಟನ್ನು ಕೈಯಲ್ಲಿ ಹಿಡಿದು ತೋಟದ ಕೆಲಸಕ್ಕೆ ಭಟ್ಟರ ಮನೆಗೆ ಹೊರಟು ಹೋದ .ದಾರಿ ಮಧ್ಯದಲ್ಲಿ ಗುತ್ತಿನ ಶೆಟ್ಟರ ನಂಬಿಕೆಯ ಆಳು ಶಿವ ಸಿಕ್ಕಿ ಮಾತನಾಡುತ್ತಾ " ನಿನ್ನ ಕುರಿತಾಗಿ ಗುತ್ತಿನ ಶೆಟ್ಟರು ಏನೋ ಗೌಪ್ಯವಾಗಿ ಚಚರ್ಿಸುತ್ತಿದ್ದಾರೆಂದು" ಹೇಳಿದ. ಭೋಜ ಮಾತ್ರ ಶಿವನ ಮಾತಿಗೆ ತಲೆ ಕೆಡಿಸಿಕೊಳ್ಳದೆ ದೈವವು ಕಾಪಾಡುತ್ತದೆ ಎನ್ನುವ ಹುಚ್ಚು ಧ್ಯೆರ್ಯದಿಂದ ಹೊರಟುಹೋದ. ಶೆಟ್ಟರ ಮನೆಯಲ್ಲಿ  ಜಾತ್ರೆಗೆ ಭಾರೀ ತಯಾರಿಗಳು ಭರಾಟೆಯಿಂದ ನಡೆಯುತ್ತಿತು. ಮನೆಯ ಆಳುಗಳು ಇರುವೆಗಳಂತೆ ಅತ್ತಿಂದಿತ್ತ ಓಡಾಡುತ್ತಾ ಇದ್ದರು. ಭೋಜನ ಮನೆಯಲ್ಲಿಯು ಇದೆ ಸ್ಥಿತಿ. ಹೆಂಡತಿ ಸರಸು ಬೆಳಗಿನಿಂದಲೆ ಮನೆಯನ್ನು ಶುಚಿಗೊಳಿಸಿ ಪಾತ್ರೆಗಳನ್ನು ಬೆಳಗಿಸಿ ಒಪ್ಪವಾಗಿ ಜೋಡಿಸಿಟ್ಟಳು. ಮನೆಯ ಅಂಗಳವನ್ನು ಗುಡಿಸಿ,ಸಗಣಿ ಸಾರಿಸಿ ಅಂದವಾಗಿಸಿದಳು. ಸಂಜೆಯಾದದ್ದು ತಿಳಿಯದೆ ಹೋದಾಗ ಹೊತ್ತು ಮೀರಿ ಸೂರ್ಯ ಪಡುವಣದ ಕಡೆಗೆ ಹೊರಟು ಹೋದ.

  ಸೂರ್ಯನೇನೊ ಪಡುವಣಕ್ಕೆ ಸಾಗಿ ಮನೆ ಸೇರಿದ. ಅದರೆ ಕಿಟ್ಟುಭಟ್ಟರ ಮನೆಗೆ ಕೆಲಸಕ್ಕೆ ಹೋದ ಭೋಜ ಮಾತ್ರ ಇನ್ನೂ ಮರಳಿ ಗೂಡು ಸೇರಿರಲಿಲ್ಲ. ಅವನೆಂದೂ ಅಷ್ಟು ತಡವಾಗಿ ಮನೆ ಸೇರುವವನಲ್ಲ. ಕೆಲಸಕ್ಕೆ ಹೋದ ಪತಿ ಸಂಜೆ ಕಳೆದು ರಾತ್ರಿಯಾದರೂ ಮನೆ ತಲುಪದಿರುವುದನ್ನು ಕಂಡು ಮಡದಿ ಸರಸು ಗಾಬರಿಗೊಂಡಳು. ಪಕ್ಕದ ಕೆಲವು ಒಕ್ಕಲುಗಳಲ್ಲಿಯು ವಿಚಾರಿಸಿದಳು. ರಾತ್ರಿಯಿಡಿ ಕಾದರೂ ಅವನು ಬರುವ ಯಾವ ಸುಳಿವು ಇರಲಿಲ್ಲ.ಮಗಳು ಜಲಜಳನ್ನು ಎತ್ತಿಕೊಂಡು ನಸು ಬೆಳಕಿನಲ್ಲಿಯೆ ಕಿಟ್ಟು ಭಟ್ಟರ ಮನೆ ತಲುಪಿದಳು. ಭಟ್ಟರನ್ನು ಕೇಳಿದರೆ ಭಟ್ಟರದ್ದು ಒಂದೆ ಉತ್ತರ." ಅಂವ ನೆನ್ನೆ ಸಾಯಂಕಾಲವೆ ಕೆಲ್ಸ ಮುಗ್ಸಿ ಹೋದ". ಎಲ್ಲಿಗೆ ಹೋಗಿರಬಹುದೆಂಬುದು ಸರಸುವಿಗೂ ಯಕ್ಷಪ್ರಶ್ನೆಯಾಗಿತ್ತು.

   ಭೋಜ ಕಾಣೆಯಾದ ಸುದ್ದಿ ಇಡೀ ಊರಿಗೆ ಕಾಡ್ಗಿಚ್ಚಿನಂತೆ ಹರಡಿತು. ಜನರು ಭಾರಿ ಅತಂಕಕ್ಕಿಡಾದರು, ಹಳ್ಳಿಯ ಹುಡುಗರೆಲ್ಲರು ಒಟ್ಟಾಗಿ ತೋಟ, ಗುಡ್ಡ, ಹಳ್ಳ, ಗದ್ದೆ ಹೀಗೆ ಎಲ್ಲಾ ಕಡೆ ಹುಡುಕತೊಡಗಿದರು. ಸುತ್ತ -ಮುತ್ತಲ ಹಳ್ಳಿಗಳಿಗೂ ಹೇಳಿ ಕಳುಹಿಸಿದರು. ಅದರೆ ಯಾವ ಕಡೆಯಿಂದಲು ಪ್ರತಿಕ್ರಿಯೆ ಬರಲಿಲ್ಲ. ಭೋಜನ ಸುಳಿವು ಸಿಗಲಿಲ್ಲ. ಸಂಜೆಯ ಸಮಯ ಭೋಜ ಕಾಣೆಯಾದ ಬಗ್ಗೆ ಚಚರ್ೆಮಾಡುತ್ತಾ ಜಾತ್ರೆಯ ಕೊನೆಯ ದಿನದ ತಯಾರಿಯ ಕೆಲಸ ಮುಗಿಸಿ ನಾಲ್ಕೈದು ಜನರು  ನಡೆದು ಬರುತ್ತಿದ್ದರು. ಅವರು ಹೆಚ್ಚೇನು ದೂರ ಬಂದಿರಲಿಲ್ಲ. ಜಾತ್ರಯ ಸ್ಥಳದಿಂದ ಕೂಗಳತೆಯ ದೂರವಿರಬಹುದು, ಅಷ್ಟರಲ್ಲಿಯೇ ಅವರಲೊಬ್ಬ ಅದು ನಮ್ಮ ಭೋಜನಲ್ಲವೆ ಎಂದು ಕಿರುಚಿ ಹೇಳಿದಾಗ ಎಲ್ಲರು ಗಾಬರಿಯಿಂದ ಆ ಕಡೆ ನೋಡಿದರು. ಇವರ ಸದ್ದು ಗದ್ದಲಕ್ಕೆ ಅಕ್ಕ ಪಕ್ಕದ ಮನೆಯವರು ಓಡಿ ಬಂದರು. ಊರಿನ ದೈವದ ಜಾತ್ರೆ ನಡೆಯುವ ಮೈದಾನದ ಬದಿಯ ದೊಡ್ಡ ಹಲಸಿನ ಮರದಡಿಯಲ್ಲಿ ಭೋಜ ಅನಾಥ ಹೆಣವಾಗಿ ಬಿದ್ದಿದ್ದ. ಮೂಗಿನ ಹೊಳ್ಳೆಗಳಿಂದ ರಕ್ತ ಜಿನುಗಿ ಗಟ್ಟಿಯಾಗಿತ್ತು. ಕಿವಿಗಳಿಂದ ರಕ್ತ ಸೋರಿದ್ದು, ಅದೋ ಕಣ್ಣು ನೋಡು ನೀಲಿ ಬಣ್ಣಕ್ಕೆ ತಿರುಗಿದೆ, ಹೀಗೆ ಬಂದವರೆಲ್ಲರು ಹೆಣದ ಕುರಿತಾಗಿ ಒಂದೊಂದಾಗಿ ಮಾತನಾಡಲು ಪ್ರಾರಂಭಿಸಿದರು.

  ಸುದ್ದಿ ಮುಟ್ಟಿ ಮಗಳೊಡನೆ ಓಡೋಡಿ ಬಂದ ಸರಸುವಿಗೆ ಕಾಣ ಸಿಕ್ಕಿದ್ದು ಗಂಡನ ಆನಾಥ ಶವ. ಮಗಳು ಮಾತ್ರ ಯಾವುದರ ಪರಿವೆ ಇಲ್ಲದೆ ಆಸರೆಯೊಂದನ್ನು ಕಳೆದುಕೊಂಡದರ  ದುಃಖವಿಲ್ಲದೆ ಕುತೂಹಲದಿಂದ ನೋಡುತ್ತಾ ಮೌನಿಯಾಗಿದ್ದಳು. ಭೋಜ ಸತ್ತರೇನಂತೆ ಜಾತ್ರೆ ನಿಲ್ಲುವುದೆ! ಜೀವ ಇರುವವರು ಜೀವನ ನಡೆಸಬೇಕಲ್ಲವೆ, ಅವನ ಭೀಕರ ಸಾವು ಜನರಲ್ಲಿ ದೈವದ ಭಯವನ್ನು ಹೆಚ್ಚಾಗಿಯೇ ಮೂಡಿಸಿತು. ಅಂದು ಜಾತ್ರೆಗೆ ಹಿಂದೆಂದಿಗಿಂತಲು ಬಹುಸಂಖ್ಯೆಯಲ್ಲಿ ಜನರು ಸೇರಿದ್ದರು.  ಜಾತ್ರೆಯ ತುಂಬಾ ಬಾರಿ ಗುಸು ಗುಸು ಮಾತು ಕೇಳಿ ಬರುತ್ತಿತ್ತು. ಜನರು ಅಲ್ಲಲ್ಲಿ ಗುಂಪು ಸೇರಿ ಚಚರ್ಿಸುತ್ತಿದ್ದರು. ಅದರೆ ಗುತ್ತಿನ ಶೆಟ್ಟರು ಮಾತ್ರ ಯಾವ ಬೇಸರವು ಇಲ್ಲದೆ ಲಗು- ಬಗೆಯಿಂದ ಓಡಾಡುತ್ತಿದ್ದರು. ಮೀಸೆಯಡಿಯ ನಗು ಅಂದು ತನ್ನ ರಂಗನ್ನು ಹೆಚ್ಚಿಸಿತ್ತು. ಜಾತ್ರೆಗೆ ಬಂದ ಪ್ರತಿಯೊಬ್ಬನ ಬಾಯಲ್ಲು ಒಂದೆ ಮಾತು " ಭೋಜ ದೈವದ ಶಾಪಕ್ಕೆ ಸತ್ತನಂತೆ! " ದೈವದ ಎದುರಿಗೆ ಮಾತನಾಡಿದವನಿಗೆ ಉಳಿವುಂಟೋ? ಎಂದು ಮಾತನಾಡುತ್ತಿದ್ದರೆ ಶೆಟ್ಟರ ಮುಖದಲ್ಲಿ ಮತ್ತೆ ಮತ್ತೆ ಮಿಂಚಿನ ನಗೆಯೊಂದು ಮೂಡಿ ಮರೆಯಾಗುತ್ತಿತ್ತು.


ಕರಾವಳಿ ಲೇಖಕಿಯರ-ವಾಚಕಿಯರ ಸಂಘದ 2014ರ ಬಹುಮಾನಿತ ಕಥೆ.
ಲೋಕೇಶ್ ಕುಕ್ಕುಜೆ
ದ್ವಿತೀಯ ಎಂ ಎ (ಕನ್ನಡ )






ಸಮಾಜಶಾಸ್ತ್ರಕ್ಕೆ ಸಾಮಾಜಿಕ ಬೆಳವಣಿಗೆಯ ದೃಷ್ಠಿ ಅಗತ್ಯ

ಮಂಗಳಗಂಗೋತ್ರಿ ; ಸಮಾಜಶಾಸ್ತ್ರವು ಶುಷ್ಕ ಪಠ್ಯ ವಿಷಯವಾಗದೆ ಅದನ್ನು ಸಮಾಜದ ಬೆಳವಣಿಗೆಯ ದೃಷ್ಠಿಯಿಂದ ಅದ್ಯಯನ ಮಾಡಬೇಕು.ಈ ಸಾಮಾಜಿಕ ಪ್ರೀತಿಯ ದಾರಿಯ ಮೂಲಕ ಮಾತ್ರ ಸಾಮಾಜಿಕ ಬೆಳವಣಗೆ ಸಾದ್ಯ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ತ ಪ್ರೊ. ಗುರುಲಿಂಗಯ್ಯ ಅವರು ಅಭಿಪ್ರಾಯ ಪಟ್ಟರು.ಅವರು ಶುಕ್ರವಾರದಂದು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ನಡೆಸುತ್ತಿರುವ ಸಮಾಜಶಾಸ್ತ್ರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜಶಾಸ್ತ್ರಕ್ಕೆ ಸಾಮಾಜಿಕ ಬೆಳವಣಿಗೆಯ ದೃಷ್ಠಿ ಅಗತ್ಯವಾಗಿದೆ. ಇದರ ಮೂಲಕ ಸಮಾಜವನ್ನು ನಾವು ಪ್ರೀತಿಸಬೇಕು.     ಸಮಾಜಶಾಸ್ತ್ರವನ್ನು ಅಭ್ಯಾಸಿಸುವವರು ಸಮಾಜವನ್ನು ಪ್ರೀತಿಸಿದರೆ ಮಾತ್ರವೆ ಅದರ ಬೆಳವಣಿಗೆ ಸಾದ್ಯ ಎಂದು ಅವರು ಹೇಳಿದರು.ವಿದ್ಯಾಥರ್ಿಗಳಿಗೆ ಸಾಮಾಜಿಕ ಜವಾಬ್ದರಿಯಿದ್ದು ಸಾಮಾಜಿಕ ಬೆಳವಣಿಗೆಯ ದೃಷ್ಠಿಯಿಂದ  ಕರ್ತವ್ಯ ನಿರತರಾಗಬೇಕು.ಸಮಾಜವನ್ನು ಪ್ರೀತಿಸುವುದರ ಜತೆಗೆ ಸೇವೆಯ ಮೂಲಕ ಅದರ ಬೆಳವಣಿಗೆಗೆ ಕಟಿಬದ್ದರಾಗಬೇಕು ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ತ ಪ್ರೊ.ಜೋಗನ್ ಶಂಕರ್ ರವರು ವಹಿಸಿದ್ದರು. ವೇದಿಕೆಯಲ್ಲಿ  ಅತಿಥಿ ಮೈಸೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ತೆ ಪ್ರೊ. ಯಶೋಧ ಹಾಗು ಡಾ. ವಿನಯ್ರಜತ್, ಡಾ. ಗೋವಿಂದ್ರಾಜ್ ಮತ್ತು ಸಬಿತಾ ಉಪಸ್ಥಿತರಿದ್ದರು. ದಿವ್ಯಕುಮಾರಿ ಸ್ವಾಗತಿಸಿ ರಶ್ಮಿತ ವಂದಿಸಿದರು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು.


