1/21/15

ನಿನ್ನೊಲವ ನಾ ಹೇಗೆ ಬಣ್ಣಿಸಲಿ
ಕಣ್ಣಿನೊಳಗೆ ಕನಸಾಗಿ, 
ಮನಸಿನೊಳಗೆ ನೆನಪಾಗಿ,
ಹೃದಯದೊಳಗೆ ಪ್ರೀತಿಯ ಹೂವಾಗಿ
ಈ ಜೀವದ ಉಸಿರಾಗಿ 
ಸದಾ ನನ್ನ ಜೊತೆಯಿರುವ

ನನ್ನಮ್ಮ
ಹಾಲುಣಿಸಿ ಮಾತು ಕಲಿಸಿ, ನಡೆಸಿ
ಬಂಗಾರದ ಬದುಕನ್ನು ನೀಡಿದ ಜೀವ
ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಜೀವ
ಕಷ್ಟ ಬಂದರೂ, ನೋವುಂಡರೂ ನಲುಗದ ಜೀವ
ಅವಳೇ ನನ್ನಮ್ಮ
ಕಷ್ಟಗಳು ಬಂದರೂ ಮಕ್ಕಳಿಗಾಗಿ
ಮರುಗುವ
ಸರ್ವಸ್ವವನ್ನೇ ಜೀವನದುದ್ದಕ್ಕೂ
ಧಾರೆಯೆರೆವ
ಎಲೆ ಮರೆಯ ಕಾಯಿಯಂತೆ
ದುಡಿಯುವ
ಅವಳೇ ನನ್ನಮ್ಮ
ದಣಿದು, ಸೋತು ಬಂದಾಗ ಮೈದಡವಿ
ಸಾಂತ್ವನ ನೀಡುವ
ಬಿದ್ದಾಗ ಪೆಟ್ಟು ಕೊಟ್ಟು ನಿಲ್ಲಿಸುವ
ಆರೈಕೆ ಪ್ರೀತಿಕೊಟ್ಟು ಪ್ರತಿಫಲ
ನಿರೀಕ್ಷಿಸದ ಜೀವ 
ಅವಳೇ ನನ್ನಮ್ಮ
ಗಂಡನ ಹುಟ್ಟುಹಬ್ಬಕ್ಕೆ
ಶುಭಾಶಯ ಹೇಳುವ
ಮಕ್ಕಳ ಹುಟ್ಟುಹಬ್ಬಕ್ಕೆ 
ಪಾಯಸ ಮಾಡುವ
ಆ ಬಡಪಾಯಿ ಜೀವದ ಋಣ
ತೀರಿಸಲಾಗುತ್ತದೆಯೇ?
ಅವಳೇ ನನ್ನಮ್ಮ....

-ರಂಜಿತ್
 ಪ್ರಥಮ ಎಂ.ಎ.
 ಕನ್ನಡ ವಿಭಾಗ.

No comments:

Post a Comment

  ಬಿತ್ತಿ ವಿಶೇಷಾಂಕ 2017