1/21/15

ದೀಪದ ಸ್ಫೂರ್ತಿ
ಅಂಧಕಾರವನ್ನೆಲ್ಲಾ ತನ್ನ ಕೆಳಗೆ ಹಿಡಿದಿಟ್ಟು ಸುತ್ತಲೂ ಬೆಳಕು ಕೊಡುವ ದೀಪವು ಮುಖ್ಯವಾಗಿ ಮಣ್ಣು/ಹಣತೆ, ಎಣ್ಣೆ, ಬತ್ತಿ/ಹತ್ತಿ, ಬೆಂಕಿಪೊಟ್ಟಣ ಮತ್ತು ಜ್ವಾಲೆ ಎಂಬ ಪಂಚ ಮೂಲಭೂತ ವಸ್ತುಗಳೊಂದಿಗೆ ಬೆಳಗುವ ಅಶಾಕಿರಣ. ಅದೇ ದೀಪಾವಳಿ ಶಬ್ದವನ್ನು ಬಿಡಿಸಿ ಬರೆದಾಗ ದೀಪ+ಆವಳಿ ಎಂಬ ಎರಡೂ ಅರ್ಥ ಉದ್ಭವಿಸುವುದು. ದೀಪಗಳ ಸಾಲು ಇವುಗಳ ಒಟ್ಟಿನ ಅರ್ಥ.
ಹದಿನಾಲ್ಕು ವರ್ಷ ವನವಾಸ ಮುಗಿಸಿ ಬಂದ ಅಯೋಧ್ಯೆಯ ಶ್ರೀರಾಮಚಂದ್ರನಿಗೋಸ್ಕರ ಅಲ್ಲಿಯ ಪ್ರಜೆಗಳು ಆರಂಭಿಸಿದ ಈ ಉತ್ಸವ  ಆಚರಣೆಯು ಅಶ್ವಯುಜ ಕೃಷ್ಣ ತ್ರಯೋದಶಿ(ಧನತ್ರಯೋದಶಿ), ಅಶ್ವಯುಜ ಕೃಷ್ಣ ಚತುರ್ದಶಿ(ನರಕ ಚತುರ್ದಶಿ), ಅಮಾವಾಸ್ಯೆ(ಲಕ್ಷ್ಮೀ ಪೂಜೆ) ಮತ್ತು ಕಾತರ್ಿಕ ಶುಕ್ಲ ಪ್ರತಿಪದೆ (ಬಲಿ ಪ್ರತಿಪದೆ) ಎಂದು ಇಂದಿಗೂ ನಾಲ್ಕು ದಿನಗಳ ಕಾಲ ಭಾರತದಾದ್ಯಂತ ವಿಶೇಷವಾಗಿ ಆಚರಿಸಲ್ಪಡುತ್ತಿದೆ. ಶ್ರೀಕೃಷ್ಣನು ಅಸುರೀ ವೃತ್ತಿಯ ನರಕಾಸುರರನ್ನು ವಧಿಸಿ ದೈವಿವಿಚಾರಗಳನ್ನು ಮೂಡಿಸಿ ಸಜ್ಜನ ಶಕ್ತಿಯನ್ನು ಮೆರೆಯುವ ಆಚರಣೆಯು ದೀಪಾವಳಿಯಾಗಿ ರೂಪುಗೊಂಡಿದೆ ಎಂಬ ಗೂಡಾರ್ಥವನ್ನು ಒಳಗೊಂಡಿದೆ.
ಒಟ್ಟಿನಲ್ಲಿ ದೀಪದಂತೆ ಮಾನವನು ತನ್ನಲ್ಲಿರುವ ಅಂಧಕಾರವನ್ನು, ಅಂದರೆ ದುಷ್ಟತನವನ್ನು ಕಡಿಮೆ ಗಾತ್ರಕ್ಕೆ ತಂದು ಒಳ್ಳೆಯ ಆಚಾರ, ವಿಚಾರ, ನಡತೆ ಎಂಬ ಬೆಳಕನ್ನು ನಮ್ಮ ಸುತ್ತಲಿರುವ ಎಲ್ಲರಿಗೂ ನಾವು ಹರಡಿಸುವಂತೆ ಮಾಡುವುದೇ ದೀಪಾವಳಿಯ ನಿಜವಾದ ಆಚರಣೆ ಅಲ್ಲವೇ ಸ್ನೇಹಿತರೇ?

ಆನಂದ್ ಬಿ. ಆರ್.
ದ್ವಿತೀಯ ಎಂ.ಎಸ್ಸಿ
ಯೋಗ ವಿಜ್ಞಾನ ವಿಭಾಗ

No comments:

Post a Comment

  ಬಿತ್ತಿ ವಿಶೇಷಾಂಕ 2017