1/21/15

ಕಣಂತೂರ್
ಅವನು ಬಾರದೆ ಹೋದರೆ ನನಗೇನೊ ಬೇಜಾರು. ಏನೋ ಕಳೆದುಕೊಂಡೆ ಎನ್ನುವ ಅನುಭವ. ಆದರೆ ಆ ಅನುಭವ ಒಂದು ದಿನಕ್ಕೆ ಮಾತ್ರ ಏಕೆಂದರೆ ಮರುದಿನ ಬಂದೇ ಬರುತ್ತಾನೆ. ಮೊಟ್ಟೆಯೊಳಗಿನ ಹಳದಿ ಬಣ್ಣದಂತಿರುವ ಆ ಕುಮಾರ ಅವನೆ ಕಣಂತೂರ್. ಅವನು ಹೋಗುವ ವೇಗ ಕಂಡು ಮೊದ ಮೊದಲು ದಂಗಾದರೂ, ಇಂದು ನನಗೆ ಪ್ರಯಾಣದ ವೇಳೆಯಲ್ಲಿ ಅದರ ಶಬ್ದವೇ ಜೋಗುಳ. ಹೌದು ನಾನು ಹೇಳುತ್ತಿರುವುದು 'ಕಣಂತೂರ್ ಎಕ್ಸ್ಪ್ರೆಸ್ಸ್' ಬಸ್ಸ್ನ ಬಗ್ಗೆ.ಆ ಬಸ್ಸ್ ಬರದೇ ಹೋದರೆ, ನೋಡದೇ ಹೋದರೆ, ಒಳಗೊಳಗೆ ನನಗೇನೋ ತಳಮಳ. ಅದೆಷ್ಟು ಸೊಗಸು ಅದರ ಚಲನೆ. ಕಾಡಿನರಾಜ ಸಿಂಹದಂತೆ ರೋಡ್ನಲ್ಲಿ ತಾನೇ ಸಿಂಹ ಎಂಬ ಸಿಂಹಘರ್ಜನೆಯನ್ನು ಮಾಡುತ್ತಾ ನುಗ್ಗುವ ಪರಿ ಅಮೋಘ. ಒಂದು ಸಣ್ಣ ಸಂದು ಸಿಕ್ಕಿದರೂ ಒಳನುಗ್ಗಿಕೊಂಡು ಬರುವ ಚಾಲಕನ ಚತುರತೆ, ಚುರುಕುತನ ಕಂಡು ಬೆರಗಾದೆ. ರೋಡ್ನಲ್ಲಿ ಬರುವಾಗ ಎದುರು ಸಿಂಹವೇ ಬಂತು ಎಂದು ವಾಹನಗಳು ಇಲಿಗಳಂತೆ ಬದಿಗೆ ಸರಿಯುವುದು. ಕಣ್ಣಲ್ಲಿ ನಗು, ಕೈಯಲ್ಲಿ ಸನ್ನೆ ಮಾಡಿಯೇ ಮುಂದೆ ಬರುವ ವಾಹನದ ಚಾಲಕರನ್ನು ಮಂತ್ರಮುಗ್ಧಗೊಳಿಸುತ್ತಾನೆ. ತನ್ನ ಹಿಡಿತದಲ್ಲಿ ಬಸ್ ಇದ್ದರೂ ಕೆಲವೊಂದು ಬಾರಿ ಕಣಂತೂರ್ ಆಸ್ಪತ್ರೆಗೂ ದಾಖಲಾದ ಸಂಗತಿ ಉಂಟು. ಏನೇ ಆದರೂ ನನ್ನ ಹಾಗೂ ಕಣಂತೂರ್ ಬಸ್ಸ್ನ ಒಡನಾಟ ಒಂದು ಸುಂದರವಾದ ಅನುಭವ. ಹಲವಾರು ಸ್ನೇಹ ಸಂಬಂಧದ ಬೆಸುಗೆ.'ಎಕ್ಸ್ಪ್ರೆಸ್ಸ್' ಎಂಬ ಪದಕ್ಕೆ ತಕ್ಕಂತೆ ಮಿಂಚಿನ ವೇಗದಲ್ಲಿ ಸಾಗುವ ಕಣಂತೂರ್ ಇತರ ವಾಹನಗಳ ಕಡೆಯೂ ನಿಗ ಇಟ್ಟು ಸುಗಮ ಪ್ರಯಾಣ ಮಾಡಲಿಯೆಂದು ನನ್ನ ಆಶಯ. ಇನ್ನು ನನ್ನ ಹಾಗೂ ಕಣಂತೂರ್ ಬಸ್ಸ್ನ ಸ್ನೇಹ ಒಡನಾಟ ಆರು ತಿಂಗಳು ಮಾತ್ರ. ಐ ಮಿಸ್ ಯು ಕಣಂತೂರ್.
ಯತೀಶ್
ದ್ವಿತೀಯ ಎಂ.ಎ

No comments:

Post a Comment

  ಬಿತ್ತಿ ವಿಶೇಷಾಂಕ 2017