10/17/14

ಸರ್ಕಾರ ಮತ್ತು ಪರಿಹಾರ
 ಇಂದು ನಮ್ಮ ದೇಶ ಹೊಸ ಸಕರ್ಾರದ ಆಡಳಿತದ ಚುಕ್ಕಾಣಿಯಲ್ಲಿ ನಡೆಸಲ್ಪಡುತ್ತಿದೆ. ಹೊಸ ನಿರೀಕ್ಷೆಗಳ ಭರವಸೆಯೊಂದಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಎಲ್ಲಾ ರಂಗದಲ್ಲೂ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಬ್ಯಾಂಕ್ ಖಾತೆಗಳು, ಗ್ರಾಮ ಜನೆಗಳು ಇನ್ನೂ ಹಲವಾರು ಯೋಜನೆಗಳನ್ನೂ ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನವನ್ನು ನಡೆಸುತ್ತಿದೆ. ಇವುಗಳಿಗೆಲ್ಲಾ ಕಿರೀಟ ಎಂಬಂತೆ  ವಿಜ್ಞಾನದಲ್ಲಿ ಸಾಧಿಸಿದ ಯಶಸ್ಸಂತೂ ಇಡೀ ವಿಶ್ವವನ್ನು ನಿಬ್ಬೆರಗಾಗುವಂತೆ ಮಾಡಿದೆ. ಹಲವಾರು ವರ್ಷಗಳ ಅವಿರತ ಪ್ರಯತ್ನದಿಂದ ವಿಶ್ವದಲ್ಲಿಯೇ ಕಡಿಮೆ ಖಚರ್ಿನಲ್ಲಿ ಮಂಗಳನ ಅಂಗಣಕ್ಕೆ ಹೋದ ಮೊದಲ ದೇಶವೆಂದೂ ಈವರೆಗೆ ಮಂಗಳನಲ್ಲಿಗೆ ಹೋದ ನಾಲ್ಕನೇ ದೇಶವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಹೊಸ ಹೊಸ ಆಥರ್ಿಕ ಯೋಜನೆಗಳು, ಹೂಡಿಕೆಗಳು, ದೇಶ ವಿದೇಶಗಳಲ್ಲೂ ತನ್ನನ್ನು ತೊಡಗಿಸಿಕೊಳ್ಳುವ ಪ್ರಯತ್ನ ಉತ್ತಮವಾಗಿದೆ. ಇದು ಒಂದು ಭಾಗವಾದರೆ, ಇನ್ನೊಂದು ಭಾಗವಾಗಿ ದೇಶವು ಎದುರಿಸುತ್ತಿರುವ ಸಮಸ್ಯೆಗಳೂ ಕೂಡ ನಮ್ಮ ಮುಂದಿವೆ.
ಪ್ರಸ್ತುತ ದಿನಗಳಲ್ಲಿ ನಮಗೆ ಕಂಡುಬರುವ ಎರಡು ಮುಖ್ಯ ಸಮಸ್ಯೆಗಳೆಂದರೆ, ಒಂದು ನಿರಂತರವಾಗಿ ಗಡಿಯಲ್ಲಿ ದಾಳಿ ನಡೆಸುವ ಪಾಕಿಸ್ತಾನ. ಇನ್ನೊಂದು ದೇಶದೊಳಗೆ ಪ್ರಕೃತಿ ವಿಕೋಪದ ದಾಳಿಗೆ ಒಳಗಾಗಿ ನಲುಗುತ್ತಿರುವ ಆಂಧ್ರಪ್ರದೇಶ. ಪಾಕಿಸ್ತಾನದ ಜೊತೆಗೆ ಈವರೆಗೆ ನಡೆಸಿದ ಮಾತುಕತೆಗಳು ಎಲ್ಲಿಯೂ ಫಲಪ್ರದವಾಗಿ ಕಂಡುಬಂದಿಲ್ಲ. ಬಾಯಿಮಾತಿನಲ್ಲಿ ಎಲ್ಲವನ್ನು ಒಪ್ಪಿಕೊಳ್ಳುವ ಪಾಕಿಸ್ತಾನ ಹಿಂದಿನಿಂದ ತನ್ನ ದಾಳಿಯನ್ನು ಮುಂದುವರೆಸುತ್ತಲೇ ಬಂದಿದೆ. ಭಾರತವು ಇದಕ್ಕೆ ಪ್ರತಿಯಾಗಿ ಕಾಶ್ಮೀರದ ಗಡಿಯ ಜನರನ್ನು ಸ್ಥಳಾಂತರಿಸಿ ಯುದ್ಧಕ್ಕೆ ಸಜ್ಜಾಗುವ ಸೂಚನೆಗಳನ್ನು ನೀಡುತ್ತಿದೆ.ಆದರೆ ಈಗ ನಮ್ಮೆದುರು ಇರುವುದು ಯುದ್ಧದ ಬಗ್ಗೆ ಸಕರ್ಾರದ ನಿಧರ್ಾರವೇನು? ಎಂಬುದು. ಇದು ಬಹು ಮುಖ್ಯ ಒಂದು ವಿಚಾರ.
ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ನಿಂತಿರುವ ಭಾರತವು ಇಂದು ಯುದ್ಧಕ್ಕೆ ಹೆದರಿ ಕುಳಿತಿದೆ ಎಂದಾಗಲಿ, ಯುದ್ಧ ನಡೆಸಲು ಅಸಮರ್ಥವಾಗಿದೆ ಎಂಬುದಾಗಲಿ,ಇದರ ಅರ್ಥವಲ್ಲ. ಆದರೆ, ಕೇವಲ ಭಾರತವು ಮಾತ್ರವಲ್ಲ ಪಾಕಿಸ್ತಾನವು ಅದೇ ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ನಮ್ಮೊಂದಿಗೆ ನಿಂತಿದೆ ಎಂಬ ಸತ್ಯವನ್ನು ನಾವು ಮರೆಯುವಂತಿಲ್ಲ. ಆದ್ದರಿಂದ ಇಲ್ಲಿ ಬೇಕಾಗಿರುವುದು ಯುದ್ಧವಲ್ಲ ಪರಿಹಾರ.
ಮಾತುಕತೆಯ ಪರಿಹಾರಗಳನ್ನು ಈಗಾಗಲೆ ಬದಿಗೆ ಸರಿಸಿರುವ ಪಾಕಿಸ್ತಾನಕ್ಕೆ ಅದರ ಮಹತ್ವ ಮರೆತು ಹೋಗಿದೆ. ಆದ್ದರಿಂದ ಇಂದು ಭಾರತಕ್ಕೆ ಬೇಕಾಗಿರುವುದು ಗಡಿ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ. ಅದು ಹೇಗೆ ಎಂಬುದು ಇಲ್ಲಿ ಕಾಡುತ್ತಿರುವ ಮುಖ್ಯ ಪ್ರಶ್ನೆ. ಸಕರ್ಾರದ ಮುಂದಿರುವುದು ಸಾವಿಗೆ ಸಾವು, ಯುದ್ಧಕ್ಕೆ ಯುದ್ಧ ಎನ್ನುವ ನಿಲುವಲ್ಲ. ಬದಲಾಗಿ ಯುದ್ಧವಿಲ್ಲದೆ ನಡೆಸಬೇಕಾದ ಶಾಶ್ವತ ಪರಿಹಾರ. ಇದು ಕೇವಲ ಪಾಕಿಸ್ತಾನವಷ್ಟೇ ಅಲ್ಲ ಅದರೊಂದಿಗೆ, ಚೀನಾ, ಬಾಂಗ್ಲಾದಂತಹ ದೇಶಗಳಿಂದಲೂ ಭಾರತ ಗಡಿ ಸಮಸ್ಯೆಗೆ ಒಳಗಾಗಿದೆ.
ಪ್ರಸ್ತುತವಾಗಿ ಹುಡ್ ಹುಡ್ (ಹುದ್ ಹುದ್) ಎನ್ನುವ ಚಂಡಮಾರುತಕ್ಕೆ ಸಿಲುಕಿ ಆಂಧ್ರಪ್ರದೇಶವು ನಲುಗುತ್ತಿದೆ. ಅದರ ಪರಿಹಾರ ಕಾರ್ಯವು ಸಕರ್ಾರದ ಮುಂದಿದೆ. ಅನೇಕ ನೆನೆಗುದಿಗೆ ಬಿದ್ದಿರುವ ಈ ಹಿಂದಿನ ಒಳ್ಳೆಯ ಯೋಜನೆಗಳನ್ನು ಜಾರಿಗೊಳಿಸುವ ಒಂದು ಪ್ರಾಮಾಣಿಕ ಜವಾಬ್ದಾರಿಯೂ ಇಂದಿನ ಸಕರ್ಾರಕ್ಕೆ ಇದೆ.
 
 ಲೋಕೇಶ್ ಕುಕ್ಕುಜೆ

ಸಂಪಾದಕರು 
                                     

No comments:

Post a Comment

  ಬಿತ್ತಿ ವಿಶೇಷಾಂಕ 2017