1/21/15

ಹೆಣ್ಣೇ ನೀನು ದೇವತೆ...!
ಇದು ನಮ್ಮ ಸಂಸ್ಕೃತಿ! ಇದು ನಮ್ಮ ಸಭ್ಯತೆ!
ಇರಲು ಸಾವಿರಾರು ಹಬ್ಬ ಹರಿದಿನಗಳು
ಪ್ರತಿವರುಷ ಬರುವ ಯುಗಾದಿ, ದೀಪಗಳ ಸಾಲಾವಳಿಯ ದೀಪಾವಳಿ
ಹೆಣ್ಣೇ ನೀನು ದೇವತೆ, ಶಕ್ತಿ ಸ್ವರೂಪಿಣಿ ಎನ್ನುವವರೇ,
ಹೆಣ್ಣನ್ನೇ ತುಳಿವರು, ಕೀಳಾಗಿ ಕಾಣುವರು.
ಗೃಹಲಕ್ಷ್ಮೀ ಎನ್ನುವವರು, ಬೆಂಕಿ ಜ್ವಾಲೆಗೆ ತಳ್ಳುವರು.
ಅತ್ಯಾಚಾರ ಮಾಡುವವರು ವ್ಯಭಿಚಾರಿ ಪಟ್ಟಕಟ್ಟುವರು.
ಓ ಹೆಣ್ಣೇ ನೀನೆಂದೂ ತಪ್ಪು ಮಾಡಿಲ ್ಲಎಂದು ಹೇಳುವವರೆ
ಇಲ್ಲಾ..
ಮಾತಾಡಿದರೂ ತಪ್ಪುಎನ್ನುವರು
ಮಾತಾಡದೇ ಮೌನವಾಗಿದ್ದರೂ ತಪ್ಪುಎನ್ನುವರು
ಒಟ್ಟಾರೇ ಈ ಪಾಪಿ ಪ್ರಪಂಚದಲ್ಲಿ ಹೆಣ್ಣಾಗಿ ಹುಟ್ಟಿ ಬದುಕುವುದೇ ಕಷ್ಟವೆನಿಸಿದೆ...
ಈ ರೀತಿಯ ಅನಿಸಿಕೆ ನನಗೆ ಮಾತ್ರವೋ ಅಥವಾ
ಪ್ರಪಂಚದಲ್ಲಿರುವ ಎಲ್ಲಾ ಹೆಣ್ಣಿಗೂ ಅನಿಸುತ್ತಿದೆಯಾ ಎಂಬುದೇ ಅರ್ಥವಾಗುತ್ತಿಲ್ಲ....
ಇದನ್ನೆಲ್ಲಾ ಪ್ರತಿಭಟಿಸಿ, ಧಿಕ್ಕರಿಸಿ ಕೂಗ ಬೇಕೆನಿಸುತ್ತಿದೆ.
ಹೆಣ್ಣಿಗೆ ದೇವತೆಗಳ ಪಟ್ಟಕೊಡಿ
ಅವಳದೇ ಆದ ಸ್ಥಾನ ನೀಡಿ
ಬದುಕಲು ಬಿಡಿ ಎಂದು ಕೂಗುತ್ತೇನೆ.
ಒಂದಲಾ ್ಲಒಂದು ದಿನ ಈ ಕೂಗು ದೇವಲೋಕಕ್ಕೆ ತೆರಳಿ
ನಿಜ ಸಂಸ್ಕೃತಿ ಅರಿವಾಗಿ ನನ್ನ ಜನ್ಮ ಸಾರ್ಥಕವಾಗಬಹುದು....

ಅರ್ಚನಾ ಎಸ್ ಶೆಟ್ಟಿ
ಪ್ರಥಮ ಎಂ.ಎ. 
ಕನ್ನಡ ವಿಭಾಗ

No comments:

Post a Comment

  ಬಿತ್ತಿ ವಿಶೇಷಾಂಕ 2017