1/21/15

ಆಕಾಶಕ್ಕೆ - ಆಕಾಶವೇ ಸಾಟಿ
'ಆಕಾಶ' ಎಂಬ ಈ ಮೂರು ಅಕ್ಷರದಲ್ಲಿ ಅಡಗಿರುವ ಅರ್ಥ ವಿಸ್ಮಯ ಅದ್ಭುತ. 'ಆಕಾಶಕ್ಕೆ-ಆಕಾಶವೇ ಸಾಟಿ'. ನಾನು ಬಾಲ್ಯದಿಂದ ಬೆರಗು ಕಣ್ಣಿನಿಂದ ನೋಡಿದ ಮಾಯ ಲೋಕವೇ ಈ ಆಕಾಶ. ನನ್ನ ನೆನಪುಗಳನ್ನು ಮತ್ತೆ ಮತ್ತೆ ಮರುಕಳಿಸುವಂತೆ ಮಾಡಿರುವುದೇ ಈ ಆಕಾಶ. ಬಾನಿನಲ್ಲಿ ಇರುವ ಚಂದ್ರ ನಕ್ಷತ್ರ ಸೂರ್ಯ ಇವುಗಳನ್ನು ನೋಡಿ ಆಶ್ಚರ್ಯದಿಂದ ನನ್ನಲ್ಲಿಯೇ ನನ್ನನ್ನು ಪ್ರಶ್ನೆ ಮಾಡಿಕೊಂಡಿರುವುದಿದೆ. ಮೋಡದೊಂದಿಗೆ ಓಡುವಂತೆ ಕಾಣುವ ಚಂದ್ರನ ಆ ಕಣ್ಣಾಮುಚ್ಚಾಲೆ ಆಟವನ್ನು ಕಂಡು ನಮ್ಮಂತೆಯೇ ಚಂದ್ರನೂ ಆಟವಾಡುತ್ತಾನೆ ಎಂದುಕೊಂಡ ಬಾಲ್ಯ ನನ್ನದು. ರಾತ್ರಿಯ ಹೊತ್ತು ಸಾವಿರ ಸಾವಿರ ಹಣತೆಯನ್ನು ಯಾರೋ.. ಆಕಾಶದಲ್ಲಿ ತೇಲಿಬಿಟ್ಟಿದ್ದಾರೆ ಎಂಬಂತೆ ಕಾಣುವ ತಾರೆಗಳು ಫಳ ಫಳನೇ ಹೊಳೆಯುತ್ತದೆ. ಬಾನಿನ ಅಲಂಕಾರವನ್ನು ಮೀರಿಸಲು ಮಾನವನಿಗೆ ಸಾಧ್ಯವೇ? ತಾರೆಗಳನ್ನು ಎಣಿಸುತ್ತಾ ಎಣಿಸುತ್ತಾ ಸೋತ ಕೈ ನನ್ನದು. ಆದರೆ ಇಂದಿನ ಆಧುನಿಕ ಮಕ್ಕಳು  ಕಾಂಕ್ರಿಟ್ ಕತ್ತಡದಿಂದಾಗಿ ಬಾಲ್ಯದ ಆಕಾಶವೆಂಬ ಮಾಯ ಪ್ರಪಂಚದಿಂದ ವಂಚಿತರಾಗಿದ್ದಾರೆ. ಬಿಸಿಲಿನ ಸಂದರ್ಭದಲ್ಲಿ ಕಾಣುವ ಬಿಳಿಯ ಮೋಡಗಳು ಒಂದು ಭಾರಿ ಕುದುರೆಯಾಗಿ, ಇನ್ನೊಮ್ಮೆ  ಸಮುದ್ರ, ಮರ ಮತ್ತಾವುದೋ ಆಕರಗಳನ್ನು ಪಡೆಯುವ ಪರಿ ನಮ್ಮ ಕಲ್ಪನೆಗೆ ನಿಲುಕದ್ದು. ಬಾಲ್ಯದಲ್ಲಿ ಕರೆಂಟ್ ಹೋದಾಗ ಮನೆ ಜಗಲಿಯಲ್ಲಿ ಆಕಾಶವನ್ನು ನೋಡಿಕೊಂಡು ಪಟ್ಟಾಂಗ ಹೊಡೆಯುವ ನೆನಪುಗಳು ಇಂದು ಕೇವಲ ನೆನಪಾಗಿಯೇ ಉಳಿದಿದೆ. ಅದೆಷ್ಟೋ  ಸಂಬಂಧಗಳ ಛಾಯೆಗಳನ್ನು ಗಟ್ಟಿಗೊಳಿಸಲು ಸಹಾಯ ಈ ಆಕಾಶ ಎಂದು ನನ್ನ ನಿಲುವು. ಇದು ಒಂದು ಕಡೆಗೆ ಮಾತ್ರ ವ್ಯಾಪಿಸದೆ  ಎಲ್ಲೆಲ್ಲೋ ಸರ್ವ ವ್ಯಾಪಿಯಾಗಿದೆ. ಚಂದ್ರ- ಸೂರ್ಯ ಒಂದೇ ಇದ್ದರೂ ಯಾವುದೇ ಸ್ಥಳದಲ್ಲಿ ನೋಡಿದರೂ ಚಂದ್ರ ಸೂರ್ಯ ಕಂಡೆ ಕಾಣುತ್ತಾರೆ. ಇದುವೇ ಪ್ರಕೃತಿಯ ಮಾಯೆ. ದೇವರ ಸೃಷ್ಟಿಯ ಕೌಶಲ್ಯ ಪ್ರತಿಭೆ ಆಕಾಶವನ್ನು ಹಾಳು ಮಾಡದೆ ಸೂರ್ಯ ಚಂದ್ರರಿಗೆ ಕೋಪಬರದಂತೆ ನಮ್ಮ ಪ್ರಕೃತಿಯನ್ನು ಕಾಪಾಡೋಣ. 'ಆಕಾಶ' ಎಂಬ ಮಾಯೆಯನ್ನು ಪ್ರೀತಿಯಿಂದ ಸವಿಯೋಣ. 'ಆಕಾಶಕ್ಕೆ ಏಣಿ ನಿಮರ್ಿಸುವ ಹರಸಾಹಸವನ್ನು ಬಿಟ್ಟು ಬಿಡೋಣ'.

ಯತೀಶ್
 ದ್ವಿತೀಯ ಎಂ.ಎ. 
ಕನ್ನಡ ವಿಭಾಗ 

No comments:

Post a Comment

  ಬಿತ್ತಿ ವಿಶೇಷಾಂಕ 2017