ಕುಮಾರ .ಕೆ.ಎಸ್
ದ್ವಿತೀಯ ಎಂ.ಎ.ಸಮಾಜ ಶಾಸ್ತ್ರ ವಿಭಾಗ

   
ಹೆಜ್ಜೆ ಗುರುತು-ಮಂಗಳ ಅಂಗಳದಲ್ಲಿ ಭಾರತ 

24-9-2014 ರಂದು ಭಾರತ ಒಂದು ಮೈಲುಗಲ್ಲು ತಲುಪಲಿದೆ. ಈ ದಿನವು ಭಾರತಕ್ಕೆ ಒಂದು ಐತಿಹಾಸಿಕ ದಿನವಾಗಲಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ISRO  ತನ್ನ ಚೊಚ್ಚಲ ಯಾನವನ್ನು ಮಂಗಳ ಗ್ರಹಕ್ಕೆ 05-11-2013 ರಂದು ಉಡಾಯಿಸಿದ್ದು ಇದು ಸೆಪ್ಟೆಂಬರ್ 24 ರಂದು ಮಂಗಳ ಗ್ರಹ ತಲುಪಲಿದೆ. ಈ ವರೆಗೂ ಯಾವುದೇ ತಾಂತ್ರಿಕ ದೋಷಗಳಿಲ್ಲದೆ ಸುಗಮವಾಗಿ ಸಾಗತ್ತಿರುವ ಈ ಯಾನ ಇನ್ನು ಕೆಲವೇ ಗಂಟೆಗಳಲ್ಲಿ ಮಂಗಳ ಕಕ್ಷೆ ತಲುಪಲಿದೆ ಎಂದು ISRO  ಅಧ್ಯಕ್ಷ ವಿ.ರಾಧಾಕೃಷ್ಣನ್ ತಿಳಿಸಿದ್ದಾರೆ.
'Mars Orbiter Mission'' ಎಂದು ನಾಮಕರಣಗೊಂಡ ಈ ಯಾನ, ತನ್ನೊಂದಿಗೆ ಐದು ಉಪವಸ್ತುಗಳನ್ನು ಹೊಂದಿದೆ (1 ಕ್ಯಾಮರ, 2 ಸ್ಪೆಕ್ಟ್ರೋಮೀಟರ್, 1 ರೇಡಿಯೋಮೀಟರ್ ಮತ್ತು 1 ಫೋಟೋಮೀಟರ್). ಈ ಐದು ಉಪವಸ್ತುಗಳ ಮುಖಾಂತರ ಯಾನವು ಮಂಗಳ ಗ್ರಹದ ಸಮಗ್ರ ವಿಶ್ಲೇಷಣೆ ಮಾಡಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 05-11-2013 ರಂದು PSLV-C25 ಅಂತರಿಕ್ಷ ವಾಹನದ ಮೂಲಕ Mars Orbiter Mission ಯಾನವನ್ನು ಶ್ರೀಹರಿಕೋಟದಿಂದ ಹಾರಿಸಲಾಗಿದ್ದು ಇಂದು ತನ್ನ ಗುರಿಯನ್ನು ತಲುಪಲು ಕೆಲವೆ ಗಂಟೆಗಳು ಉಳಿದಿರಲು ಈ ಸಂಗತಿ ವಿಜ್ಞಾನಿಗಳ ಹಾಗು ಖಗೋಳ ಶಾಸ್ತ್ರಜ್ಞರೆಲ್ಲರ ಮನಸ್ಸುಗಳಲ್ಲಿ ಕುತೂಹಲ ಹಾಗು ರೋಮಾಂಚನ ಮೂಡಿಸಿದೆ. ಯಾನ ಮಂಗಳ ಕಕ್ಷೆ ಯಶಸ್ವಿಯಾಗಿ ತಲುಪಿದಲ್ಲಿ, ಭಾರತ ಮಾತೆಯ ಕಿರೀಟಕ್ಕೆ 2 ಯಶಸ್ವಿನ ಗರಿಗಳು ಸೆರಿದಂತಾಗುತ್ತದೆ.
1. ಭಾರತದ ಮೊದಲ ಯಶಸ್ವಿ ಅಂತರ್ ಗ್ರಹ ಯಾನ ಇದು ಆಗಲಿದೆ.
2.    Asia  ಖಂಡದಲ್ಲೇ ಮಂಗಳ ಗ್ರಹಕ್ಕೆ ಮೊದಲ ಬಾರಿಗೆ ಯಾನವನ್ನು ಕಳಿಸಿದ ಕೀರ್ತಿ ಭಾರತ ದೇಶದ್ದಾಗಲಿದೆ.
 ಬಾಹ್ಯಾಕಾಶ ವಿಜ್ಞಾನದ ಇತಿಹಾಸದಲ್ಲಿಯೇ ಭಾರತ ಕಾಣಲಿರುವ ತನ್ನ ಚೊಚ್ಚಲ ಯಾನದ ಯಶಸ್ವಿ ಉಡಾವಣೆಯ ಈ ಹೆಜ್ಜೆ ಗುರುತು ನಿಜಕ್ಕೂ ಅವಿಸ್ಮರಣೀಯ. . Hats off India


(ಯಶಸ್ವಿ ಮಂಗಳ ಕಕ್ಷೆ ತಲುಪುವ ಮೊದಲು ಬರೆದ ಲೇಖನ )


