10/17/14

   
ಹೆಜ್ಜೆ ಗುರುತು-ಮಂಗಳ ಅಂಗಳದಲ್ಲಿ ಭಾರತ 

24-9-2014 ರಂದು ಭಾರತ ಒಂದು ಮೈಲುಗಲ್ಲು ತಲುಪಲಿದೆ. ಈ ದಿನವು ಭಾರತಕ್ಕೆ ಒಂದು ಐತಿಹಾಸಿಕ ದಿನವಾಗಲಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ISRO  ತನ್ನ ಚೊಚ್ಚಲ ಯಾನವನ್ನು ಮಂಗಳ ಗ್ರಹಕ್ಕೆ 05-11-2013 ರಂದು ಉಡಾಯಿಸಿದ್ದು ಇದು ಸೆಪ್ಟೆಂಬರ್ 24 ರಂದು ಮಂಗಳ ಗ್ರಹ ತಲುಪಲಿದೆ. ಈ ವರೆಗೂ ಯಾವುದೇ ತಾಂತ್ರಿಕ ದೋಷಗಳಿಲ್ಲದೆ ಸುಗಮವಾಗಿ ಸಾಗತ್ತಿರುವ ಈ ಯಾನ ಇನ್ನು ಕೆಲವೇ ಗಂಟೆಗಳಲ್ಲಿ ಮಂಗಳ ಕಕ್ಷೆ ತಲುಪಲಿದೆ ಎಂದು ISRO  ಅಧ್ಯಕ್ಷ ವಿ.ರಾಧಾಕೃಷ್ಣನ್ ತಿಳಿಸಿದ್ದಾರೆ.
'Mars Orbiter Mission'' ಎಂದು ನಾಮಕರಣಗೊಂಡ ಈ ಯಾನ, ತನ್ನೊಂದಿಗೆ ಐದು ಉಪವಸ್ತುಗಳನ್ನು ಹೊಂದಿದೆ (1 ಕ್ಯಾಮರ, 2 ಸ್ಪೆಕ್ಟ್ರೋಮೀಟರ್, 1 ರೇಡಿಯೋಮೀಟರ್ ಮತ್ತು 1 ಫೋಟೋಮೀಟರ್). ಈ ಐದು ಉಪವಸ್ತುಗಳ ಮುಖಾಂತರ ಯಾನವು ಮಂಗಳ ಗ್ರಹದ ಸಮಗ್ರ ವಿಶ್ಲೇಷಣೆ ಮಾಡಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 05-11-2013 ರಂದು PSLV-C25 ಅಂತರಿಕ್ಷ ವಾಹನದ ಮೂಲಕ Mars Orbiter Mission ಯಾನವನ್ನು ಶ್ರೀಹರಿಕೋಟದಿಂದ ಹಾರಿಸಲಾಗಿದ್ದು ಇಂದು ತನ್ನ ಗುರಿಯನ್ನು ತಲುಪಲು ಕೆಲವೆ ಗಂಟೆಗಳು ಉಳಿದಿರಲು ಈ ಸಂಗತಿ ವಿಜ್ಞಾನಿಗಳ ಹಾಗು ಖಗೋಳ ಶಾಸ್ತ್ರಜ್ಞರೆಲ್ಲರ ಮನಸ್ಸುಗಳಲ್ಲಿ ಕುತೂಹಲ ಹಾಗು ರೋಮಾಂಚನ ಮೂಡಿಸಿದೆ. ಯಾನ ಮಂಗಳ ಕಕ್ಷೆ ಯಶಸ್ವಿಯಾಗಿ ತಲುಪಿದಲ್ಲಿ, ಭಾರತ ಮಾತೆಯ ಕಿರೀಟಕ್ಕೆ 2 ಯಶಸ್ವಿನ ಗರಿಗಳು ಸೆರಿದಂತಾಗುತ್ತದೆ.
1. ಭಾರತದ ಮೊದಲ ಯಶಸ್ವಿ ಅಂತರ್ ಗ್ರಹ ಯಾನ ಇದು ಆಗಲಿದೆ.
2.    Asia  ಖಂಡದಲ್ಲೇ ಮಂಗಳ ಗ್ರಹಕ್ಕೆ ಮೊದಲ ಬಾರಿಗೆ ಯಾನವನ್ನು ಕಳಿಸಿದ ಕೀರ್ತಿ ಭಾರತ ದೇಶದ್ದಾಗಲಿದೆ.
 ಬಾಹ್ಯಾಕಾಶ ವಿಜ್ಞಾನದ ಇತಿಹಾಸದಲ್ಲಿಯೇ ಭಾರತ ಕಾಣಲಿರುವ ತನ್ನ ಚೊಚ್ಚಲ ಯಾನದ ಯಶಸ್ವಿ ಉಡಾವಣೆಯ ಈ ಹೆಜ್ಜೆ ಗುರುತು ನಿಜಕ್ಕೂ ಅವಿಸ್ಮರಣೀಯ. . Hats off India


(ಯಶಸ್ವಿ ಮಂಗಳ ಕಕ್ಷೆ ತಲುಪುವ ಮೊದಲು ಬರೆದ ಲೇಖನ )


ಉಮ್ಮೆ ಸಲ್ಮಾ ಎಂ,
ಗಣಕ ವಿಜ್ಞಾನ ವಿಭಾಗ

No comments:

Post a Comment

  ಬಿತ್ತಿ ವಿಶೇಷಾಂಕ 2017