1/21/15

ಸಂಪಾದಕೀಯ
ನಾಡಗೀತೆಗೆ ಕತ್ತರಿ ಪ್ರಯೋಗದ ಸಿದ್ಧತೆ
ನಮ್ಮ ನಾಡಗೀತೆ ಅತೀ ಉದ್ದವಾದ ಸಾಲುಗಳನ್ನು ಹೊಂದಿದೆ. ಅದನ್ನು ಹಾಡಲು ತುಂಬ ಸಮಯ ಬೇಕು. ಮೂರರಿಂದ ಮೂರುವರೆ ನಿಮಿಷಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಅದರಿಂದ ಸಮಯ ಪೋಲಾಗುತ್ತದೆ. ನಮ್ಮ ರಾಷ್ಟ್ರಗೀತೆಯನ್ನು ಹಾಡುವುದಕ್ಕೆ ನಾವು ತೆಗೆದುಕೊಳ್ಳುವ ಸಮಯ ಐವತ್ತೆರಡು ಸೆಕೆಂಡುಗಳು ಮಾತ್ರ ಹೀಗಿರುವಾಗ ಈ ನಾಡಗೀತೆಯನ್ನು ಹಾಡಲು ಅದೇಕೆ ಅಷ್ಟು ಸಮಯವನ್ನು ವ್ಯರ್ಥಮಾಡುವುದು. ಇದರ ಬದಲು ಇನ್ಯಾವುದೋ ಒಳ್ಳೆಯ ಕೆಲಸಕ್ಕೆ ಈ ಸಮಯವನ್ನು ಉಪಯೋಗಿಸಬಹುದು ಎನ್ನುವ ಪೊಳ್ಳುವಾದವೊಂದು ಇತ್ತೀಚೆಗೆ ಹುಟ್ಟಿಕೊಂಡಿದೆ. ಇದು ಭಾರಿ ಚಚರ್ೆಗೆ ಎಡೆಮಾಡಿಕೊಟ್ಟಿದೆ.
    ಇಲ್ಲಿ ನಾಡಗೀತೆಯನ್ನು ಹಾಡಲು ತೆಗೆದುಕೊಳ್ಳುವ ಸಮಯದ ಕುರಿತು ಅಪಸ್ವರ ಎತ್ತಿ ನಾಡಗೀತೆಯ ಸ್ವರೂಪವನ್ನು ಬದಲಾಯಿಸುವ ನಿಟ್ಟಿನಲ್ಲಿ ಕತ್ತರಿ ಪ್ರಯೋಗವಾಗಬೇಕು ಎಂದು ಕೆಲವು ಜನರು ಹೇಳತೊಡಗಿದ್ದಾರೆ. ಅದಕ್ಕಾಗಿ ಅದರ ಕೆಲವು ಸಾಲುಗಳನ್ನು ತೆಗೆದುಹಾಕಬೇಕು. ಅವು ನಾಡಗೀತೆಗೆ ಅಗತ್ಯವಿಲ್ಲದ ಭಾಗಗಳಾಗಿವೆ ಎಂಬ ತಮ್ಮ ವಾದವನ್ನು ಮುಂದಿಡುತ್ತಿದ್ದಾರೆ. ಕನ್ನಡ ನೆಲದ ಭಾಷೆ ಸಂಸ್ಕೃತಿ ನಾಡು ಮತ್ತು ನುಡಿಯ ಇಡೀ ಕಲ್ಪನೆಯನ್ನು ಕಣ್ಣಮುಂದೆ ಬಿಂಬಿಸುವಂತೆ ಇರುವ ನಮ್ಮ ನಾಡಗೀತೆ ಅವರಿಗೆ ಸಮಯ ಹಾಳುಮಾಡುತ್ತಿರುವ ಒಂದು ಸಂಗತಿಯಾಗಿ ಗೋಚರಿಸಿದೆ. ಇಂದು ನಾವು ನಾಡಗೀತೆಯನ್ನು ಹಾಡುವುದು ಹೆಚ್ಚಾಗಿ ಕಾಣುವುದು ಕೆಲವು ಕನ್ನಡಪರ ಕಾರ್ಯಕ್ರಮಗಳಲ್ಲಿ ಮತ್ತು ಸಕರ್ಾರಿ ಶಾಲೆಗಳಲ್ಲಿ ಅಷ್ಟೇ. ಇತ್ತೀಚೆಗೆ ಇದು ಕೂಡ ಕಣ್ಮರೆಯಾಗಿ ಇಳಿಮುಖವಾಗುತ್ತಾ ಬಂದಿದೆ. ಇಂದಿನ ಯುವ ಜನಾಂಗವನ್ನು ಒಂದು ನಿಮಿಷ ನಿಲ್ಲಿಸಿ ಕೇಳಿದರೆ ಅವರಿಗೆ ಅದು ಪೂತರ್ಿಯಾಗಿ ಬರಲಾರದು. ಹೆಚ್ಚೇಕೆ ಕನರ್ಾಟಕದಲ್ಲಿ ರಾಜಕೀಯವಾಗಿ ಹಾಗು ಸಾಮಾಜಿಕವಾಗಿ ಮುಖ್ಯಸ್ಥಾನಗಳನ್ನು ಅಲಂಕರಿಸುವವರನ್ನು ಕೇಳಿದರು ಸಮರ್ಪಕವಾಗಿ ಅವರಿಂದ ಹೇಳಲು ಸಾಧ್ಯವಾಗದು. ಹೀಗಿರುವಾಗ ಕತ್ತರಿ ಪ್ರಯೋಗಕ್ಕೆ ಕೂಗು ಎಬ್ಬಿಸಿರುವ ಈ ಹಿತಾಸಕ್ತಿಗಳಿಗೆ ಏನು ಹೇಳಬೇಕು. ಒಂದುವರೆ ನಿಮಿಷಗಳಿಗೆ ಅವುಗಳನ್ನು ಇಳಿಸಬೇಕು ಅದಕ್ಕಾಗಿ ಅದರ ಸಾಲುಗಳನ್ನು ಕಡಿತಗೊಳಿಸಬೇಕು ಎಂಬ ಇವರ ವಾದ ಎಷ್ಟರ ಮಟ್ಟಿಗೆ ಸತ್ಯವಾಗಿದೆ. ಇದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವೇ?.
   ಇಂದು ನಮ್ಮ ನಾಡಿನ ನಮ್ಮ ಮಣ್ಣಿನ ಮತ್ತು ಭಾಷೆಯ ಸಂಸ್ಕೃತಿಯನ್ನು ಹೊಸ ತಲೆಮಾರುಗಳಿಗೆ ಕಟ್ಟಿಕೊಡುವ ಜವಾಬ್ದಾರಿ ನಮಗಿದೆ. ಹೀಗಿರುವಾಗ ಚರಿತ್ರೆಯನ್ನು ತಿರುಚುವ ಅಥವಾ ಸಂಸ್ಕೃತಿಯನ್ನು ಮುಚ್ಚಿಹಾಕುವ ಮತ್ತು ಸಾಹಿತ್ಯಗಳನ್ನು ಕತ್ತರಿ ಪ್ರಯೋಗಕ್ಕೆ ಒಳಪಡಿಸುವ ಈ ಕ್ರಮಗಳು ಎಷ್ಟರ ಮಟ್ಟಿಗೆ ಸಮಂಜಸವಾದುದು. ನಿಜವಾಗಿಯು ಇದರ ಅಗತ್ಯವಿದೆಯೆ ಎಂಬ ಕಳವಳ ನಮಗೆ ಉಂಟಾಗುತ್ತದೆ. ರಾಜಕೀಯವಾಗಿ ಅಥವಾ ಸಾಮಾಜಿಕವಾಗಿ ಯಾವುದೇ ಸಭೆ ಸಮಾರಂಭಗಳನ್ನು ಹಮ್ಮಿಕೊಂಡು ಅವುಗಳಲ್ಲಿ ಒಂದನ್ನು ಸರಿಯಾಗಿ ನಿಭಾಯಿಸದೆ ಪೊಳ್ಳು ಭರವಸೆಗನ್ನು ನೀಡಿ ಜನರಿಗೆ ಮಂಕುಬೂದಿ ಎರಚುವ ಈ ಗಣ್ಯರುಗಳಿಗೆ ನಮ್ಮ ನಾಡಗೀತೆ ಮಾತ್ರ ಭಾರವಾಗಿ ಕಾಣುತ್ತದೆ. ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಸ್ವಾರ್ಥಕ್ಕಾಗಿ ಓಟ್ ಬ್ಯಾಂಕಿಂಗ್ ನಡೆಸುವ ಇವರುಗಳಿಗೆ ಅಲ್ಲಿ ಹಾಳುಮಾಡುವ ಸಮಯದ ಕುರಿತು ಚಿಂತೆ ಇರುವುದಿಲ್ಲ. ಆದರೆ ಮೌನವಾಗಿ ಎಲ್ಲರೂ ಅರೆ ಕ್ಷಣ ಎದ್ದು ನಿಂತು ಗೌರವದಿಂದ ಬಾಯಿ ತುಂಬ ಹಾಡುವ ನಮ್ಮ ನಾಡಗೀತೆಯು ಅವರಿಗೆ ನುಂಗಲಾರದ ತುತ್ತಾಗಿ ಕಾಡುತ್ತಿರುವುದು ನಮ್ಮ ಕನ್ನಡ ನಾಡಿನ ವಿಪಯರ್ಾಸ.
 ಇಂದು ಇಂತಹ ಒಂದು ಉತ್ತಮ ವ್ಯವಸ್ಥೆಯ ಗೌರವದ ಈ ನಾಡಗೀತೆಯನ್ನು ಹಾಡುವುದು ಅತೀ ಉದ್ದವಾಗಿದೆ. ಹೀಗಿರುವಾಗ ಅದನ್ನು ಈ ರೀತಿಯ ಕತ್ತರಿ ಪ್ರಯೋಗಕ್ಕೆ ಒಳಪಡಿಸುವುದು ಎಷ್ಟು ಸರಿ. ಹೀಗೆ ಒಳಪಡಿಸುವುದರಿಂದ ಈ ವಾದಿಗಳಿಗೆ ಆಗುವ ಪ್ರಯೋಜನವಾದರು ಏನು. ಇದನ್ನು ನಮ್ಮ ಜನತೆ ಪ್ರಶ್ನಿಸಬೇಕಾಗಿದೆ. ಯುವಜನರು ನಮ್ಮ ನಾಡಗೀತೆಯನ್ನು ಪೂತರ್ಿಯಾಗಿ ಉಳಿಸಿಕೊಳ್ಳುವಲ್ಲಿ ಹೋರಾಡಬೇಕಾಗಿದೆ. ಇದು ಒಬ್ಬ ವ್ಯಕ್ತಿ ಅಥವಾ ಗುಂಪು ಧರ್ಮಕ್ಕೆ ಸಂಬಂಧಪಟ್ಟರುವುದಲ್ಲ. ನಮ್ಮ ನಾಡು ನುಡಿ ಮತ್ತು ಮಣ್ಣಿಗೆ ಸಂಬಂಧಿಸಿರುವುದು ಆಗಿದೆ.
    ಅಂದಹಾಗೆ ನಾವು ಮೊದಲ ಹಾಗು ತೃತೀಯ ಚತುಮರ್ಾಸವನ್ನು ಮುಗಿಸಿ ನಾಲ್ಕನೇಯ ಮತ್ತು ಎರಡನೇಯ ಚತುಮರ್ಾಸದಲ್ಲಿ ತೊಡಗಿಸಿಕೊಂಡಿದ್ದೇವೆ. ಮುಂದೆ ಬರುವ ದಿನಗಳು ಬಹಳ ತರಾತುರಿಯ ದಿನಗಳು. ಹಲವಾರು ಕಾರ್ಯಕ್ರಮಗಳು, ಪರೀಕ್ಷೆಗಳು, ಪ್ರವಾಸಗಳು ಮತ್ತು ಅದರೊಂದಿಗೆ ಹೊರಜಗತ್ತಿಗೆ ಕಾಲಿಡುವ ಅನಿವಾರ್ಯತೆಯು ಕೂಡ ಬಂದೊದಗಲಿದೆ. ಅದಕ್ಕಾಗಿ ನಮ್ಮ ಕನ್ನಡ ಬಿತ್ತಿ ಪತ್ರಿಕಾ ಮಂಡಳಿಯು ಬಿತ್ತಿಯ ಓದುಗ ವರ್ಗಕ್ಕೆ ಹಾಗು ಎಲ್ಲಾ ವಿದ್ಯಾಥರ್ಿ ಗೆಳೆಯ-ಗೆಳತಿಯರಿಗೆ ಶುಭಹಾರೈಸುತ್ತಿದೆ. ಪರೀಕ್ಷೆಗಳು ನಮ್ಮ ಶ್ರಮಕ್ಕೆ ಫಲಕೊಡುವಂತಿರಲಿ. ಈ ಚತುಮರ್ಾಸದ ಮೊದಲ ಸಂಚಿಕೆಯನ್ನು ಮತ್ತೆ ನಿಮ್ಮ ಕೈಗಿಡಲು ಬಿತ್ತಿಮಂಡಳಿಗೆ ಸಂತೋಷವಾಗುತ್ತಿದೆ. ನಿಮ್ಮ ಸಹಕಾರ ಮತ್ತು ಓದುವ ಮನಸ್ಸು ಹೀಗೆ ಮುಂದುವರೆಯಲಿ.
ಸಂಪಾದಕರು 

No comments:

Post a Comment

  ಬಿತ್ತಿ ವಿಶೇಷಾಂಕ 2017