ಉಮ್ಮೆ ಸಲ್ಮಾ ಎಂ,
ಗಣಕ ವಿಜ್ಞಾನ ವಿಭಾಗ

ಸರ್ಕಾರ ಮತ್ತು ಪರಿಹಾರ
 ಇಂದು ನಮ್ಮ ದೇಶ ಹೊಸ ಸಕರ್ಾರದ ಆಡಳಿತದ ಚುಕ್ಕಾಣಿಯಲ್ಲಿ ನಡೆಸಲ್ಪಡುತ್ತಿದೆ. ಹೊಸ ನಿರೀಕ್ಷೆಗಳ ಭರವಸೆಯೊಂದಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಎಲ್ಲಾ ರಂಗದಲ್ಲೂ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಬ್ಯಾಂಕ್ ಖಾತೆಗಳು, ಗ್ರಾಮ ಜನೆಗಳು ಇನ್ನೂ ಹಲವಾರು ಯೋಜನೆಗಳನ್ನೂ ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನವನ್ನು ನಡೆಸುತ್ತಿದೆ. ಇವುಗಳಿಗೆಲ್ಲಾ ಕಿರೀಟ ಎಂಬಂತೆ  ವಿಜ್ಞಾನದಲ್ಲಿ ಸಾಧಿಸಿದ ಯಶಸ್ಸಂತೂ ಇಡೀ ವಿಶ್ವವನ್ನು ನಿಬ್ಬೆರಗಾಗುವಂತೆ ಮಾಡಿದೆ. ಹಲವಾರು ವರ್ಷಗಳ ಅವಿರತ ಪ್ರಯತ್ನದಿಂದ ವಿಶ್ವದಲ್ಲಿಯೇ ಕಡಿಮೆ ಖಚರ್ಿನಲ್ಲಿ ಮಂಗಳನ ಅಂಗಣಕ್ಕೆ ಹೋದ ಮೊದಲ ದೇಶವೆಂದೂ ಈವರೆಗೆ ಮಂಗಳನಲ್ಲಿಗೆ ಹೋದ ನಾಲ್ಕನೇ ದೇಶವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಹೊಸ ಹೊಸ ಆಥರ್ಿಕ ಯೋಜನೆಗಳು, ಹೂಡಿಕೆಗಳು, ದೇಶ ವಿದೇಶಗಳಲ್ಲೂ ತನ್ನನ್ನು ತೊಡಗಿಸಿಕೊಳ್ಳುವ ಪ್ರಯತ್ನ ಉತ್ತಮವಾಗಿದೆ. ಇದು ಒಂದು ಭಾಗವಾದರೆ, ಇನ್ನೊಂದು ಭಾಗವಾಗಿ ದೇಶವು ಎದುರಿಸುತ್ತಿರುವ ಸಮಸ್ಯೆಗಳೂ ಕೂಡ ನಮ್ಮ ಮುಂದಿವೆ.
ಪ್ರಸ್ತುತ ದಿನಗಳಲ್ಲಿ ನಮಗೆ ಕಂಡುಬರುವ ಎರಡು ಮುಖ್ಯ ಸಮಸ್ಯೆಗಳೆಂದರೆ, ಒಂದು ನಿರಂತರವಾಗಿ ಗಡಿಯಲ್ಲಿ ದಾಳಿ ನಡೆಸುವ ಪಾಕಿಸ್ತಾನ. ಇನ್ನೊಂದು ದೇಶದೊಳಗೆ ಪ್ರಕೃತಿ ವಿಕೋಪದ ದಾಳಿಗೆ ಒಳಗಾಗಿ ನಲುಗುತ್ತಿರುವ ಆಂಧ್ರಪ್ರದೇಶ. ಪಾಕಿಸ್ತಾನದ ಜೊತೆಗೆ ಈವರೆಗೆ ನಡೆಸಿದ ಮಾತುಕತೆಗಳು ಎಲ್ಲಿಯೂ ಫಲಪ್ರದವಾಗಿ ಕಂಡುಬಂದಿಲ್ಲ. ಬಾಯಿಮಾತಿನಲ್ಲಿ ಎಲ್ಲವನ್ನು ಒಪ್ಪಿಕೊಳ್ಳುವ ಪಾಕಿಸ್ತಾನ ಹಿಂದಿನಿಂದ ತನ್ನ ದಾಳಿಯನ್ನು ಮುಂದುವರೆಸುತ್ತಲೇ ಬಂದಿದೆ. ಭಾರತವು ಇದಕ್ಕೆ ಪ್ರತಿಯಾಗಿ ಕಾಶ್ಮೀರದ ಗಡಿಯ ಜನರನ್ನು ಸ್ಥಳಾಂತರಿಸಿ ಯುದ್ಧಕ್ಕೆ ಸಜ್ಜಾಗುವ ಸೂಚನೆಗಳನ್ನು ನೀಡುತ್ತಿದೆ.ಆದರೆ ಈಗ ನಮ್ಮೆದುರು ಇರುವುದು ಯುದ್ಧದ ಬಗ್ಗೆ ಸಕರ್ಾರದ ನಿಧರ್ಾರವೇನು? ಎಂಬುದು. ಇದು ಬಹು ಮುಖ್ಯ ಒಂದು ವಿಚಾರ.
ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ನಿಂತಿರುವ ಭಾರತವು ಇಂದು ಯುದ್ಧಕ್ಕೆ ಹೆದರಿ ಕುಳಿತಿದೆ ಎಂದಾಗಲಿ, ಯುದ್ಧ ನಡೆಸಲು ಅಸಮರ್ಥವಾಗಿದೆ ಎಂಬುದಾಗಲಿ,ಇದರ ಅರ್ಥವಲ್ಲ. ಆದರೆ, ಕೇವಲ ಭಾರತವು ಮಾತ್ರವಲ್ಲ ಪಾಕಿಸ್ತಾನವು ಅದೇ ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ನಮ್ಮೊಂದಿಗೆ ನಿಂತಿದೆ ಎಂಬ ಸತ್ಯವನ್ನು ನಾವು ಮರೆಯುವಂತಿಲ್ಲ. ಆದ್ದರಿಂದ ಇಲ್ಲಿ ಬೇಕಾಗಿರುವುದು ಯುದ್ಧವಲ್ಲ ಪರಿಹಾರ.
ಮಾತುಕತೆಯ ಪರಿಹಾರಗಳನ್ನು ಈಗಾಗಲೆ ಬದಿಗೆ ಸರಿಸಿರುವ ಪಾಕಿಸ್ತಾನಕ್ಕೆ ಅದರ ಮಹತ್ವ ಮರೆತು ಹೋಗಿದೆ. ಆದ್ದರಿಂದ ಇಂದು ಭಾರತಕ್ಕೆ ಬೇಕಾಗಿರುವುದು ಗಡಿ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ. ಅದು ಹೇಗೆ ಎಂಬುದು ಇಲ್ಲಿ ಕಾಡುತ್ತಿರುವ ಮುಖ್ಯ ಪ್ರಶ್ನೆ. ಸಕರ್ಾರದ ಮುಂದಿರುವುದು ಸಾವಿಗೆ ಸಾವು, ಯುದ್ಧಕ್ಕೆ ಯುದ್ಧ ಎನ್ನುವ ನಿಲುವಲ್ಲ. ಬದಲಾಗಿ ಯುದ್ಧವಿಲ್ಲದೆ ನಡೆಸಬೇಕಾದ ಶಾಶ್ವತ ಪರಿಹಾರ. ಇದು ಕೇವಲ ಪಾಕಿಸ್ತಾನವಷ್ಟೇ ಅಲ್ಲ ಅದರೊಂದಿಗೆ, ಚೀನಾ, ಬಾಂಗ್ಲಾದಂತಹ ದೇಶಗಳಿಂದಲೂ ಭಾರತ ಗಡಿ ಸಮಸ್ಯೆಗೆ ಒಳಗಾಗಿದೆ.
ಪ್ರಸ್ತುತವಾಗಿ ಹುಡ್ ಹುಡ್ (ಹುದ್ ಹುದ್) ಎನ್ನುವ ಚಂಡಮಾರುತಕ್ಕೆ ಸಿಲುಕಿ ಆಂಧ್ರಪ್ರದೇಶವು ನಲುಗುತ್ತಿದೆ. ಅದರ ಪರಿಹಾರ ಕಾರ್ಯವು ಸಕರ್ಾರದ ಮುಂದಿದೆ. ಅನೇಕ ನೆನೆಗುದಿಗೆ ಬಿದ್ದಿರುವ ಈ ಹಿಂದಿನ ಒಳ್ಳೆಯ ಯೋಜನೆಗಳನ್ನು ಜಾರಿಗೊಳಿಸುವ ಒಂದು ಪ್ರಾಮಾಣಿಕ ಜವಾಬ್ದಾರಿಯೂ ಇಂದಿನ ಸಕರ್ಾರಕ್ಕೆ ಇದೆ.
 
