1/21/15

ಗಾಂಧಿಯ ದೂರದೃಷ್ಠಿಯಲ್ಲಿ ಮೋಡಿ ನಡೆದಿತೆ?

       ಗಾಂಧಿ ಎಂದ ಕ್ಷಣ ನಾವೆಲ್ಲರೂ 'ರಾಷ್ಟ್ರಪಿತ' ಎನ್ನುವ ಕಲ್ಪನೆಯನ್ನು ಇಟ್ಟುಕೊಂಡಿದ್ದೇವೆ. ಮಾತ್ರವಲ್ಲ ಗಾಂಧಿಯವರ ದೂರದೃಷ್ಠಿ ಎಲ್ಲರಿಗೂ ಎಲ್ಲಾ ಸಮಯದಲ್ಲೂ ಅನ್ವಯವಾಗುವಂತದು. ಗಾಂಧೀಜಿಯವರು ಕಂಡ ಕನಸು ಸ್ವಾತಂತ್ರ್ಯೋತ್ತರ ಭಾರತವನ್ನು ಮಾದರಿ ರಾಜ್ಯವಾಗಿ ನಿರೂಪಿಸುವ ಮಹತ್ವಕಾಂಕ್ಷೆಯನ್ನು ಹೊಂದಿದವರು. ಸಾಕಷ್ಟು ಸುಧಾರಣೆಯ ಬಳಿಕ ರಾಮರಾಜ್ಯದ ಕಲ್ಪನೆಯ ಕನಸು ಹೊಂದಿದ್ದರು, ಇದನ್ನು ಇಂದಿನ ಯುವ ಜನಾಂಗಕ್ಕೆ ಊಹಿಸಲು ಅಸಾಧ್ಯ. ಯಾಕೆಂದರೆ ಗಾಂಧೀಜಿ ಯವರು ಕೆಲವರಿಗೆ ಆದರ್ಶ ವ್ಯಕ್ತಿಯಾದರೆ ಇನ್ನು ಕೆಲವರಿಗೆ ಗಾಂಧೀಜಿ ಯವರ ಬಗ್ಗೆ ತುಂಬಾ ಹಗುರವಾಗಿ ಮಾತನಾಡುವುದನ್ನು ನೋಡುತ್ತೇವೆ. ಯಾಕೆಂದರೆ ಇಂದಿನವರಿಗೆ ಗಾಂಧೀಜಿ ಬೇಡ, ಮೋದಿ ಬೇಕು. ಹೀಗಾಗಲು ಹಲವಾರು ಕಾರಣವಿರಬಹುದು. ಕೆಲವರು ' ಮೋದಿ ಎಂಬ ಎದೆಯೊಳಗಿನ ಕೂಸು' ಹೆಸರೆತ್ತಿದ ಕ್ಷಣ ಸಿಡಿಮಿಡಿಗೊಳ್ಳುವ, ಉರಿದು ಬೀಳುವ ಯುವ ಜನಾಂಗದ ಬಿಸಿನೆತ್ತರು ಉಕ್ಕುತ್ತಿದೆ. ಈ ಉಕ್ಕುವ ರಕ್ತವನ್ನು ಬಳಕೆ ಹೇಗೆ ಮಾಡಬೇಕು ಎನ್ನುವುದು ಗೊತ್ತಿಲ್ಲ? ಯಾಕೆಂದರೆ ಮೋದಿ ಬಗ್ಗೆ ತಿಳಿದಿರುವ ನಾವು ಮೋದಿ ಸರಕಾರ ರೂಪಿಸುತ್ತಿರುವ ಒಂದು ಮಹತ್ವಕಾಂಕ್ಷೆ ಯೋಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಲಬೇಕು. ಅದುವೆ 'ಸ್ವಚ್ಚ ಭಾರತ್' ಅಭಿಯಾನದಲ್ಲಿ ಯುವ ಜನಾಂಗದ ಪಾತ್ರ ಬಹಳ ಮಹತ್ತರವಾದದು. ಯಾಕೆಂದರೆ ಸಿಕ್ಕ ಸಿಕ್ಕ ಕಡೆಗಳಲ್ಲಿ ಕಸಗಳನ್ನು ಮತ್ತು ಬೇಡದ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುವ ಜಾಯಮಾನ ಇಂದಿನ ಯುವ ಪೀಳಿಗೆಯಲ್ಲಿದೆ. ಅಷ್ಟು ಮಾತ್ರವಲ್ಲ ಇಲ್ಲಿ ಕಸ ಹಾಕಬಾರದು ಎಂಬ ಸೂಚನ ಫಲಕ ಇದ್ದ ಜಾಗದಲ್ಲೆ ಉದ್ದೇಶ ಪೂರ್ವಕವಾಗಿ ಕಸವನ್ನು ಹಾಕುತ್ತೇವೆ. ಇದಕ್ಕೆ ಕಾರಣ ಅರಿವಿನ ಕೊರತೆ ಅಲ್ಲ, ಹೇಗಾದರೂ ಹೀಗೆ ಅಲ್ಲವೆ? ಎನ್ನುವ ಬೇಜಾವಬ್ದಾರಿ. ಈ ಯೊಜನೆಯನ್ನು ಜಾರಿಗೆ ತಂದ ಬಳಿಕ ಯುವ ಜನಾಂಗ ಬದಲಾದಿತು ಮತ್ತು ಸ್ವಚ್ಚ ದೇಶದ ಕಲ್ಪನೆಯು ಅವರ ಮನಸ್ಸುಗಳಲ್ಲಿ ಮೂಡಿತು ಎನ್ನುವ ಚಿಕ್ಕ ಆಸೆಯನ್ನು ಇಟ್ಟುಕೊಳ್ಳ ಬಹುದು.
       ಹಾಗೆ ಎಂದು ಜನತೆ ಕನಸು ಕಾಣುತ್ತಾ ಸುಮ್ಮನೆ ಕುಳಿತುಕೊಳ್ಳುವುದು ಸರಿಯಲ್ಲ. ಯಾಕೆಂದರೆ ತಮ್ಮ ಶ್ರಮ ಕೂಡ ದೇಶಕ್ಕೆ ಅಮೂಲ್ಯವಾದದ್ದು ಎನ್ನುವುದನ್ನು ಮರೆಯಬಾರದು 'ಸ್ವಚ್ಚ' ಎಂದ ಕ್ಷಣ ಎಲ್ಲವೂ ಅದರಲ್ಲಿಯೂ ದೇಹ, ಮನಸ್ಸು, ನದಿಮೂಲ, ಜಲಮೂಲ, ಮಣ್ಣು ಎಲ್ಲವೂ ಸ್ವಚ್ಚವಾಗಬೇಕಲ್ಲ ಮಾತ್ರವಲ್ಲ ಯೋಚನೆಯ ಧಾಟಿ, ಹೀಗೆನೆ ನಮ್ಮ ದೇಶ ಸುಭೀಕ್ಷ ದೇಶವಾಗಲು 2019ರ ಗುರಿಯನ್ನು ಹೊಂದಿರುವ ಪ್ರಜೆಗಳು, ಕಾರ್ಯಮಗ್ನರಾಗಬೇಕು ಈ ಕ್ಷಣದಿಂದ ಅಲ್ಲವೆ?
ಹೀಗೆ ಹೇಳಿದ ತಕ್ಷಣ ಇದಕ್ಕಾಗಿ ನಾವು ಏನು ಮಾಡಬೇಕು? ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಮೂಡಬಹುದು. ಇದಕ್ಕೆ ಉತ್ತರ ಕೂಡ ಯುವ ಜನಾಂಗದಲ್ಲಿ ಅಸ್ಪಷ್ಟವಾಗಿರಬಹುದು. ಯಾಕೆಂದರೆ ದೇಶದ ಕಲ್ಪನೆ ಅವರಿಗೆ ಇಲ್ಲದೆ ಇರಬಹುದು. ಆದರೆ ನಮ್ಮ ಮನೆ, ನಮ್ಮ ಊರು ಇವುಗಳ ಕಲ್ಪನೆ ಸಾಮಾನ್ಯವಾಗಿ ಇರುತ್ತದೆ. ಮೊದಲು ಯುವ ಜನಾಂಗ ಕೆಲವೊಂದು ಚಟಗಳನ್ನು ಬಿಡಬೇಕು. ಮಾತ್ರವಲ್ಲ ತಮ್ಮ ಮನೆಯ ಸುತ್ತಮುತ್ತ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಸ್ವಚ್ಚ ಎಂದ ತಕ್ಷಣ ಗುಡಿಸುವುದು, ನೆಲ ಒರೆಸುವುದು ಅಲ್ಲ. ಮನೆಯ ಪರಿಸರವನ್ನು ಸ್ವಚ್ಚ ಗೊಳಿಸುವುದು ಬಳಿಕ ತಮ್ಮ ಸುತ್ತಮುತ್ತಲಿನ ಮನೆಯವರಲ್ಲಿ ಜಾಗೃತಿಯನ್ನು ಮೂಡಿಸುವುದು ಮುಖ್ಯ. ಬಳಿಕ ತಿಳುವಳಿಕೆಯನ್ನು ನೀಡುವುದು ಮಾತ್ರವಲ್ಲ ತಾವು ಕೂಡ ಅದರಲ್ಲಿ ಭಾಗವಹಿಸಬೇಕು. ಇಷ್ಟು ಎಂದ ಮಾತ್ರಕ್ಕೆ ಎಲ್ಲಾ ಜವಾಬ್ದಾರಿಗಳು ಮುಗಿಯಿತು ಎಂದು ತಿಳಿಯವಾರದು.
