ಕಳ್ಳಿಗಿಡದ ಹೂ
ಮುಡಿಯೇರದ ಗುಡಿಸೇರದ ಕಳ್ಳಿಗಿಡದ ಹೂ 19 ವರ್ಷಗಳ ನಂತರ ಹೂ ಬಿಡುತ್ತಿದೆ. ಈ ಹೂ ಕಾಣಸಿಗುವುದು ಅಪರೂಪ. ಮುಡಿಪು, ಬಾಳೆಪುಣಿ ಗ್ರಾಮ ಪಂಚಾಯಿತಿ, ಕುಕ್ಕುಕಟ್ಟೆ ಮನೆಯ ಆವರಣದ ಬೇಲಿಯಲ್ಲಿ ಹೂವು ಚೆಲುವೆಲ್ಲಾ ನಂದೆನ್ನುತ್ತಾ ಮೈದುಂಬಿಕೊಂಡು, ಮುಂಜಾವಿನ ಮಂಜಿನಲ್ಲಿ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ನಿಂತಂತ್ತಿದೆ.ಕಳ್ಳಿಗಿಡದ ಹೂ ಬಿಟ್ಟಾಗ ಮೊಸರಿನ ಗಡಿಗೆ ಒಡೆದು ಚೆಲ್ಲಾಪಿಲ್ಲಿಯಾದಂತೆ ಭಾಸವಾಗುತ್ತದೆ. ಎಲೆಯ ಕೆಲಸವನ್ನು ಕಾಂಡವೇ ಮಾಡುವುದು ಕಳ್ಳಿಗಿಡದ ಒಂದು ವಿಶಿಷ್ಟ ಲಕ್ಷಣ. ಈ ಗಿಡವು ಬಹಳ ದಿನಗಳ ಕಾಲ ನೀರನ್ನು ತನ್ನ ಕಾಂಡದಲ್ಲಿಯೇ ಶೇಖರಿಸಿ, ಅದನ್ನು ಪುನಃ ಮರುಬಳಕೆ ಮಾಡುತ್ತದೆ.ಕಳ್ಳಿಗಿಡ ಎಂದರೆ ಮರುಭೂವಿಯಲ್ಲಿ ಬೆಳೆಯುವ ಒಂದು ಬಗೆಯ ಸಸ್ಯ ಇದರಲ್ಲಿ ಹೂಗಳು ಅಪರೂಪಕ್ಕೆ ಮೂಡುತ್ತವೆ. ಇಂಗ್ಲೀಷ್ನಲ್ಲಿ ಕ್ಯಾಕ್ಟಸ್ ಎನ್ನುತಾರೆ. ಕಳ್ಳಿಗಿಡಗಳ ಹೂವುಗಳು ದೊಡ್ಡದಾಗಿ, ಆಕರ್ಷಕವಾಗಿರುತ್ತವೆ. ಆದರೆ ಈ ಹೂ ಕೆಲವೇ ಗಂಟೆಗಳಲ್ಲಿ ಮುದುಡಿ ಬಾಡಿಹೋಗುತ್ತದೆ.ಚಂದ್ರಶೇಖರ ಎಂ.ಬಿ ಛಾಯಾಗ್ರಾಹಕ ಎಸ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ
ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ವಿಭಾಗದ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಈ ಬ್ಲಾಗ್ ನಲ್ಲಿ ಬರೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದ. ಇಲ್ಲಿ ಸಾರ್ವಜನಿಕರು, ಸಾಹಿತ್ಯಾಸಕ್ತ ಸಹೃದಯಿಗಳು, ಪತ್ರಿಕೋದ್ಯಮಿಗಳು ಹಾಗೂ ಕನ್ನಡ ಪ್ರೇಮಿಗಳು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು. ಇಲ್ಲಿ ಕಥೆ,ಕವನ, ಚುಟುಕು,ವಿಮರ್ಶೆ,ನುಡಿ ಚಿತ್ರ, ಚಿತ್ರ ಕವನ,ಲೇಖನ ಮತ್ತು ಛಾಯಾಚಿತ್ರಗಳನ್ನು ಪ್ರಕಟಿಸಲಾಗುವುದು.
9/25/14
Subscribe to:
Post Comments (Atom)
ಬಿತ್ತಿ ವಿಶೇಷಾಂಕ 2017
-
ಬಿತ್ತಿಯ ಮೊದಲ ಗೌರವ ಸಂಪಾದಕರಾದ ಖ್ಯಾತ ಸಾಹಿತಿ ಶ್ರೀ ವಿವೇಕ್ ರೈ ರವರ ಮಾತು ಬಿತ್ತಿಯ ಮೊದಲ ಸಂಪಾದಕರಾದ ಖ್ಯಾತ ಸಾಹಿತಿ ಅರವಿಂದ ...
-
ಏಕಾಂಗಿಯಾಗುತ್ತಿರುವ ಬಾಲ್ಯ ಜೀವನ 'ಕೂಡಿ ಬಾಳಿದರೆ ಸ್ವರ್ಗ ಸುಖ' ಎಂಬ ಸುಂದರವಾದ, ಅರ್ಥವತ್ತಾದ ಗಾದೆ ಮಾತೊಂದಿದೆ. ಈ ಗಾದೆಯನ್ನು ಇಲ್ಲಿ ಉಲ್ಲೇಖಿಸಲು ಕಾರ...
No comments:
Post a Comment