 ಲೋಕೇಶ್ ಕುಕ್ಕುಜೆ

ಸಂಪಾದಕರು 
                                     

ಮೂರರ ಮಹತ್ವ

ಈ ಮೂವರನ್ನುಆದರದಿಂದಕಾಣು :ತಂದೆ, ತಾಯಿ, ಗುರು.
ಈ ಮೂವರ ಬಗ್ಗೆ ಚೇಷ್ಟೆ ಮಾಡದಿರು : ಹುಚ್ಚ, ಮೂರ್ಖ, ಮುದುಕ.
ಈ ಮೂರನ್ನು ನಿಯಮದಿಂದ ಮಾಡು : ಭಜನೆ, ಭೋಜನ, ವ್ಯಾಯಾಮ.
ಈ ಮೂರಕ್ಕೆ ಯಾವಾಗಲೂ ಅಂಜುತ್ತಿರು : ಸುಳ್ಳು, ನಿಂದೆ, ಕಳ್ಳತನ.
ಈ ಮೂರು ನಿನ್ನ ವಶದಲ್ಲಿರಲಿ :ಇಂದ್ರಿಯ, ಮನಸ್ಸು, ಕೋಪ.
ಈ ಮೂರನ್ನು ಕೈ ಬಿಡಬೇಡ :ಕೊಟ್ಟಮಾತು, ಪ್ರೀತಿ, ಗೆಳೆತನ.
ಈ ಮೂರರ ಬಗ್ಗೆ ನಿಗಾ ಇರಲಿ : ಮಾತು, ನಡವಳಿಕೆ, ನೀತಿ.
ಈ ಮೂರರ ಗೆಳತನ ಮಾಡಬೇಡ :ಕುಡಿಯುವುದು, ಸೇದುವುದು, ಜೂಜಾಟ.
ಈ ಮೂರಕ್ಕೆ ಮನ್ನಣೆ ನೀಡು : ವೃದ್ಧಾಪ್ಯ, ಧರ್ಮ, ಕಾಯಿದೆ.
ಈ ಮೂರನ್ನು ಗೌರವಿಸು : ಹಿರಿತನ, ಧರ್ಮ, ಕಾನೂನು.
ಈ ಮೂರನ್ನು ಅಳವಡಿಸಿ : ಪ್ರಾಮಾಣಿಕತೆ, ನಿರ್ಮಲತ್ವ, ನಿಷ್ಠೆ.
ಈ ಮೂರನ್ನು ತ್ಯಜಿಸಿ :ಚಾಡಿ ಹೇಳುವುದು, ಸೋಮಾರಿತನ, ಸುಳ್ಳು.
ಈ ಮೂರನ್ನು ಅಳವಡಿಸು :ಕರುಣೆ, ಸಂತೋಷ, ಆಸಕ್ತಿ.
ಈ ಮೂರನ್ನು ಇಟ್ಟುಕೋ :ಧೈರ್ಯ, ವಿಶಾಲ ಮನಸ್ಸು, ದಯೆ
ಈ ಮೂರು ಮಿತವಾಗಿರಲಿ : ಪ್ರೀತಿ, ಪ್ರೇಮ, ಪ್ರಣಯ.
ಈ ಮೂರರ ಸಂಬಂಧ ಗೊತ್ತಿರಲಿ : ಗೆಳತಿ, ಪ್ರೇಯಸಿ, ಪತ್ನಿ.
ಜಯಂತಿ
ದ್ವಿತೀಯ ಎಂ.ಎ.ಕನ್ನಡ

ಗಜಮುಖನ ವರ್ಣನೆ
ಗಜಮುಖನೆ ಗಣಪತಿಯೇ
ವಿಘ್ನ ವಿನಾಶಕನೆ...
ನೀಡು ತಂದೇ...ವಿದ್ಯೆಯೆಂಬ
ಜ್ಞಾನ ಬೋಧನೆ.
ಈಶ್ವರನಿಂದ ಜನಿಸಿ ಬಂದ
ಷಣ್ಮುಖನ ಸಹೋದರ ನೀ
ಪಾರ್ವತಿಯಿಂದ ಪ್ರತಿಮೆಯಾಗಿ
ಮರುಜನಿಸಿದೆ ನೀ.....
ಬಲಭಾಗಕ್ಕೆ ಸಂಪದ್ಭರಿತ ಲಕ್ಷ್ಮೀ
ಎಡಭಾಗಕ್ಕೆ ವಿದ್ಯಾಮಾತೆ ಸರಸ್ವತಿ
ಸಂಚರಿಸಲು ನಿನಗೊಂದು
ಮೂಸಿಕ ವಾಹನ
ಬಲು ಮೋಜು ನಿನ್ನ ಜೀವನಾ
ಇಷ್ಟ ವಾದ ತಿಂಡಿ
ಎಷ್ಟು ದೂರಿದ್ದರೂ ಬಿಡಲಾರದು
ನಿನ್ನ ಸೊಂಡಿ....
ನೀ ಸುರಕ್ಷತೆಗಾಗಿಯೇನೋ
ನಾಗ ಸರ್ಪವನ್ನು ಹೊಟ್ಟೆಗೆ
ಬಳಸಿಕೊಂಡೆ
ಅನಂದ ಆರ್.ಬಿ. ದ್ವಿತೀಯ ಯೋಗ ವಿಜ್ಞಾನ

 ಹನಿಗವನ
ಕನಸು
ಮನದಲ್ಲಿ ಅರಳುವುದು ಕನಸು
ವಾಸ್ತವದಲ್ಲಿ ಮುದುಡುವುದು ಕನಸು
ಎಂದೆಂದಿಗೂ ಆಗದು ನನಸು
ವ್ಯಥೆ ಪಡುವುದು ಮನಸು
ಜೀವನ
ಏಳುಬೀಳಿಗೆ ಜೀವನವಿದು
ಕಷ್ಟ-ಸುಖಗಳ ತಾಣವಿದು
ಮಧುರ ಭಾವನೆಗಳ ಸುಂದರ ಲೋಕವಿದು
ಕನಸು ನನಸಾಗಿಸುವ ರಂಗ ಭೂಮಿಯಿದು.
ಕಣ್ಣಿರು
ಹೃದಯ ನೋಯುವಾಗ
ಕಣ್ಣಲ್ಲಿ ಕಣ್ಣೀರು ಬರುತ್ತದೆ
ಕಣ್ಣಲ್ಲಿ ಕಣ್ಣೀರು ಬರುವಾಗ
ಹೃದಯ ನೋಯುತ್ತದೆ.
ಕವನ
ನಿಸರ್ಗದ ಚರಾಚರಗಳು
ಕವಿಯ ಮನಸ್ಸಿನಲ್ಲಿ
ಅರಳಿಸುವ ಭಾವನೆಗಳು
ಅಕ್ಷರ ರೂಪದಲ್ಲಿ ಜೀವ ತುಂಬಿದಾಗ
ಹುಟ್ಟುವುದೇ ಕವನ.

ಚೇತನ ಎಚ್.ಆರ್.
ಪ್ರಥಮ ಎಂ. ಎ

ನನಗೊಬ್ಬ ಅಣ್ಣನಿದ್ದಿದ್ದರೆ....


