1/21/15

   ಮನೋಧರ್ಮ
ಓ ಗಂಡಸೇ ನೀನೆಂಥಹ ಗಂಡು
ನಿನ್ನದೆಂಥಹ ಮನಸ್ಸು
ನಿನ್ನನ್ನು ನಿನ್ನ ತಾಯಿ ಹಡೆಯಲಿಲ್ಲವೇ?
ನೀನು ತುಂಟಾಟದಿಂದ ಮಾಡಿದ ಚೇಷ್ಟೆಯನ್ನು ಸಹಿಸಲಿಲ್ಲವೇ?
ನೀನು ಕೊಟ್ಟ ಉಪದ್ರದಿಂದ ಬದುಕಲಿಲ್ಲವೇ?
ನಿನ್ನನ್ನು ನಿನ್ನ ತಾಯಿ ಸಾಕಿ ಸಲಹಲಿಲ್ಲವೇ?
ನಿನಗೆ ಬುದ್ಧಿ ಬಂದಾಗ ನಿನ್ನ ತಾಯಿ ಬೇಡವಾದಳೇ?
ಏಕೆ ಮೂಢನ ಹಾಗೆ ವತರ್ಿಸುವೇ?
ಹಿಂದೆ ನಿನ್ನ ತಾಯಿ ನಿನ್ನಲ್ಲಿ ನೀನಾಗಿ ಬದುಕಲಿಲ್ಲವೇ?
ನಿನಗೆ ಸಂಗಾತಿ ಬೇಕೆಂದು
ನೀನು ವಿವಾಹವಾದೆ!
ಎರಡು ವರ್ಷದಲ್ಲಿ ಸಾಕಾಯಿತೆ ಈ ಸಂಸಾರ!
ನಿನ್ನ ಆಸೆಯಿಂದ ದೇವರಂತಹ
ಮಗು ಈ ಜಗತ್ತಿಗೆ ಕಾಲಿಟ್ಟಿತು.
ನೀನು ಮುಗುವಾಗಿದ್ದಾಗ ಮಾಡಿದ
ಚೇಷ್ಟೆಯ ಹಾಗೆ ನಿನ್ನ ಮಗು ಮಾಡಿದಾಗ
ಸಹಿಸಲಾಗುವುದಿಲ್ಲವೇ???
ಏನು ಅರಿಯದ ಮಗು ಮಾಡಿದ
ತಪ್ಪಿಗೆ ಅದಕ್ಕೆ ಕ್ಷಮೆ ಇಲ್ಲವೇ?
ನಿನಗೆ ಸಂಗಾತಿ ಹೇಗೆ ಮುಖ್ಯವೋ
ಹಾಗೆ ನಿನ್ನ ಮಗು ಮುಖ್ಯವಾಗುವುದಿಲ್ಲವೇ?
ಆ ಮಗುವಿನ ಆಟ ಪಾಠ ನಿನಗೆ ಬೇಡವಾಯಿತೆ?
ಏಕೆ ಈ ತಾತ್ಸಾರ!
ಸಂಸಾರದ ಹೊರೆ ಹೊರುವುದು
ನಿನ್ನ ಕರ್ತವ್ಯವಲ್ಲವೇ?
ಸಂಗಾತಿ ಬೇಡ! ಮಗು ಬೇಡ! ತಾಯಿ ಬೇಡ!
ಏಕೆ ಈ ತಿರಸ್ಕಾರ?
ನೀನು ಒಂಟಿಯಾಗಿದ್ದು ಏನು ಸಾಧಿಸುವೆ?
ಏನೂ ಬೇಡವಾದ ನಿನಗೆ
ಏಕೆ ಬೇಕಿತ್ತು ಈ ಸಂಬಂಧ?
ಸಂಬಂಧದ ಬೆಲೆ ಗೊತ್ತಿದೆಯೆ ನಿನಗೆ?
ನಿನ್ನ ವರ್ತನೆಯಿಂದ ನೀನು ಹಾಳಾಗಿ
ನಿನ್ನವರನ್ನೆಲ್ಲಾ ಏಕೆ ಹಾಳು ಮಾಡುವೆ?
ಓ ಗಂಡಸೇ ಬದಲಾಯಿಸಿಕೋ
ನೀ, ನಿನ್ನ ವರ್ತನೆಯನ್ನು
ನಿನ್ನಲ್ಲಿ ನೀನಾಗಿ ಬದುಕು
ಸಾಧಿಸು, ಜಗತ್ತಿನಲ್ಲಿ ಒಬ್ಬನಾಗಿ
ಸುಖದಿಂದ ಬಾಳ್ವೆಯನ್ನು ನಡೆಸು...
                    
                           ಶ್ರುತಿ ಬಿ.ಬಿ.
                           ದ್ವಿತೀಯ ಎಂ. ಎ. ಕನ್ನಡ ವಿಭಾಗ

No comments:

Post a Comment

  ಬಿತ್ತಿ ವಿಶೇಷಾಂಕ 2017