10/17/14

ನನಗೊಬ್ಬ ಅಣ್ಣನಿದ್ದಿದ್ದರೆ....


ನನಗೆ ನನ್ನ ಸ್ನೇಹಿತೆಯರನ್ನು ಕಂಡರೆ ಹೊಟ್ಟೆಕಿಚ್ಚು. ಇದೆಂತಾ ಸ್ನೇಹವಪ್ಪಾ ಅಂದುಕೊಳ್ಳಬೇಡಿ. ನಿಜವಾಗಿಯೂ ನಾವೆಲ್ಲಾ ಚೆನ್ನಾಗಿಯೇ ಇದ್ದೇವೆ. ಆದರೂ ನನ್ನ ಮನಸ್ಸಿನಲ್ಲಿ ಏನೋ ಒಂದು ಕೊರಗು. ಹಾಗಿದ್ದರೆ ಈ ರೀತಿ ಯಾಕೆ? ನನಗೆ ಅವರಂತೆ ಒಬ್ಬ ಅಣ್ಣ ಇಲ್ಲವಲ್ಲಾ ಅಂತ.
ಅಣ್ಣ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ? ಆತನೊಂದಿಗೆ ಜಗಳವಾಡುತ್ತಾ, ಬಡಿದಾಡುತ್ತಾ, ಸಿಡಿಮಿಡಿಗೊಳ್ಳುತ್ತಾ ದಿನ ಕಳೆಯುವುದರಲ್ಲೇ ಏನೋ ಖುಷಿ ಇರುತ್ತಿತ್ತು. ತಂಗಿಯಾದವಳಿಗೆ ಅಣ್ಣನಲ್ಲಿ ಎಲ್ಲವೂ ಇರುತ್ತದೆ. ಆಕೆಯ ಪಾಲಿಗೆ ಆತ ಹಿತರಕ್ಷಕನೂ ಆಗಿರುತ್ತಾನೆ, ತಂದೆಯಂತೆ ಅವಳ ಪಾಲಿನ ಜವಾಬ್ದಾರಿ ಹೊರುವವನೂ ಆಗಿರುತ್ತಾನೆ, ಜೊತೆಗೆ ಒಬ್ಬ ಒಳ್ಳೆಯ ಸ್ನೇಹಿತನೂ ಆಗಿರುತ್ತಾನೆ. ಆದ್ದರಿಂದಲೇ ಅಣ್ಣನಲ್ಲಿ ಭಯ, ಭಕ್ತಿ, ಗೌರವ, ಪ್ರೀತಿ, ಸಲುಗೆ ಎಲ್ಲವೂ ಇರುತ್ತದೆಂದು ಅನಿಸುತ್ತದೆ. ಅಣ್ಣ ಎಂಬ ಒಂದು ಸ್ಥಾನದಿಂದ ಹೆಣ್ಣು ಪಡೆಯುವ ಸಂತೋಷ ಅವರ್ಣನೀಯ.
  ಪುರಾಣಗಳಲ್ಲಿ, ಕತೆ, ಸಿನೆಮಾಗಳಲ್ಲಿ ತಂಗಿಗಾಗಿ ಸರ್ವಸ್ವವನ್ನೇ ಕೊಟ್ಟ ಅಣ್ಣಂದಿರ ಚಿತ್ರಣವನ್ನು ನೋಡಿದ್ದೇವೆ. ಅಣ್ಣನಿಗಾಗಿ ತನ್ನ ಬದುಕನ್ನೇ ಮೀಸಲಾಗಿಟ್ಟ ತಂಗಿಯನ್ನೂ ನೋಡಿದ್ದೇವೆ. ತಂಗಿಯ ತೊಟ್ಟು ಕಣ್ಣೀರಿಗೆ ಅಣ್ಣನಾದವನು ಮೃದುವಾಗುತ್ತಿದ್ದ. ತಂಗಿ ತಪ್ಪು ಮಾಡಿ ತನ್ನೊಂದಿಗೆ ಕುಳಿತುಕೊಂಡು ಅಳುತ್ತಿದ್ದರೂ ಅವಳ ಕಣ್ಣೀರೊರಸಿ ತಾನು ಸುಮ್ಮನಾಗುವ ದೃಶ್ಯ ಅವರ್ಣನೀಯ. ತಂಗಿಯ ಕಣ್ಣಿನಿಂದ ಹನಿ ಕಣ್ಣೀರು ಬೀಳದಂತೆ ತಡೆದು ಆಕೆಯನ್ನು ಸಾಂತ್ವನಗೊಳಿಸುತ್ತಾನೆ. ಮದುವೆಯಾದ ನಂತರವೂ ತಂಗಿಯ ಮೇಲಿನ ಪ್ರೀತಿ ಕಡಿಮೆಯಾಗಲಾರದು ಅನಿಸುತ್ತದೆ. ಆದರೆ ಅತ್ತಿಗೆಗೆ ಹೆದರಿ ನಾದಿನಿ(ತಂಗಿ)ಯೇ ದೂರವಾಗುತ್ತಾಳೆ.
  ಹೆಣ್ಣಿನ ಜನುಮಕೆ ಅಣ್ಣ-ತಮ್ಮರು ಬೇಕು ಎಂಬ ಜನಪದ ಉಕ್ತಿಯನ್ನು ನೆನಪಿಸಿಕೊಳ್ಳಲೇ ಬೇಕು. ಅಣ್ಣ-ತಂಗಿ ಎಂಬುದು ವಿಶಿಷ್ಟ ಪ್ರೀತಿಯ ಸಂಬಂಧ. ಕೇವಲ ರಕ್ತಸಂಬಂಧಿಗಳೇ ಆಗಬೇಕಿಲ್ಲ. ಬಾಂಧವ್ಯದ ಮೂಲಕ ಅದರ ಅನುಭವ ಪಡೆಯಲು ಸಾಧ್ಯವಿದೆ. ಗಂಡು-ಹೆಣ್ಣಿನ ಸಂಬಂಧಕ್ಕೆ ಕೇವಲ ಪ್ರೀತಿ-ಪ್ರೇಮದ ಅರ್ಥ ಕಲ್ಪಿಸಬಾರದು. ಅವರಲ್ಲೂ ಬಾಂಧವ್ಯದ ಭಾವನೆಗಳು ಇವೆ ಎಂಬುವುದನ್ನು ಅಥರ್ೈಸಿಕೊಳ್ಳಬೇಕು. ಅಣ್ಣ-ತಂಗಿಯರಂತೆ ಕಂಡು ವಾತ್ಸಲ್ಯದಿಂದ ವತರ್ಿಸಬೇಕು. ಗಂಡಾಗಲಿ ಹೆಣ್ಣಾಗಲಿ ಒಂದೇ ಮಗು ಸಾಕು ಎಂಬ ತಂದೆ ತಾಯಿಯರ ನಿಲುವು ಬದಲಾಗಬೇಕು. ಜೀವನಪೂತರ್ಿ ಅಣ್ಣ-ತಂಗಿಯ ಪ್ರೀತಿ ಸಿಗದೆ ಮೌನವಾಗಿರುವುದು ಅನಿವಾರ್ಯವಾಗದಿರಲಿ......ಇತಿ ನಿಮ್ಮ ತಂಗಿ...
ಶ್ವೇತಾಶ್ರೀ ದ್ವಿತೀಯ ಎಂ.ಎ. ಕನ್ನಡ

No comments:

Post a Comment

  ಬಿತ್ತಿ ವಿಶೇಷಾಂಕ 2017