ನನಗೆ ನನ್ನ ಸ್ನೇಹಿತೆಯರನ್ನು ಕಂಡರೆ ಹೊಟ್ಟೆಕಿಚ್ಚು. ಇದೆಂತಾ ಸ್ನೇಹವಪ್ಪಾ ಅಂದುಕೊಳ್ಳಬೇಡಿ. ನಿಜವಾಗಿಯೂ ನಾವೆಲ್ಲಾ ಚೆನ್ನಾಗಿಯೇ ಇದ್ದೇವೆ. ಆದರೂ ನನ್ನ ಮನಸ್ಸಿನಲ್ಲಿ ಏನೋ ಒಂದು ಕೊರಗು. ಹಾಗಿದ್ದರೆ ಈ ರೀತಿ ಯಾಕೆ? ನನಗೆ ಅವರಂತೆ ಒಬ್ಬ ಅಣ್ಣ ಇಲ್ಲವಲ್ಲಾ ಅಂತ.
ಅಣ್ಣ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ? ಆತನೊಂದಿಗೆ ಜಗಳವಾಡುತ್ತಾ, ಬಡಿದಾಡುತ್ತಾ, ಸಿಡಿಮಿಡಿಗೊಳ್ಳುತ್ತಾ ದಿನ ಕಳೆಯುವುದರಲ್ಲೇ ಏನೋ ಖುಷಿ ಇರುತ್ತಿತ್ತು. ತಂಗಿಯಾದವಳಿಗೆ ಅಣ್ಣನಲ್ಲಿ ಎಲ್ಲವೂ ಇರುತ್ತದೆ. ಆಕೆಯ ಪಾಲಿಗೆ ಆತ ಹಿತರಕ್ಷಕನೂ ಆಗಿರುತ್ತಾನೆ, ತಂದೆಯಂತೆ ಅವಳ ಪಾಲಿನ ಜವಾಬ್ದಾರಿ ಹೊರುವವನೂ ಆಗಿರುತ್ತಾನೆ, ಜೊತೆಗೆ ಒಬ್ಬ ಒಳ್ಳೆಯ ಸ್ನೇಹಿತನೂ ಆಗಿರುತ್ತಾನೆ. ಆದ್ದರಿಂದಲೇ ಅಣ್ಣನಲ್ಲಿ ಭಯ, ಭಕ್ತಿ, ಗೌರವ, ಪ್ರೀತಿ, ಸಲುಗೆ ಎಲ್ಲವೂ ಇರುತ್ತದೆಂದು ಅನಿಸುತ್ತದೆ. ಅಣ್ಣ ಎಂಬ ಒಂದು ಸ್ಥಾನದಿಂದ ಹೆಣ್ಣು ಪಡೆಯುವ ಸಂತೋಷ ಅವರ್ಣನೀಯ.
  ಪುರಾಣಗಳಲ್ಲಿ, ಕತೆ, ಸಿನೆಮಾಗಳಲ್ಲಿ ತಂಗಿಗಾಗಿ ಸರ್ವಸ್ವವನ್ನೇ ಕೊಟ್ಟ ಅಣ್ಣಂದಿರ ಚಿತ್ರಣವನ್ನು ನೋಡಿದ್ದೇವೆ. ಅಣ್ಣನಿಗಾಗಿ ತನ್ನ ಬದುಕನ್ನೇ ಮೀಸಲಾಗಿಟ್ಟ ತಂಗಿಯನ್ನೂ ನೋಡಿದ್ದೇವೆ. ತಂಗಿಯ ತೊಟ್ಟು ಕಣ್ಣೀರಿಗೆ ಅಣ್ಣನಾದವನು ಮೃದುವಾಗುತ್ತಿದ್ದ. ತಂಗಿ ತಪ್ಪು ಮಾಡಿ ತನ್ನೊಂದಿಗೆ ಕುಳಿತುಕೊಂಡು ಅಳುತ್ತಿದ್ದರೂ ಅವಳ ಕಣ್ಣೀರೊರಸಿ ತಾನು ಸುಮ್ಮನಾಗುವ ದೃಶ್ಯ ಅವರ್ಣನೀಯ. ತಂಗಿಯ ಕಣ್ಣಿನಿಂದ ಹನಿ ಕಣ್ಣೀರು ಬೀಳದಂತೆ ತಡೆದು ಆಕೆಯನ್ನು ಸಾಂತ್ವನಗೊಳಿಸುತ್ತಾನೆ. ಮದುವೆಯಾದ ನಂತರವೂ ತಂಗಿಯ ಮೇಲಿನ ಪ್ರೀತಿ ಕಡಿಮೆಯಾಗಲಾರದು ಅನಿಸುತ್ತದೆ. ಆದರೆ ಅತ್ತಿಗೆಗೆ ಹೆದರಿ ನಾದಿನಿ(ತಂಗಿ)ಯೇ ದೂರವಾಗುತ್ತಾಳೆ.
  ಹೆಣ್ಣಿನ ಜನುಮಕೆ ಅಣ್ಣ-ತಮ್ಮರು ಬೇಕು ಎಂಬ ಜನಪದ ಉಕ್ತಿಯನ್ನು ನೆನಪಿಸಿಕೊಳ್ಳಲೇ ಬೇಕು. ಅಣ್ಣ-ತಂಗಿ ಎಂಬುದು ವಿಶಿಷ್ಟ ಪ್ರೀತಿಯ ಸಂಬಂಧ. ಕೇವಲ ರಕ್ತಸಂಬಂಧಿಗಳೇ ಆಗಬೇಕಿಲ್ಲ. ಬಾಂಧವ್ಯದ ಮೂಲಕ ಅದರ ಅನುಭವ ಪಡೆಯಲು ಸಾಧ್ಯವಿದೆ. ಗಂಡು-ಹೆಣ್ಣಿನ ಸಂಬಂಧಕ್ಕೆ ಕೇವಲ ಪ್ರೀತಿ-ಪ್ರೇಮದ ಅರ್ಥ ಕಲ್ಪಿಸಬಾರದು. ಅವರಲ್ಲೂ ಬಾಂಧವ್ಯದ ಭಾವನೆಗಳು ಇವೆ ಎಂಬುವುದನ್ನು ಅಥರ್ೈಸಿಕೊಳ್ಳಬೇಕು. ಅಣ್ಣ-ತಂಗಿಯರಂತೆ ಕಂಡು ವಾತ್ಸಲ್ಯದಿಂದ ವತರ್ಿಸಬೇಕು. ಗಂಡಾಗಲಿ ಹೆಣ್ಣಾಗಲಿ ಒಂದೇ ಮಗು ಸಾಕು ಎಂಬ ತಂದೆ ತಾಯಿಯರ ನಿಲುವು ಬದಲಾಗಬೇಕು. ಜೀವನಪೂತರ್ಿ ಅಣ್ಣ-ತಂಗಿಯ ಪ್ರೀತಿ ಸಿಗದೆ ಮೌನವಾಗಿರುವುದು ಅನಿವಾರ್ಯವಾಗದಿರಲಿ......ಇತಿ ನಿಮ್ಮ ತಂಗಿ...
ಶ್ವೇತಾಶ್ರೀ ದ್ವಿತೀಯ ಎಂ.ಎ. ಕನ್ನಡ

ಚುಟುಕು-ಗಳು

ಕೊರೆಯುವ ಚಳಿಗೆ
ಇಳೆ ಹೊದ್ದ ಕಂಬಳಿ

ತಿರುಳು ತೊಗಟೆಯ ಮರೆತು
ಕೊರೆದ ಹುಳುವನು ಮೆಚ್ಚಿ
ತಾನದಕೆ ಮರುಳಾಯಿತು

ಬಕ ಮಹಷರ್ಿಯ
ತಪವ ಕಂಡು ಮೀನು
ಕಾಲು ಮುಟ್ಟಿ ನಮಸ್ಕರಿಸಿ
ಉದರ ಪೂಜೆಗೆ

ಎಲೆಯಂಚಿನ ಕಂಬನಿ
ಕಂಡು ಬಿಕ್ಕಳಿಸಿತು
ಕಣ್ಣಂಚಿನ ಕಂಬನಿ
ಒಂದು ಕಥೆ

ಮರ ಎಲೆ ತುಂಬಿ
ಹಸಿರಾಯಿತು
ಹೂವು ದುಂಬಿಗೆ
ಬಸಿರಾಯಿತು
ಕಾಯಿ ಮಗುವಾಗಿ

ದಿಗಂತ
ಭೂಮಿ ಬಾನಿನ
ಪ್ರೇಮದ ಕಾಣಿಕೆ
ಧೀರಜ್ ಅಮೀನ್
ಪ್ರಥಮ ಎಂ.ಸಿ.ಜೆ

ಅಸಹಾಯಕತೆ
ಅರೆ  ಬೆತ್ತಲೆ ಮೈ ಅವಳದ್ದು,
ಅವನ ಕಳ್ಳ ನೋಟ ಬೀಳದಿರಲೆ೦ದು
ಸುತ್ತಿಕೊ೦ಡಳು ಸೆರಗನ್ನ...
ಒಣಗಿಹೋದ ಎದೆಹಾಲನ್ನು ಚೀಪುವ ಸದ್ದು,
ಅವನ ಕಿವಿಗೆ ಬೀಳದಿರಲೆ೦ದು
ಅಪ್ಪಿಕೊ೦ಡಳು ಕ೦ದಮ್ಮನ...
ಅವಳ೦ತೂ ಕಾಸಿಗೆ ಮಾರಲ್ಪಟ್ಟ ಹೂವ೦ತೆ..
ಮಕರ೦ದ ಹೀರಿದ ದು೦ಬಿಗಳು ನೂರಾರು,
ಆಕೆ ಮಡಿಲಲ್ಲಿರುವ ಮೊಗ್ಗು ಹೆಣ್ಣ೦ತೆ..
ದು೦ಬಿಯ ಕಣ್ಣಿ೦ದ ಅದನ್ನ ರಕ್ಶಿಸುವವರಾರು??
ಕಾಮುಕ ವ್ಯಾಪಾರಿ ಕಸಿದುಕೊ೦ಡ ಅವಳ ಮಡಿಲಿ೦ದ ಕ೦ದಮ್ಮನ,
ರಕ್ಕಸ ಗಾತ್ರದ ದು೦ಬಿಗಳ ಮುತ್ತಿಗೆಗೆ,
ಬಾಡಿಹೋಯಿತು ಮೊಗ್ಗು ಅರಳುವ ಮುನ್ನ...
ಗ್ರೆವಿಟ ದಾ೦ತಿ,
ದ್ವಿತೀಯ ಎಂ.ಕಾಂ


