1/21/15

ಕಣ್ಮರೆಯಾಗುತ್ತಿದ್ದ ಈಚಲು ಓಲೆಯ ಚಾಪೆಗಳು
ಸುಮಾರು ಹತ್ತು ಇಪ್ಪತ್ತು ವರ್ಷದ ಹಿಂದೆ ಇದ್ದ ಈಚಲು ಓಲೆಯ ಚಾಪೆಗಳು ಇಂದು ಎಲ್ಲಿ ಹೋದವು ಬಲ್ಲಿರಾ? ಕುಡುಬಿ ಜನಾಂಗದ ಹೆಂಗಸರು ಈಚಲು ಓಲೆಯ ಚಾಪೆ ಹೆಣೆಯುವುದರಲ್ಲಿ ನಿಪುಣರು. ಈಗ ಇದು ಇವರ ಕೈಯಿಂದ ಇಳಿದು ಹೋಗಿದೆ. ಕುಡುಬಿ ಮಹಿಳೆಯರು ಹೆಣೆವ ಚಾಪೆ ಅವರ ಬದುಕಿನ ಉಪ ಕಸುಬು. ಅವರದು ತಾಳಿಕೆ ಬಾಳಿಕೆಗೆ ಹೆಸರಾದ ಚಾಪೆ. ಅವರು ಎರಡು ಬಗೆಯ ಚಾಪೆಗಳನ್ನು ಹೆಣೆಯುತ್ತಾರೆ. ಒಂದು ಈಚಲ ಒಲಿಯಿಂದ ಇನ್ನೊಂದು ದೋರೆ ಹುಲ್ಲಿನಿಂದ ಹೆಣೆಯುವಂತದ್ದು. ದೂರದ ಕಾಡುಗಳಲ್ಲಿ ಅಲೆದು ಚಾಪೆಗೆ ಬೇಕಾದ ಮೂಲ ವಸ್ತುವನ್ನು ಸಂಗ್ರಹಿಸುತ್ತಾರೆ. ತಾವು ಹೆಣೆದ ಚಾಪೆಗಳನ್ನು ಮಹಿಳೆಯರೇ ಊರ ಸಂತೆಯಲ್ಲಿ ಅಗ್ಗದ ಬೆಲೆಗೆ ಮಾರಿ ಬರುತ್ತಾರೆ. ಚಾಪೆ ಹೆಣೆಯುವುದು ಅವರಿಗೆ ಬಿಡುವಿನ ವೇಳೆಯ ಕಸುಬು ಶ್ರಮಜೀವಿಗಳಾದ ಕುಡುಬಿ ಮಹಿಳೆಯರು ತೋಟ, ಗದ್ದೆಗಳಲ್ಲಿ ದಿನ ಬಹುಪಾಲು ದುಡಿಯುತ್ತಾರೆ. ಮನೆಯಲ್ಲಿ ಮನೆಕೆಲಸ ಮಾಡುತ್ತಾ ಉಳಿದ ಬಿಡುವಿನ ಕೊಂಚ ಕಾಲ ಚಾಪೆಯ 'ಪಟ್ಟಿ' ಹೆಣೆಯುವುದರಲ್ಲಿ ನಿರತರಾಗುತ್ತಾರೆ. ದೋರೆಹುಲ್ಲನ್ನು ಮಹಿಳೆಯರೇ ಮುಂಜಾನೆ ದೂರದ ಗುಡ್ಡಗಳಿಗೆ ತೆರಳಿ ಬುಡಸವರಿ ತರುತ್ತಾರೆ. ಈಚಲು ಮರದ ಒಲಿ(ಓಲೆ) ತರುವುದಕ್ಕೆ ಗಂಡಸರ ನೆರವು ಬೇಕು. ತಂದ ಓಲೆಯ ತುದಿ ಬುಡವನ್ನು ಒಪ್ಪವಾಗಿ ಕತ್ತರಿಸಿ ಹದವಾಗಿ ಬಿಸಿಲಿಗೆ ಒಣಗಿಸಿ ಸಿದ್ದಗೊಳಿಸಿದುದನ್ನು ಬಿಡುವಾದಾಗಲೆಲ್ಲ ಕುಳಿತು ಚಾಪೆ ಹೆಣೆಯುತ್ತಾರೆ. ಇದು ಅವರಿಗೆ ಹವ್ಯಾಸ ಮಾತ್ರ ಹಲವು ದಿನಗಳ ಪ್ರಯತ್ನದ ಫಲವಾಗಿ ಮೂಡಿ ಬಂದ ಚಾಪೆಗೆ ಸಿಗುವುದು ಏಳೆಂಟು ರೂಪಾಯಿ ಈಗ ಅಪರೂಪವಾಗಿ ಹಿಂದಿನ ತಲೆಮಾರಿನ ಮಹಿಳೆಯರು. ಚಾಪೆ ಹೆಣೆಯುತ್ತಾರೆ. ಈಗ ಅದರ ಬೆಲೆ ನೂರರಿಂದ ನೂರರ್ವತ್ತರವರೆಗೆ ಇದೆ. ಈಗ ಯಂತ್ರ ನಿಮರ್ಿತ ನುಣುಪಾದ ಪ್ಲಾಸ್ಟಿಕ್ ಚಾಪೆಗಳು ಮಾಕರ್ೆಟ್ಗೆ ಇಳಿದಿದ್ದು ಕುಡುಬಿಯರ ಚಾಪೆಯನ್ನು ಕೇಳುವವರೆ ಇಲ್ಲ. ಹೀಗಾಗಿ ಚಾಪೆ ನೇಯುವ ಕೈಗಳಿಗೆ ವಿರಾಮವಾಗಿದೆ. ಅಲ್ಲದೆ ಆಧುನಿಕ ಯುಗದಲ್ಲಿ ಕುಡುಬಿ ಜನರು ಹಿಂದಿನ ತಮ್ಮ ಕುಶಲ ಕಲೆಯನ್ನು ಉಳಿಸಿಕೊಂಡು ಬಂದದ್ದು ಕೆಲವರೇ ಆದ್ದರಿಂದ ಇದು ತೆರೆಮರೆಯಲ್ಲಿ ಕಣ್ಮರೆಯಾಗುತ್ತಿದೆ.
ಅಕ್ಷತಾ
ದ್ವಿತೀಯ ಎಂ.ಎ ಕನ್ನಡ ವಿಭಾಗ

No comments:

Post a Comment

  ಬಿತ್ತಿ ವಿಶೇಷಾಂಕ 2017