10/17/14

ವಿಚಾರ ಮತ್ತು ಭಾಷೆ ಬರವಣಿಗೆಯ ಕೇಂದ್ರ- ಡಾ ಮಹಾಲಿಂಗ ಭಟ್

ಮಂಗಳಗಂಗೋತ್ರಿ : ಭಾಷಾ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಯೋಗಿಕ ನೆಲೆಗಿಂತ ವಿಮರ್ಶಾತ್ಮಕ ನೆಲೆಯೆ ಪ್ರಮುಖವಾಗಿದೆ. ಇಂತಹ ಸಂದರ್ಭದಲ್ಲಿ ಬಿತ್ತಿ ಪತ್ರಿಕೆ, ಬ್ಲಾಗ್ ಬರವಣಿಗೆ ಪ್ರಾಯೋಗಿಕ ಬರವಣಿಗೆಯ ಕಸುಬುಗಾರಿಕೆಗೆ ವೇದಿಕೆಯಾಗಿದೆ ಎಂದು ಸಂತ ಅಲೋಶಿಯಸ್ ಸಂಧ್ಯಾ ಕಾಲೇಜಿನ ಉಪನ್ಯಾಸಕ ಡಾ. ಮಹಾಲಿಂಗ ಭಟ್ ಅಭಿಪ್ರಾಯ ಪಟ್ಟರು.
ಅವರು ಗುರುವಾರ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಬಿತ್ತಿ ಸಾಪ್ತಾಹಿಕ ಪತ್ರಿಕೆ ಮತ್ತು ಕನ್ನಡ ಬಿತ್ತಿ ಬ್ಲಾಗ್ ಅನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಬರವಣಿಗೆಯ ಸಂದರ್ಭದಲ್ಲಿ ವಿಚಾರ ಮತ್ತು ಭಾಷೆಗಳಹೊಂದಾಣಿಕೆ ಹೆಚ್ಚು ಸಾಧ್ಯ.
ಇದರ ಸದುಪಯೋಗವನ್ನು ವಿದ್ಯಾಥರ್ಿಗಳು ಬಳಸಿಕೊಂಡು ವೈಚಾರಿಕ ಹಾಗೂ ಭಾಷಾ ಪ್ರೌಢಿಮೆಯನ್ನು ವೃದ್ಧಿಸಿಕೊಳ್ಳಬೇಕೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್.ವಿ.ಪಿ. ಕನ್ನಡ ಅಧ್ಯಯನ   ಸಂಸ್ಥೆಯ ಪ್ರೊ. ಸಬಿಹಾ ಭೂಮಿಗೌಡರವರು ವಹಿಸಿದರು. ವೇದಿಕೆಯಲ್ಲಿ ಬಿತ್ತಿ ಪತ್ರಿಕೆಯ ಸಂಪಾದಕ ಲೋಕೇಶ್ ಕುಕ್ಕುಜೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾಥರ್ಿ ಕವಿಗೋಷ್ಠಿಯನ್ನು ಆಯೋಜಿಸಿದ್ದು, ದೀಪಕ್, ಚೇತನಾ, ಸುಬ್ರಮಣಿ, ಶ್ವೇತಾಶ್ರೀ, ಸುಚಿತ್ರಾ, ಆನಂದ, ವಿಶ್ವನಾಥ, ದೊಡ್ಡಶಿವಕುಮಾರ್ ಮತ್ತು ಲೋಕೇಶ್ ಕುಕ್ಕುಜೆ ಇವರು ಸ್ವರಚಿತ ಕವನವನ್ನು ವಾಚಿಸಿದರು. ಶ್ರುತಿ ಬಿ.ಬಿ ಸ್ವಾಗತಿಸಿ ಪವಿತ್ರ ವಂದಿಸಿದರು. ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.
 
ಲೋಕೇಶ್  ಕುಕ್ಕುಜೆ
ದ್ವಿತೀಯ ಎಂ.ಎ ಕನ್ನಡ

No comments:

Post a Comment

  ಬಿತ್ತಿ ವಿಶೇಷಾಂಕ 2017