1/21/15

ಕಥಾ ಕಮ್ಮಟ 
ಇತ್ತೀಚೆಗೆ ಕಾರಂತ ಕಲಾಭವನದಲ್ಲಿ ನಡೆದ ಕಥಾ ಕಮ್ಮಟಕ್ಕೆ ಹೋಗಿದ್ದೆ. ಅಲ್ಲಿಂದಲೇ ನನ್ನ ಚಿಕ್ಕಮ್ಮನ ಮನೆಗೆ ತೆರಳಿದೆ. ಅದೇ ಸಮಯದಲ್ಲಿ ಅವರ ಊರಿನ ದೇವಸ್ಥಾನದ ಜೀಣರ್ೋದ್ಧಾರದ ಕೆಲಸ ನಡೆಯುತ್ತಿತ್ತು. ಅದನ್ನು ಕಾಣಲು ಎಂದು ನಾನು ಮತ್ತು ಚಿಕ್ಕಮ್ಮನ ಮಗಳು ಸ್ಮಿತಾ ಹೊರಟೆವು. ಹೀಗೆ ಹೋಗುತ್ತಿರುವಾಗ ದೇವಸ್ಥಾನದ ಕುರಿತಂತೆ ನನ್ನ ಕೆಲವು ಪ್ರಶ್ನೆಗಳನ್ನು ತೆರೆದಿಟ್ಟೆ. ಅವಳು ಅದಕ್ಕೆ ಉತ್ತರಿಸುತ್ತಲೇ ನಡೆದುಕೊಂಡು ಬರುತ್ತಿದ್ದಳು.ದಾರಿ ಬದಿಯ ಮನೆಯ ನಾಯಿಗಳು ಬೊಗಳಲು ಆರಂಭಿಸಿದವು. ಮನೆಯಲ್ಲಿದ್ದ ಮಹಿಳೆಯೊಬ್ಬರು ಹೊರಬಂದು 'ಹ್ಞಾಂ... ದೂರ ಹೊಂಟ್ರೀ... ಎಂದರು. ಕೂಡಲೇ, ದೇವಸ್ಥಾನಕ್ಕೆ ಎಂದು ಸ್ಮಿತಾ ಪ್ರತ್ಯುತ್ತರಿಸಿದಳು. ನನ್ನನ್ನು ಕಂಡ ಆ ಮಹಿಳೆಯ ಮುಖದಲ್ಲಿ, ಏನೋ ಗೊಂದಲ, ಏನೋ ಅನುಮಾನ, ಇದನ್ನು ಕಂಡ ನಾನು ಮುಂದೆ ನಡೆದು ಹೋಗುತ್ತಿದ್ದಂತೆ ಹಿಂತಿರುಗಿ ನೋಡಿದೆ. ಆ ಮಹಿಳೆ ಅಲ್ಲೇ ನಿಂತು ನನ್ನನ್ನು ನೋಡುತ್ತಿದ್ದರು. ಪರಿಸ್ಥಿತಿಯ ಅರಿವಾಗಿ ನಾನು ಅಲ್ಲೇ ನಿಂತು, ಇವಳು ನನ್ನ ಸ್ವಂತ ಚಿಕ್ಕಮ್ಮನ ಮಗಳು ಎಂದೆ. ಆ ಕ್ಷಣ ಅವರ ಮುಖದಲ್ಲಿ ಮೂಡಿದ ಸಮಾಧಾನಕರ ನಗುವನ್ನು ಕಂಡು ನನಗೂ ಸಮಾಧಾನವಾಯಿತು. ಹೀಗೆ ಮುಂದೆ ನಡೆದು ದೇವಾಸ್ಥಾನಕ್ಕೆ ತಲುಪಿದೆವು. ದೇವಸ್ಥಾನವನ್ನೆಲ್ಲಾ ವೀಕ್ಷಿಸಿ ಮನೆಗೆ ಹಿಂತಿರುಗಿದೆವು.
ದೀಪಕ್ ಎನ್ ದುರ್ಗ
ದ್ವಿತೀಯ ಎಂ.ಎ ಕನ್ನಡ ವಿಭಾಗ

No comments:

Post a Comment

  ಬಿತ್ತಿ ವಿಶೇಷಾಂಕ 2017