1/21/15

ಕೃತಜ್ಞರಾಗೋಣ...ಪ್ರಸನ್ನರಾಗಿರೋಣ!!

"ಶಾಂತಿಯಿರಲಿ,ನೆಮ್ಮದಿಯಿರಲಿ!!" ಇದು ಜಗತ್ತಿನಾದ್ಯಂತ ಪ್ರತಿಯೊಂದು ಜೀವಿಯ ಮನದಾಳದ ಮಾತಾಗಿದೆ. ಇಂತಿರಲು ಪ್ರತಿದಿನ ನನ್ನನ್ನು ಭೇಟಿಯಾಗುವ ಹಿರಿವಯಸ್ಸಿನ ಸರಳ ಜೀವನ ಶೈಲಿಯ ಪ್ರಾಮಾಣಿಕ ವ್ಯಕ್ಕ್ತಿಯೊಬ್ಬರು ಬಂದು ಹೀಗೆ ಹೇಳಿದರು. "ಇವತ್ತು ನನಗೆ ನಮ್ಮ ಬೀದಿಯ ಎರಡೂ ಬದಿಯಲ್ಲಿ ತುಂಬ ದೊಡ್ಡದಾಗಿ ಬೆಳೆದಿದ್ದ ಹಾಳು ಗಿಡಗಳನ್ನು ಕಡಿದು ಸ್ವಲ್ಪ ಸುಸ್ತಾಗಿದೆ" ಅಂದು ಸೂಯರ್ಾಸ್ತದ ಬಳಿಕದ ನಮ್ಮ ಭೇಟಿಯಾದಾಗ ಹೇಳಿ ಮುಗುಳ್ನಕ್ಕಿ ಕೈಕಾಲು ಚಾಚಿ ಮಲಗಿ ಸಂಭಾಷಣೆಯಲ್ಲಿ ತಮ್ಮ ಆನಂದ ಸವಿಯ ತೊಡಗಿದರು.
"ಹಾಯ್! ಊಟ ಆಯಿತ? ಏನಿವತ್ತು?" ಎಂದು ನಾನು ದಿನಂಪ್ರತಿ ಊಟದ ತಟ್ಟೆ ಹಿಡಿದು ನಮ್ಮ ಹಾಸ್ಟೆಲ್ನಲ್ಲಿ ಊಟದ ಕೋಣೆಯೆಡೆಗೆ ಹೋಗುತ್ತಿದ್ದಾಗ ನನ್ನ ಸ್ನೇಹಿತನನ್ನು ಕೇಳಿದಾಗ  "ಅದೇ ಮರಾಯ! ಅದೇ ಅನ್ನ, ಅದೇ ಸಾರು" ಎಂದು ಆತ ಉದಾಸೀನ ಮುಖ ಮಾಡಿ ಪ್ರತಿಕ್ರಿಯಿಸಿದ.
ಮೇಲಿನ ಎರಡು ಸನ್ನಿವೇಶಗಳನ್ನು ವಿವರಿಸಿರುವುದರಲ್ಲಿ ಈ ಲೇಖನದ ಉದ್ದೇಶವೇನೆಂಬುದನ್ನು ತಾವು ಈಗಾಗಲೇ ಮನದಟ್ಟು ಮಾಡಿದ್ದೀರಿ ಎಂಬುದು ನನ್ನ ಭಾವನೆ. ಮೊದಲು ವಿವರಿಸಿದಂತಹ ವ್ಯಕ್ತಿಗಳು ನಮ್ಮನ್ನು ಯಾವತ್ತಾದರೂ, ಎಲ್ಲಿಯಾದರೂ ಭೇಟಿಯಾದರೆ ನಾವೇ ಪುಣ್ಯವಂತರು ಎನಿಸಬೇಕು. ಯಾಕೆಂದರೆ ಕೃತಜ್ಞ ಮನೋಭಾವವುಳ್ಳ ವ್ಯಕ್ತಿಗಳ ಸಂಖ್ಯೆ ಈ ಪ್ರಪಂಚದಲ್ಲಿ ಬಹಳ ಕಡಿಮೆ. ಅವರಿಗೆ ನೂರಾರು ಕೋಟಿ ಸಂಪತ್ತು ಸಿಕ್ಕರೂ ಅವರ ದಾಹ ನೀಗುವುದಿಲ್ಲ, ಕೊನೆಗೆ ಶೇಖರಿಸಿದ ಎಲ್ಲ ಸಂಪತ್ತು ಭೂಮಿಯ ಮೇಲೆಯೇ ಬಿಟ್ಟು ಅವರು ಮಾತ್ರ ಮಾಯವಾಗುತ್ತಾರೆ.
ಕೃತಜ್ಞ ಮನೋಭಾವನೆ ಇರುವವರು ಚಿಲ್ಲರೆ ಕಾಸಿನಲ್ಲೂ ಆನಂದ ಮತ್ತು ತೃಪ್ತಿ ಅನುಭವಿಸುತ್ತಾರೆ ಎಂಬುದು ವಿಶ್ವ ಸೃಷ್ಟಿಕರ್ತನ ನಿಯಮ. "ಇರುವ ಭಾಗ್ಯವ ನೆನೆದು, ಬಾರನೆಂಬುದನ್ನು ಬಿಡು, ಹರುಷಕ್ಕಿದೆ ದಾರಿ" ಎಂದು ಪ್ರಸಿದ್ಧ ಕವಿ ಡಿ.ವಿ.ಜಿ. ಹೇಳಿರುವ ಮಾತು ನಮ್ಮ ಸರಕಾರ ಪ್ರತಿ ಬಸ್ಸಿನಲ್ಲಿ ಅಲಂಕರಿಸಿದರೂ, ಜನರಿಗೆ ಮನದಟ್ಟು ಮಾಡಲು ಪುರುಸೊತ್ತಿಲ್ಲ. ಯಾಕೆಂದರೆ ಅವರು ಇನ್ನು ತಮ್ಮ ಬಾರನೆಂಬುದರ ದಾಹದಿಂದ ಹೊರ ಬಂದಿಲ್ಲ. ಆದ್ದರಿಂದ ಗೆಳೆಯರೇ 'ಕೃತಜ್ಞರಾಗೋಣ, ಪ್ರಸನ್ನನಾಗಿರೋಣ!!'
ಮುಹಮ್ಮದ್ ಸೈಫುಲ್ಲಾಹ್
ದ್ವಿತೀಯ ಎಂ.ಎ., ಇಂಗ್ಲೀಷ್   

No comments:

Post a Comment

  ಬಿತ್ತಿ ವಿಶೇಷಾಂಕ 2017