1/21/15

ಕನ್ನಡ ರಾಜ್ಯೋತ್ಸವ ಮತ್ತು ಸರ್ಕಾರಿ ರಜೆ
ನವೆಂಬರ್ 1 ಕನ್ನಡ ರಾಜ್ಯೋತ್ಸವ. 1956 ರಲ್ಲಿ ಭಾಷಾವಾರು ಪ್ರಾಂತ್ಯಗಳಿಗೆ ಅನುಗುಣವಾಗಿ ಏಕೀಕರಣಗೊಂಡಿತು. ಮೈಸೂರು ರಾಜ್ಯಕ್ಕೆ ಅಂದರೆ ರಾಜಸಂಸ್ಥಾನಕ್ಕೆ ಕೊಡುವ ಗೌರವವನ್ನು ಹಾಗೇ ಉಳಿಸಿಕೊಂಡು ಬರಲಾಗಿತ್ತು. ಏಕೀಕರಣದ ಸಂದರ್ಭದಲ್ಲಿ ಕನ್ನಡ ನಾಡುನುಡಿಯ ಪರಿಕಲ್ಪನೆಯ ಕಿಚ್ಚು ಹರಡಿತ್ತು. ನಂತರದಲ್ಲಿ ನವೆಂಬರ್ 1/ 1973ರಲ್ಲಿ ಡಿ.ದೇವರಾಜ್ ಅರಸುರವರು ಕನರ್ಾಟಕ ಎಂಬ ಹೆಸರನ್ನು ನಾಮಕರಣಗೊಳಿಸಿದರು. ಇದರ ನೆನಪಿನಲ್ಲಿ ಪ್ರತಿವರ್ಷವೂ ಆ ದಿನವನ್ನು ಆಚರಿಸಿ ಸಂಭ್ರಮಿಸುವುದು ಸಾಮಾನ್ಯವಾದರೂ ಕನ್ನಡಿಗರಾದ ನಮ್ಮ ಆದ್ಯ ಕರ್ತವ್ಯವೂ ಹೌದು.
ಕನ್ನಡ ರಾಜ್ಯೋತ್ಸವ ಮುಂತಾದ ಹಲವಾರು ವಿಶೇಷ ದಿನಗಳ ನೆನಪಿನಲ್ಲಿ ನಮಗೆ ಸಕರ್ಾರಿ ರಜೆಗಳು ಇವೆ. ಆದರೆ ಇಂದು ಅವುಗಳ ಮಹತ್ವ ಮರೆತು ಹೋಗಿ ಇನ್ಯಾವುದೋ ಅನಾವಶ್ಯಕ ಕಾರಣಗಳಿಗಾಗಿ ಕಳೆದು ಇದರ ಮಹತ್ವ ಮರೆತು ಹೋಗುತ್ತವೆ. ಕನ್ನಡದ ಏಳಿಗೆ, ನಾಡು, ಭಾಷೆ ಮತ್ತು ಸಾಹಿತ್ಯಕ್ಕೆ ದುಡಿದವರನ್ನು ನಾವು ನೆನಪಿಸಿ ಗೌರವಿಸಿಕೊಂಡು ಬರುತ್ತಿದ್ದರೂ ಇನ್ನೂ ಅದೆಷ್ಟೋ ಪ್ರತಿಭೆಯ ಜನರು ಎಲೆಮರೆಯಾಗಿ ಉಳಿದು ಕೊಂಡು ಬಿಟ್ಟಿದ್ದಾರೆ.
ಸುಮಾರು ನಾಲ್ಕನೆಯ ಶತಮಾನದಿಂದಲೇ ಕನ್ನಡದ ಕುರಿತು ಉಲ್ಲೇಖವಿರುವುದು ಸಾಹಿತ್ಯ ಮತ್ತು ಚರಿತ್ರೆಗಳಲ್ಲಿ ಕಂಡುಬಂದರೂ ನಂತರದಲ್ಲಿ ಬೆಳೆದು ನವೋದಯ, ನವ್ಯ, ಪ್ರಗತಿಶೀಲ, ದಲಿತ-ಬಂಡಾಯ ಮತ್ತು ಸ್ತ್ರೀ ಸಂವೇದನೆಗಳೊಂದಿಗೆ ಹರಡಿ ನಿಂತಿದೆ. ಇಂಗ್ಲೀಷ್ ಎಂಬ ಹೊಸ ನೀರು ಅದೆಲ್ಲಿಂದಲೋ ಕನ್ನಡಕ್ಕೆ ಹರಿದು ಬಂದು ಕನ್ನಡ ಸಾಹಿತ್ಯದಲ್ಲಿ ಬಂದು ಹೊಸ ಸಂಚಲನ ಉಂಟು ಮಾಡಿತು ಆದರೇ ಕಾಲಕ್ರಮೇಣ ಇದರ ಪ್ರಾಭಲ್ಯ ಸಾಹಿತ್ಯ ಮತ್ತು ಭಾಷೆಯ ಮೇಲೆ ಹೆಚ್ಚು ಆವರಿಸಿಕೊಂಡಿತು.
ಆಧುನಿಕ ತಲೆಮಾರುಗಳಾದ ಯುವ ಜನರು ಇಂದು ಮಾತನಾಡುವ ಕನ್ನಡ ಭಾಷೆಯನ್ನು ಗಮನಿಸಿದರೆ ಕಸಿವಿಸಿಯಾಗುತ್ತದೆ. ಇಂದು ನಾವು ಮಾತನಾಡುವ ಕನ್ನಡ ಭಾಷೆಯ ನೂರರಲ್ಲಿ ನಾಲ್ವತ್ತರಿಂದ ಐವತ್ತು ಭಾಗದಷ್ಟು ಇಂಗ್ಲೀಷ್  ಪದಗಳ ಬಳಕೆಯಾಗುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ನಮಗೆ ಕಾಣಸಿಕ್ಕುವುದು ಮಾಧ್ಯಮಗಳು. ಇಂದು ದೃಶ್ಯ ಶ್ರವ್ಯ ಮಾಧ್ಯಮಗಳು ತಮ್ಮಲ್ಲಿ ಜನರನ್ನು ಮುಟ್ಟುವ ಸಲುವಾಗಿ ಬಳಸಿಕೊಳ್ಳುವ ಭಾಷೆಯು ಇದಕ್ಕೆ ಉದಾಹರಣೆಯಾಗಿದೆ. ಪ್ರಸಾರ ಮಾಡುವ ಧಾರಾವಾಹಿಗಳಾಗಲೀ ಇತರ ಕಾರ್ಯಕ್ರಮಗಳಾಗಲೀ ಅದು ಜನರಿಗೆ ನೀಡುವ ಸಾಮಾಜಿಕ ಕಳಕಳಿ ಮತ್ತು ಮೌಲ್ಯಗಳು ಇಂದು ಕಡಿಮೆಯಾಗುತ್ತಾ ಬರುತ್ತಿದೆ. ಆಕರ್ಷಣೆಯನ್ನು ಕೇಂದ್ರವಾಗಿರಿಸಿ ತಮ್ಮ ಟಿ.ಆರ್.ಪಿ. ಬೆಲೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಆಸಕ್ತಿ ವಹಿಸುತ್ತಿವೆ. ಮಾಧ್ಯಮವು ಇಂದು ಭಾಷೆಯನ್ನು ಮುಖ್ಯವಾಗಿ ಕನ್ನಡ ಭಾಷೆಯನ್ನು ಶುದ್ಧತೆಯಿಂದ , ಸರಳವಾಗಿ ಇನ್ನೂ ಹೆಚ್ಚಿನ ಎತ್ತರಕ್ಕೆ ಬೆಳೆಸಬಲ್ಲವು. ಅವುಗಳಿಗೆ ಅದರ ಸಾಮಾರ್ಥ್ಯವಿದೆ.
ಭಾಷೆ ಮತ್ತು ಉದ್ಯೋಗಕ್ಕೆ ಇಂದು ಸಂಬಂಧವನ್ನು ಕಲ್ಪಿಸಲಾಗುತ್ತದೆ. ಹಾಗಾಗಿ ಅನ್ಯಭಾಷೆಗಳು ಇಂದು ತಮ್ಮ ಮೂಲ ಭಾಷೆಯನ್ನು ಮರೆಯುವಂತೆ ಮಾಡಿದೆ. ಉದ್ಯೋಗ ಅವಕಾಶಗಳು ಇಂದು ಹೊಟ್ಟೆಪಾಡಿಗಾಗಿ ಅನಿವಾರ್ಯವಾದ ಕಾರಣ ಇದು ಎಲ್ಲರನ್ನು ಆವರಿಸಿಬಿಟ್ಟಿದೆ. ಇದರ ಅರ್ಥ ಇತರ ಭಾಷೆಗಳು ಕೆಟ್ಟದು ನಮ್ಮ ಭಾಷೆ ಉತ್ತಮವೆಂದಾಗಲಿ ಅಲ್ಲ. ನಮ್ಮ ಭಾಷೆಯನ್ನು ಉಳಿಸಿ ಬೆಳೆಸಿ ಇತರ ಭಾಷೆಗಳನ್ನು ಕಲಿತುಕೊಂಡು ಅವುಗಳಲ್ಲಿ ಒಳ್ಳೆಯದನ್ನು ಸ್ವೀಕರಿಸಬೇಕು ಮತ್ತು ಅವುಗಳನ್ನು ನಮ್ಮ ಭಾಷೆಗೆ ಕೊಡುಗೆಯಾಗಿಸಬೇಕು. ಆದರೆ ಅವುಗಳು ನಮ್ಮನ್ನು ಆಳುವಂತಾಗಬಾರದು ನಮ್ಮ ಭಾಷೆ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಜವಾಬ್ದಾರಿ ನಮಗಿದ.ೆ ಅನ್ಯ ಭಾಷೆಗಳನ್ನು ನಮ್ಮ ಉದ್ಯೋಗ ಮತ್ತು ಜ್ಞಾನಾರ್ಜನೆಗಾಗಿ ಬಳಸಿಕೊಂಡರೆ ಕನ್ನಡವನ್ನು ನಮ್ಮ ಉಸಿರಾಗಿ ಬೆಳೆಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಕನ್ನಡ ರಾಜ್ಯೋತ್ಸವವು ಸಕರ್ಾರಿ ರಜೆಯ ಕಾಲಹರಣದ ದಿನವಾಗಿ ಬಳಸದೆ ಕನ್ನಡಕ್ಕೆ ಒಂದು ಕೊಡುಗೆಯಾಗಿ ಬಳಸಿಕೊಳ್ಳೋಣ. ಕನ್ನಡ ಭಾಷೆಯ ಉಳಿಸುವಿಕೆ ಮತ್ತು ಬೆಳೆಸುವಿಕೆಗೆ ಕಟಿಬದ್ಧರಾಗೋಣ.
ಸಂಪಾದಕ.








No comments:

Post a Comment

  ಬಿತ್ತಿ ವಿಶೇಷಾಂಕ 2017