       ಇನ್ನಷ್ಟು ಕೆಲಸಗಳು ಬಾಕಿ ಉಳಿದಿವೆ. ಅದರಲ್ಲಿ ನದಿ ಮೂಲ ಸ್ವಚ್ಚಗೊಳಿಸುವುದು ಅದರಲ್ಲಿ ಗಂಗಾ ನದಿಯನ್ನು ಸ್ವಚ್ಚಗೊಳಿಸುವುದು ತುಂಬಾ ಗಂಭೀರವಾದ ವಿಚಾರ. ನದಿಯನ್ನು ಮಲಿನ ಮಾಡುವ ಮತ್ತು ಎಲ್ಲೆಂದರಲ್ಲಿ ಕಸ ಹಾಕುವವರಿಗೆ ತಡೆಯೊಡ್ದಲಾದಿತೇ? ಎನ್ನುವ ಪ್ರಶ್ನೆ ಮನಸಿನ ಆಳದಲ್ಲಿ ಮೂಡುತ್ತದೆ. ಯಾಕೆಂದರೆ ಇದಕ್ಕೆ ನಮ್ಮ ದೇಶದ ಇತಿಹಾಸ ಪುಟಗಳನ್ನು ತಿರುವಿ ಹಾಕುವಾಗ ಸಾಕಷ್ಟು ಘಟನೆಗಳು ಉದಾಹರಣೆಯಾಗಿ ಸಿಗುತ್ತವೆ. ಇದನ್ನೆಲ್ಲ  ಗಮನಿಸಿದಾಗ ಮುಂದೆ ಏನಾಗಬಹುದು ಎನ್ನುವ ತಿಮರ್ಾನಕ್ಕೆ ಕೆಲವರಂತೂ ಬಂದಿರಬಹುದು. ಇದನ್ನು ಪುಷ್ಠಿಕರಿಸಲು ಪ್ರಮುಖವಾದ ಘಟನೆಗಳು ಕಣ್ಣ ಮುಂದೆ ಗರಿಬಿಚ್ಚಿ ಕುಣಿಯುತ್ತದೆ. ಆ ಘಟನೆಗಳು ಮುಂದೆ ಏನಾದೀತು ಎನ್ನುವ ಬಗ್ಗೆ ಭವಿಷ್ಯವನ್ನು ನುಡಿಯಬಹುದು, ಹಾಗೆಂದ ಮಾತ್ರಕ್ಕೆ 'ಸ್ವಚ್ಚ ಭಾರತ ಅಭಿಯಾನ' ಯಶಸ್ವಿಯಾಗಲಿಕ್ಕಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕಾಗಿಯೇ ಒಂದಷ್ಟು ಕಾಲಾವಧಿ ಹೆಚ್ಚು ತೆಗೆದುಕೊಳ್ಳಬಹುದು ಅಷ್ಟೆ. ಯಾಕೆಂದರೆ ನಮ್ಮ ದೇಶ ಮುಂದುವರಿಯುತ್ತಿರುವ ರಾಷ್ಟ್ರ. ಆದ್ದರಿಂದ ಇದು ಜನರ ಪಾಲುಗೊಳ್ಳುವಿಕೆಯನ್ನು ಒಳಗೊಂಡಿದೆ. ಇದರಲ್ಲಿ ಶೇಕಡ 20ರಷ್ಟು ಜನ ನಿಧಾನವಾಗಿ ಸೇರಿಕೊಳ್ಳುವವರು. ಇನ್ನು ಉಳಿದ ಜನರು ಭಾಗವಹಿಸದೇ ಇರಬಹುದು. ಇಷ್ಟೆಂದ ಮಾತ್ರಕ್ಕೆ ಸಾಧ್ಯವಿಲ್ಲ ಎಂದು ಅರ್ಥ ಅಲ್ಲ. ಅದಕ್ಕೆ ತಾಳ್ಮೆ, ಸಹನೆ, ಅಗತ್ಯ. ಈ ಎರಡು ಅಂಶಗಳು ಯುವ ಜನಾಂಗದಲ್ಲಿ ಇಲ್ಲ. ಆದ್ದರಿಂದ ಒಮ್ಮೆ ಭಾಗವಹಿಸಿದ ವ್ಯಕ್ತಿ ಮತ್ತೊಮ್ಮೆ ಭಾಗವಹಿಸೀಯಾನು ಎಂಬ ನಂಬಿಕೆ ಇಲ್ಲ. ಯಾಕೆಂದರೆ ಮಾನವನಿಗೆ ಇರುವ ಸ್ವಾರ್ಥ ಪ್ರಜ್ಞೆ ಎಲ್ಲವನ್ನು ನುಂಗಿ ನೀರು ಕುಡಿಯುತ್ತದೆ. ಇಂದಿನ ಯುವ ಜನಾಂಗ ಲಾಭದ ದೃಷ್ಟಿಯಿಂದ ನೋಡಿದರೆ, ಅದು ಯೋಜನೆ ಯಾವುದೇ ಇರಲಿ' ನೀರ ಮೇಲೆ ಮಾಡಿದ ಹೋಮವಾದೀತು' ಎಂದರೆ ತಪ್ಪಲ್ಲ. ಯಾಕೆಂದರೆ ಯುವ ಜನಾಂಗಕ್ಕೆ ಅಂಟಿರುವ ಮಹಾನ್ ವ್ಯಾಧಿ ಎಂದರೆ 'ಸ್ವಾರ್ಥ'. ಅದು ದೇಶವನ್ನು ಕೂಡ ಅಧೋಗತಿಗೆ ತಳ್ಳುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗೆನೆ ಇದರಿಂದ ಜನರನ್ನು ಬಂಧ ಮುಕ್ತಗೊಳಿಸಿದರೆ ಸ್ವಾರ್ಥ ಹೋಗಿ ದೇಶಾಭಿಮಾನ ಮೂಡಿತು. ಮಾತ್ರವಲ್ಲ ಆ ಶಕ್ತಿ ಇರುವುದು ಮೋದಿಯವರ ಭಾಷಣದಲ್ಲಿ ಎಂಬುದಂತು ಸತ್ಯ.  'ಭಾರತ ಸ್ವಚ್ಚವಾಗಲಿ' ನಾವೆಲ್ಲರೂ ಕೈ ಜೋಡಿಸೋಣ ಎಂದು ಇಷ್ಟು ಹೇಳಿದ ಮಾತ್ರಕ್ಕೆ ಯುವ ಜನಾಂಗಕ್ಕೆ ಅರ್ಥವಾಗಬೇಕಲ್ಲ? ಇವರುಗಳು ಅದರ ಬಗ್ಗೆ ಯೋಚಿಸಬೇಕಲ್ಲ. ಆದರೆ ಗಾಂಧೀಜಿ ಯವರ ಕನಸನ್ನು ನನಸು ಮಾಡಿಯಾರು ಎನ್ನುವ ಅಶಾಭಾವನೆಯಿಂದ ವಿರಾಮ ನೀಡುತ್ತಿದ್ದೇನೆ.

                                 ಲೋಕೇಶ್ ಕುಂಚಡ್ಕ
                                  ಪ್ರಥಮ ಎಂ.ಎ. ಕನ್ನಡ

No comments:

Post a Comment

  ಬಿತ್ತಿ ವಿಶೇಷಾಂಕ 2017