ಸತ್ತರೂ ಬದುಕಿದೆನು 


ನೋಡುತಿಹೆನು ನಾನು ಮರಳಿ ನನ್ನೀ ಪ್ರಪಂಚವನ್ನು
ಮೊದಲಿಗಿಂತಲೂ ಬಹಳ ಅಂದವಾದ ಈ ಭುವಿಯನ್ನು
 ನಾನಂದು ಕಂಡ ಕನಸುಗಳೆಲ್ಲಾ ನನಸಾಗುತ್ತಿದೆ ಇಂದು
ಸಂತೋಷವಾಯಿತೆನಗೆ ಸತ್ತರೂ ಬದುಕಿದೆನಲ್ಲಾ ಎಂದು

ಕಣ್ಣು ಮುಚ್ಚುವ ಮೊದಲು ನಾನುಕೂಡ ಓರ್ವ ದೇಶಭಕ್ತ
ಇಂದಿಗೂ ದೇಶಾಭಿಮಾನ ತೋರ್ಪಡಿಸುತ್ತಿದೆ ನನ್ನೀ ಬಿಸಿರಕ್ತ
ನನ್ನದೇ ರಕ್ತ ನನ್ನ ರಕ್ತವಾಗಿ ಉಳಿಯದೆ ಪರರಿಗೂ ಸಹಾಯವಾಗುತ್ತಿದೆ
ಇಂದು ಸಂತೋಷವಾಯಿತೆನಗೆ ಸತ್ತರೂ ಬದುಕಿದೆನಲ್ಲಾ ಎಂದು

ನನ್ನ ಆ ರಕ್ತದಾನ,ನೇತ್ರದಾನಗಳಿಂದು
ಅಂದುಕೊಂಡೆನು ಅನ್ನದಾನಕ್ಕಿಂತಲೂ ಶ್ರೇಷ್ಠವೆಂದು
 ನಾನಂದು ಮಾಡಿದ ರಕ್ತದಾನ,ನೇತ್ರದಾನಗಳಿಂದ
ಸಂತೋಷವಾಯಿತೆನಗೆ ಸತ್ತರೂ ಬದುಕಿದೆನಲ್ಲಾ ಎಂದು

ಮಾಡೋ ಮಾನವ ಮಹಾದಾನ ನೇತ್ರದಾನವ
ನೀಡೋ ಮಾನವ ಶ್ರೇಷ್ಠದಾನ ರಕ್ತದಾನವ
ಅಪರ್ಪಿಸೊ ದೇಶಕ್ಕೆ ನಿನ್ನೀ ಶರೀರದಾನವ
ಮಾನವನಾಗಿ ಹುಟ್ಟಿ ಏನುಮಾಡಿದೆ ಎನ್ನೋ ಪ್ರಶ್ನೆಗೆ
ಕೊಡು ಈ ಮೂಲಕ ಉತ್ತರವ.
ಪಿ.ವಿ.ಸುಬ್ರಮಣಿ
ದ್ವಿತೀಯ ಎಂ.ಎಸ್.ಡಬ್ಲ್ಯೂ. 
ಅಪ್ಪೆ ಪ್ರೀತಿಡ್ದ್ ತುಳು ಬುಲೆಪು -ಪ್ರೊ. ಅಭಯ್ ಕುಮಾರ್

ಕುಡ್ಲ ; ತುಳು ಭಾಷೆನ್ ಎಂಕುಲು ಮಾತ ಅಪ್ಪೆನ್ ಪ್ರೀತಿ ಮಲ್ತಿಲೆಕ್ಕ ಮಲ್ತ್ಂಡ ತುಳು ಬುಲೆಪು ಪನ್ಪಿನ ಅಪುಂಡು ಆ ನಿಲೆಟ್ಟ್ ಇನಿತ್ತ ಈ ಕಜ್ಜಕೊಟ್ಯ ಕಾರಣ ಆತ್ಂಡ್ . ಪಂಣ್ದ್ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕೆರ್ ಆಯ್ನ ಪ್ರೊ. ಅಭಯ್ ಕುಮಾರ್ ಪಂಡೆರ್.
ಮೇರ್, 'ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ', 'ತುಳು ಐಸಿರಿ' ಕುಡ್ಲ, 'ದಿ ಯೆನಪೋಯ ಕಾಲೇಜು ಬಲ್ಮಠ' ನೆತ್ತ ಮಾತ ಸೇರಿಗೆಡ್ ಆಯ್ನಂಚಿನ 'ತುಳು ಸಾಹಿತ್ಯ ಸಾರ ಸಂಪೊಲಿಗೆ ಕಜ್ಜಕೊಟ್ಯನ್' ತುಡರ್ ಪೊತ್ತವುನೊಟ್ಟುಗೆ ಪಿಂಗಾರದ ಪಾಲೆನ್ ಉಡೆತ್ತ್ದ್ ಪಿಂಗಾರ ಅರಲ್ತ್ದ್ ಉದಿಪನ ಮಲ್ತ್ದ್ ಪಾತೆರ್ಯೆರ್.
ಬಿನ್ನ್ಯೆರ್ ಆಯಿನಂಚಿನ ಪ್ರಭಾಕರ್ ನೀರ್ಮಾರ್ಗ ಬೊಕ್ಕ ಪಿ.ಸಿ.ಎಂ.ಕುಂಞಿ, ಪಠ್ಯೇತರ ಚಟುವಟಿಕೆಗ್ ಮಂಗಳೂರು ವಿಶ್ವವಿದ್ಯಾನಿಲಯ ದಿಂಜ ಅವಕಾಶ ಕೊರೊಂದುಂಡು. ತುಳು ಸಾಹಿತ್ಯದ ಬುಲೆಪ್ಪುಗು ಸಹಾಯ ಮಲ್ಪುಬ ಪನ್ಪಿನಂಚಿನ ಪಾತೆರ ಪಂಡೆರ್.
 ಗುಕರ್ಾಮೆ ವಹಿಸೊನ್ಯಂಚಿನ ಜಾನಕಿ ಬ್ರಹ್ಮಾವರ ಅಧ್ಯಕ್ಷೆರ್ ತುಳು ಸಾಹಿತ್ಯ ಅಕಾಡೆಮಿ. ಮೇರ್ ಎಂಕ್ಲೆನ ಅಕಾಡೆಮಿದ ಕಡೆಡ್ದ್ ನನಲ ದಿಂಜ ದಿಂಜ ಬೆಲೆ ಮಲ್ಪೊಡು ಪಂದ್ ಎನ್ನ್ದ ಕೆದಂಬಾಡಿ ಜತ್ತಪ್ಪ ರೈ ಮೇರ್ನ 'ರಾಮಾಶ್ವಮೇಧಾ' ಕೃತಿನ್ ಮೂಲು 
ಸೇರ್ದಿನ ಮಾತ ಜೋಕುಲೆಡ್ಲ ಕೇನೊಂದುಲ್ಲೆ ಮಾತೆರ್ಲಾ ಓದುಲೆ ಇಂದ್ ಪಂಡೆರ್.ಕರಿ ಸತರ್ಿ ಮಂಗಳೂರು ವಿಶ್ವವಿದ್ಯಾನಿಲಯಡ್ ಎಂ.ಕಾಂ ಮೂಜಿನೆ ರ್ಯಾಂಕ್ ಬತ್ತನ ಅರ್ಚನಾ ಮೆರೆಗ್ ವೇದಿಕೆಡ್ ಇತ್ತಿನ ಪೂರ ಬಿನ್ನ್ಯೆರ್ನ ಕೊಡಿಯಡಿಟ್ ಸನ್ಮಾನ ಮಲ್ತೆರ್.ವೇದಿಕೆಡ್ ಡಾ.ರಾಜಶ್ರೀ, ಡಾ. ಕಿಶೋರ್ ಕುಮಾರ್ ರೈ ಶೇಣಿ, ವಸುಮತಿ ಮೊಗುಲು ಉಪಸ್ಥಿತಿ ಇತ್ತೆರ್. ವಸುಮತಿ ಮೇರ್ ವಂದನೆ ಅಪರ್ಿಸಯೆರ್, ರೂಪಕಲಾ ಆಳ್ವ ಮೇರ್ ಸಭಾ ಕಾರ್ಯಕ್ರಮೊನು ನಿರೂಪಿಸಯೆರ್.  
ಪದಿನೈನ್ ನಿಮಿಷದ ಚಾ ಕೂಟದ ಪುಸರ್ೊತ್ತು ದೆತ್ತೊಂದು ಕಜ್ಜಕೊಟ್ಯದ ಗೋಷ್ಠಿಲೆಗ್ ಬತ್ತೆರ್. ಸುರುತ್ತ ಗೋಷ್ಠಿದ ಪಾಲವೆರ್ ಆಯ್ನ ಡಾ.ರಾಧಾಕೃಷ್ಣ ಬೆಳ್ಳೂರ್ ಮೇರ್ 'ಪಳಂತುಳು: ಸೋದನೆ ಬೊಕ್ಕ ಸಂಪೊಲಿಗೆ' ಪನ್ಪಿ ವಿಷಯದ ಮಿತ್ತ್ ಪಾತೆಯರ್ೆರ್ ನೆತ್ತ ಗುಕರ್ಾಮರ್ೆನ್ ಡಾ.ರಾಜಶ್ರೀ ಮೇರ್ ಒಯಿಸ್ದಿತ್ತೆರ್.
ರಡ್ಡನೆ ಗೋಷ್ಠಿದ ಪಾಲವೆರ್ ಆಯ್ನ ಡಾ.ಮಹಾಲಿಂಗ ಭಟ್ ಮೇರ್ 'ಪೊಸ ತುಳು ಸಾಹಿತ್ಯದ ಬುಳೆಚ್ಚಿಲ್' ಪನ್ಪಿ ವಿಷಯದ ಮಿತ್ತ್ ಪಾತೆಯರ್ೆರ್ ನೆತ್ತ ಗುಕರ್ಾಮರ್ೆನ್ ಡಾ.ವಿಶ್ವನಾಥ ಬದಿಕಾನ ಮೇರ್ ಒಯಿಸ್ದಿತ್ತೆರ್.
ಮೂಜಿನೆ ಗೋಷ್ಠಿದ ಪಾಲವೆರ್ ಆಯ್ನ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಮೇರ್ 'ತುಳುನಾಡ್ದ ಜಾಗೆದ ಪುರಪ್ಪು' ಪನ್ಪಿ ವಿಷಯದ ಮಿತ್ತ್ ಪಾತೆಯರ್ೆರ್ ನೆತ್ತ ಗುಕರ್ಾಮರ್ೆನ್ ಡಾ.ಕಿಶೋರ್ ಕುಮಾರ್ ರೈ ಶೇಣಿ ಮೇರ್ ಒಯಿಸ್ದಿತ್ತೆರ್.

