8/30/14

“ಬಿತ್ತಿ” ಎಂಬ ಹೆಸರಿನ ಸಾಪ್ತಾಹಿಕ ಸಾಹಿತ್ಯಿಕ ಪತ್ರಿಕೆಯು 1-1-1991ರಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ  ಮೂಲಕ ಆರಂಭವಾಗಿದ್ದು ಇದರಲ್ಲಿ ವಿಶ್ವವಿದ್ಯಾನಿಲಯದ ಎಲ್ಲ ವಿಭಾಗಗಳ ವಿದ್ಯಾರ್ಥಿಗಳು, ಆಸಕ್ತ ಸಂಶೋಧಕರು, ಉಪನ್ಯಾಸಕರು ಬರೆಯುತ್ತಿದ್ದಾರೆ. ಒಂದರ್ಥದಲ್ಲಿ ಕನ್ನಡದಲ್ಲಿ ಬರೆಯುವ ಎಲ್ಲ ಮನಸ್ಸುಗಳಿಗೆ ಒಂದು ವೇದಿಕೆ. ಇದು ಸಾಹಿತ್ಯಿಕ ಪತ್ರಿಕೆಯಾದರೂ ಇಲ್ಲಿ ಸಾಂಸ್ಕೃತಿಕ ಮಹತ್ವ ಇತರೆ ವಿಷಯಗಳು ಪ್ರಕಟವಾಗುತ್ತವೆ. ವಿದ್ಯಾರ್ಥಿಗಳೇ ಆಯ್ಕೆ ಮಾಡಿದ ಸಂಪಾದಕ ಮಂಡಳಿಯಿದ್ದು, ಕನ್ನಡ ವಿಭಾಗದ ಮುಖ್ಯಸ್ಥರು ಇದರ ಪ್ರಧಾನ ಸಂಪಾದಕರಾಗಿರುತ್ತಾರೆ. ಆದರೆ ಸಂಪೂರ್ಣ ಜವಾಬ್ದಾರಿಯನ್ನು ಸಂಪಾದಕ ವಿದ್ಯಾರ್ಥಿಯು ನಿರ್ವಹಿಸುವರು.ಪ್ರಕಟವಾಗುವ ಪ್ರತಿಯೊಂದನ್ನು ಪರಿಶೀಲಿಸುವ ಕೆಲಸವನ್ನು ಪ್ರಧಾನ ಸಂಪಾದಕರು ಮಾಡುತ್ತಾರೆ. ಮತ್ತು ವಿದ್ಯಾರ್ಥಿ ಸಂಪಾದಕ ಮಂಡಳಿಯ ಸದಸ್ಯರು ಸಲಹೆ, ಸೂಚನೆಗಳನ್ನು ನೀಡುತ್ತಾರೆ. ಇಲ್ಲಿಯವರೆಗೆ ಈ ಪತ್ರಿಕೆಯ ಸಂಪಾದಕರಾಗಿದ್ದ ಹಲವಾರು ಜನ ವಿದ್ಯಾರ್ಥಿಗಳು ಇಂದು ನಾಡಿನ ದೊಡ್ಡದೊಡ್ಡ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಂದು ತಿಳಿಸಲು ಬಿತ್ತಿ ಮಂಡಳಿಯು

 ಹರ್ಷಿಸುತ್ತದೆ

ಬಿತ್ತಿ ಸಂಪಾದಕ ಬಳಗ

2 comments:

  1. ಧನ್ಯವಾದಗಳು ಶ್ರೀ ದೇವಿ ಭಟ್ಟ್ ರವರೆ.ನಿಮ್ಮಿಂದಲು ಉತ್ತಮ ಬರಹಗಳನ್ನು ನಿರೀಕ್ಷಿಸುತ್ತೆವೆ.

    ReplyDelete

  ಬಿತ್ತಿ ವಿಶೇಷಾಂಕ 2017