1/21/15

ನಿರುತ್ತರೆ
ಬೆಳೆದಳಿವಳು....ಮಮತೆಯಿರದ ತವರಲ್ಲಿ...
ಕರುಣೆಯಿರದ ಒಡಲಲ್ಲಿ...ಸ್ನೇಹವಿರದ ಸಂಗಡದಲಿ...
ಆಂತರಿಕ ವೇದನೆಯ ನಗುಮೊಗದಿ ಬಚ್ಚಿಟ್ಟು...
ಸಹನಮೂತರ್ಿಯ ರೀತಿ ಮ್ಯೆತಳೆದು ನಿಂತವಳು..
ಬಾಲ್ಯದಲೇ ಬಯಕೆಗಳ ಬದಿಗೊತ್ತಿ ಈಕೆ..
ನೀರವ ವೇದನೆಯ ನಸುನಗುತ ಮರೆತು..
ಜರೆಮಾತುಗಳನು ಸಹಿಸುತಲೇ ಇದ್ದು....
ಮೂಕಯಾತನೆಯ ಅನುಭವಿಸಿದವಳಿವಳು...
ಧಾರೆಯೆರೆದರು ಈಕೆ ಭಾರವೆಂಬಂತೆ..
ಕೋರಳಾಣಿಸಿ ನಿಂತಳು ಮಂಗಳ ಸೂತ್ರಕೆ 
ಅಶ್ರು ಉರುಳಿತು ನೇತ್ರದಿ ತವರಿನ ಅಗಲುವಿಕೆಗೆ 
ಪರಿಕಲ್ಪನೆ ಇತ್ತೇ ತವರಿನಾ ಮನೆಯವರಿಗೆ?!

ಪತಿಸೇವೆಗೆಂದೇ ಅಣಿಯಾದವಳಿವಳು
ಸಿಗಬಹುದೇನೋ ಪ್ರೀತಿಯೆಳೆಯೊಂದು 
ಎಂಬಾಸೆ ಮನದೊಳಗೆ ಚಿಗುರೊಡೆದು ಬೆಳೆದಿರಲು 
ವಂಚಿಸಿತು ವಿಧಿ ಸರ್ವವಿಧದಿಂದಲೂ 
ನಿಸ್ವಾರ್ಥ ಪ್ರೀತಿಯ ಬಯಸಿ ಬಂದಾಕೆಯನು 
ನೀರಸ ನಿರಾಶೆಯು ಮೆಲ್ಲನೆ ಸ್ವಾಗತಿಸಿತು...
ಮುರುಟಿಹೋದ ನಿರೀಕ್ಷೆಯು ಘಾಸಿಗೊಳಿಸಿತು ಮನವನು 
ತಡೆದು ನಿಂತಳು ಈಕೆ ತನ್ನೆಲ್ಲಾ ದುಖವನು...
ಯಾಂತ್ರಿಕತೆಯಾಯಿತು  ಜೀವನ ಕಾಲಸವೆಯುತ್ತಿದ್ದಂತೆ 
ಇಂದಿಗೊ ಕಣ್ಣೀರಿನ ಹೊಳೆ ಆ ಸುಪ್ತ ಮನದೊಳಗೆ
ಅರಿತವರಿರುವರೆ ಈಕೆಯ ಸಹನೆಯನು 
ಸಾದ್ಯವಾಗದು ಎಂದಿಗೂ ಈಕೆಯನು ಅಳೆಯಲು
ಅಂಬರಮಣಿ ಈಕೆ ಎಲ್ಲಾ ರೀತಿಯಲಿ 
ಸ್ಪಂದಿಸುವ ಹ್ರದಯವಿರದ 'ಏಕಾಂಗಿ'ಮೌನಿಯು
ವೈದೇಹಿಯಂತೆ ಮಹಾವನಿತೆಯಲ್ಲದಿದ್ದರೂ 
ಅಂಶುವಿನಂತೆ ಮನೆಬೆಳಗಿದಳು 
ಎಂದೂ ಮನಬಿಚ್ಚಿ ಸಂಕಟವ ತೋರದವಳಿವಳು 
ನುಚ್ಚು ನೂರಾದ ಕನಸ ಒಂದುಗೂಡಿಸಲು ಯತ್ನಿಸುವಳು 
ಆತ್ಮಸಂಯಮದ ಪ್ರತಿರೂಪ ಎಂಬಂತೆ 
ನಿರುತ್ತರೆ ಈಕೆ...... ಇಂದಿಗೂ..... ಇನ್ನೆಂದಿಗೂ ......
ಶ್ರೀಲತಾ ಎಂ.ಕೆ
ಪ್ರಥಮ ಎಂ. ಎ ಇಂಗ್ಲಿಷ್ ವಿಭಾಗ

No comments:

Post a Comment

  ಬಿತ್ತಿ ವಿಶೇಷಾಂಕ 2017