ದೀಪಕ್ ಎನ್ ದುರ್ಗ
                          ದ್ವಿತೀಯ ಎಂ.ಎ.ಕನ್ನಡ

ಪತ್ರಿಕಾ ರೂಪದಲ್ಲಿ ಬಿತ್ತಿಯ ಮೊದಲ ಎರಡನೇಯ ಆವೃತ್ತಿ




ವಿಚಾರ ಮತ್ತು ಭಾಷೆ ಬರವಣಿಗೆಯ ಕೇಂದ್ರ- ಡಾ ಮಹಾಲಿಂಗ ಭಟ್

ಮಂಗಳಗಂಗೋತ್ರಿ : ಭಾಷಾ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಯೋಗಿಕ ನೆಲೆಗಿಂತ ವಿಮರ್ಶಾತ್ಮಕ ನೆಲೆಯೆ ಪ್ರಮುಖವಾಗಿದೆ. ಇಂತಹ ಸಂದರ್ಭದಲ್ಲಿ ಬಿತ್ತಿ ಪತ್ರಿಕೆ, ಬ್ಲಾಗ್ ಬರವಣಿಗೆ ಪ್ರಾಯೋಗಿಕ ಬರವಣಿಗೆಯ ಕಸುಬುಗಾರಿಕೆಗೆ ವೇದಿಕೆಯಾಗಿದೆ ಎಂದು ಸಂತ ಅಲೋಶಿಯಸ್ ಸಂಧ್ಯಾ ಕಾಲೇಜಿನ ಉಪನ್ಯಾಸಕ ಡಾ. ಮಹಾಲಿಂಗ ಭಟ್ ಅಭಿಪ್ರಾಯ ಪಟ್ಟರು.
ಅವರು ಗುರುವಾರ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಬಿತ್ತಿ ಸಾಪ್ತಾಹಿಕ ಪತ್ರಿಕೆ ಮತ್ತು ಕನ್ನಡ ಬಿತ್ತಿ ಬ್ಲಾಗ್ ಅನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಬರವಣಿಗೆಯ ಸಂದರ್ಭದಲ್ಲಿ ವಿಚಾರ ಮತ್ತು ಭಾಷೆಗಳಹೊಂದಾಣಿಕೆ ಹೆಚ್ಚು ಸಾಧ್ಯ.
ಇದರ ಸದುಪಯೋಗವನ್ನು ವಿದ್ಯಾಥರ್ಿಗಳು ಬಳಸಿಕೊಂಡು ವೈಚಾರಿಕ ಹಾಗೂ ಭಾಷಾ ಪ್ರೌಢಿಮೆಯನ್ನು ವೃದ್ಧಿಸಿಕೊಳ್ಳಬೇಕೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್.ವಿ.ಪಿ. ಕನ್ನಡ ಅಧ್ಯಯನ   ಸಂಸ್ಥೆಯ ಪ್ರೊ. ಸಬಿಹಾ ಭೂಮಿಗೌಡರವರು ವಹಿಸಿದರು. ವೇದಿಕೆಯಲ್ಲಿ ಬಿತ್ತಿ ಪತ್ರಿಕೆಯ ಸಂಪಾದಕ ಲೋಕೇಶ್ ಕುಕ್ಕುಜೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾಥರ್ಿ ಕವಿಗೋಷ್ಠಿಯನ್ನು ಆಯೋಜಿಸಿದ್ದು, ದೀಪಕ್, ಚೇತನಾ, ಸುಬ್ರಮಣಿ, ಶ್ವೇತಾಶ್ರೀ, ಸುಚಿತ್ರಾ, ಆನಂದ, ವಿಶ್ವನಾಥ, ದೊಡ್ಡಶಿವಕುಮಾರ್ ಮತ್ತು ಲೋಕೇಶ್ ಕುಕ್ಕುಜೆ ಇವರು ಸ್ವರಚಿತ ಕವನವನ್ನು ವಾಚಿಸಿದರು. ಶ್ರುತಿ ಬಿ.ಬಿ ಸ್ವಾಗತಿಸಿ ಪವಿತ್ರ ವಂದಿಸಿದರು. ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.
 
ಲೋಕೇಶ್  ಕುಕ್ಕುಜೆ
ದ್ವಿತೀಯ ಎಂ.ಎ ಕನ್ನಡ

  ಬಿತ್ತಿ ವಿಶೇಷಾಂಕ 2017