1/21/15

ರೈಟ್
ಅಂದು 17/05/2014. ನಾನು ಪರೀಕ್ಷೆಗೆ ಹೋಗುತ್ತಿದ್ದೆ. ಉಳ್ಳಾಲದಿಂದ ಬಸ್ಸ್ ಹತ್ತಿ ತೊಕ್ಕೊಟ್ಟುವಿನಲ್ಲಿ ಇಳಿದು, ಪುನಃ ತೊಕ್ಕೊಟ್ಟುವಿನಲ್ಲಿ ಕೊಣಾಜೆಯ ಬಸ್ಸ್ ಹತ್ತಿ ಕೂತೆ. ಸುಮಾರು 70 ವರ್ಷದ ಮುದುಕ ಮೊಬೈಲ್ ಹಿಡಿದುಕೊಂಡು ಬಹಳ ಜೋರಾಗಿ ಮಾತನಾಡುತ್ತಿದ್ದ. ಬಸ್ ಕೊಣಾಜೆಗೆ ಹೋಗುವ ಆಚೆ ಟನರ್್ ಆಗಿ ನಿಂತಿತು. ಕೆಲವು ಪ್ರಯಾಣಿಕರು ಬಸ್ಸ್ ಹತ್ತಿದ ಕೂಡಲೇ ಒರ ಪೋಯಿ ಮಾರಯಾ ರೈಟ್ ಎಂದ ಮುದುಕ. ಬಸ್ಸ್ ಚಾಲಕ ಬಸ್ಸನ್ನು ಮುಂದುವರಿಸಿದ. ಕೂಡಲೆ ಕಂಡಕ್ಟರ್ ವಿಝಲ್ ಹಾಕಿ ನಿಲ್ಲಿಸಿದ. ಕೂಡಲೇ ಆ ಮುದುಕ ಹೊರಗೆ ನೋಡಿ ಪ್ರಯಾಣಿಕರಿಗೆ ನಿಗ್ಲೆಗ್ ಬೇಗ ಬರ್ರೆ ಆಪುಜಾ, ಎಂಕ್ ಪೊತರ್ಾಂಡ್ ಎಂದು ಬೈದ. ಅವರು ಬಸ್ಸ್ ಹತ್ತಿದ ಕೂಡಲೇ ರೈಟ್ ಎಂದ ಮುದುಕ. ಪುನಃ ಬಸ್ಸ್ ಚಾಲಕ ಬಸ್ಸ್ನ್ನು ಮುಂದುವರಿಸಿದ ಕೂಡಲೇ ಕಂಡಕ್ಟರ್ ವಿಝಲ್ ಹೊಡೆದು ಬಸ್ಸ್ ನಿಲ್ಲಿಸಿದ.
ಇದನ್ನು ನೋಡಿ ನನಗೆ ಜೋರು ನಗು ಬಂತು. ನಗುವನ್ನು ನಿಯಂತ್ರಿಸಲು ನಾನು ಹರಸಾಹಸಪಟ್ಟೆ. ನನ್ನ ಪಕ್ಕದಲ್ಲಿದ್ದ ಪ್ರಯಾಣಿಕ ಬಹಳ ಗಂಭೀರವಾಗಿ ಆ ಮುದುಕನನ್ನೊಮ್ಮೆ ನನ್ನನ್ನೊಮ್ಮೆ ನೋಡಿದ. ನಾನು ಕೂಡಲೇ ಪುಸ್ತಕ ತೆಗೆದು ಓದಲು ಆರಂಭಿಸಿ ನನ್ನ ಗಮನ ಬೇರೆಡೆ ಬದಲಾಯಿಸಿದೆ. ಹೀಗೆ ಕ್ಲಾಸಿಗೆ ಬಂದಾಗ ಯಾರು ಇರಲಿಲ್ಲ. ಸಮಯ  ಕಳೆಯುತ್ತಿದ್ದಂತೆ ಒಬ್ಬೊಬ್ಬರೇ ಬಂದರು. ನಾನು ಅವರಲ್ಲಿ ನಡೆದ ವಿಷಯವನ್ನು ತಿಳಿಸಿದೆ. ಕೆಲವರು ಬಾಯಿ ತುಂಬಾ ನಗಾಡಿದರು. ಮತ್ತೆ ಕೆಲವರು ತುಟಿಯಲ್ಲಿ ನಗಾಡಿದರು, ಇನ್ನೂ ಕೆಲವರು ತುಟಿಯ ಒಂದು ಬದಿಯಲ್ಲಿ ನಗಾಡಿದರು. ಕೂಡಲೇ ನನ್ನ ಆತ್ಮೀಯ ಸ್ನೇಹಿತೆ ನಿನ್ಗೆ ನಗು ಬಾರದ್ದು ಯಾವಾಗ ಹೇಳು ಎಂದು ತನ್ನ ಮೂವತ್ತೆರಡು ಹಲ್ಲಿನೊಂದಿಗೆ ಹಲ್ಲಿಗೆ ಹಾಕಿದ ಕ್ಲಿಪ್ಪನ್ನು ಪ್ರದಶರ್ಿಸಿದಳು. ನಾನು ಪ್ರತಿ ನಗು ಬೀರಿ ಓದಲು ಆರಂಭಿಸಿದೆ.
ಮಧ್ಯಾಹ್ನ ಹಾಸ್ಟೇಲ್ಗೆ ಹೋಗಿ ಊಟ ಮಾಡಿ ಅವತ್ತೇ ಮನೆಗೆ ಹೊರಟೆ. ಉಳ್ಳಾಲದಿಂದ ಬಸ್ ಹತ್ತಿ ಸ್ಟೇಟ್ ಬ್ಯಾಂಕ್ನಲ್ಲಿ ಇಳಿದು ಮೀನು ಮಾರುಕಟ್ಟೆಯ ಒಳಗಿಂದ ಬಸ್ಸ್ ಸ್ಟ್ಯಾಂಡ್ಗೆ ನಡೆದುಕೊಂಡು ಬರುವಾಗ, ಅವರ ವ್ಯಾಪಾರದ ಮೇಲೆ ನನ್ನ ಕಣ್ಣು, ಕಿವಿಯನ್ನು ಹರಿಬಿಟ್ಟೆ. ಖರೀದಿಸಲು ಬಂದ ಹೆಣ್ಣನ್ನು ಕುರಿತು, ಬಲ ಮಗಾ ಆಲ್ 40 ಅತ್ತ, ಯಾನ್ 50 ಮೀನ್ ಕೊಪರ್ೆ, ಬಲ ಎಂದಳು. ನಾನು ನಗಾಡಿಕೊಂಡೆ ಮುಂದೆ ಬಂದೆ, ಬಸ್ಸ್ ಹತ್ತಿ ಕೂತೆ.
ಪಸರ್್ ವ್ಯಾಪಾರಿ ಬಸ್ಸ್ನಲ್ಲಿದ್ದ ಎಲ್ಲರಲ್ಲೂ ಪಸರ್್ ಬೋಡ ಎಡ್ಡೆ ಉಂಡು....ಬೋಡ ಎಂದು ಕೇಳುತ್ತಾ ನನ್ನ ಬಳಿಯೂ ಬಂದ. ನಾನು ತಲೆ ಅಲ್ಲಾಡಿಸಿ ಬೇಡ ಎಂಬಂತೆ ಸೂಚಿಸಿದೆ. ಆತ ಪುನಃ ಬಂದು ನನ್ನ ಹೆಗಲ ಮೇಲೆ ಕೈ ಹಾಕಿ, ಬಹಳ ನಗು ಮುಖದಿಂದಲೇ ಉಂದು ಪಸರ್್ ದೆತೊನ್ಯಗುಲು ಎಡ್ಡೇ ಆತೆರ್ ಎಂದ. ನಾನು ಕೂಡ ನಗುಮುಖದಿಂದಲೇ ಏತೋ ಜನ ಪಸರ್್ ದೆತ್ತ್ದ್ ಹಾಳಾತೆರ್ ಎಂದೆ. ನನ್ನ ಹತ್ತಿರದ ಪ್ರಯಾಣಿಕ ಜೋರಾಗಿ ನಗಾಡಿದ. ನಾನು ಅವನನ್ನು ಗಾಂಭೀರ್ಯದಿಂದಲೇ ನೋಡುತ್ತಾ ಅವನಲ್ಲಿ ನನ್ನನ್ನು ಕಂಡೆ.

ದೀಪಕ್ ಎನ್. ದುರ್ಗ
ದ್ವಿತೀಯ ಎಂ.ಎ. ಕನ್ನಡ ವಿಭಾಗ

No comments:

Post a Comment

  ಬಿತ್ತಿ ವಿಶೇಷಾಂಕ 2017