1/21/15

 ಜೀವನ
ಮೂಡುವನು ಸೂರ್ಯನು ಪೂರ್ವದಲ್ಲಿ
ಜನರ ಕಾಯಕವು ಆರಂಭ
ಖಗ - ಮೃಗಗಳ ಆಟೋಟ...
ಭಗವಂತ ತಿರುಗಿಸಿದ ಬುಗುರಿಯಂತೆ...
       ಮಕ್ಕಳ ಶಾಲೆಗೆ ಪಯಣ
       ಆಟಪಾಠಗಳ ಸಮ್ಮಿಲನ
       ಮುಗ್ಧ ಮನಸ್ಸಿನ ಪುಟಾಣಿಗಳು
       ಭಗವಂತನ ಇನ್ನೊಂದು ರೂಪದಂತೆ
ರಾತ್ರಿಯ ನಿಶ್ಯಬ್ಧ ವಾತಾವರಣ
ಕಲುಷಿತವಾಗಲು ಶುರುವಾಯ್ತು...
ಮನುಷ್ಯ - ಮನುಷ್ಯರ ನಡುವೆ ಕಲಹ
ಕಟ್ಟಾಟ ಹೊಡೆದಾಟ ಜಗಳವಯ್ಯ...
       ತಾನು ಆಡಿಸಿದ ಆಟವನು
       ನೋಡಿ ಭಗವಂತ ನಗುವನು...
       ಇಹದ ಮೋಹದಲ್ಲಿರುವ ಜನರು...
       ಆಡುವರು ಪರದ ಜ್ಞಾನವಿಲ್ಲದಂತೆ...
ಒಂದೊಂದು ಕಡೆಯಲ್ಲಿ ಬಡತನ,
ತಿನ್ನಲು ಗತಿಯಿಲ್ಲದ ಜನ,
ಇನ್ನೊಂದು ಕಡೆಯಲ್ಲಿಹರು ಸಿರಿವಂತ ಜನ
ಮೋಜು ಮಸ್ತಿಯ ಮಾಡುತಿಹರು...
       ಹಣವಿಲ್ಲವೆಂಬ ಚಿಂತೆ ಬಡವನಿಗೆ
       ಹಣವಿದ್ದರೂ ಚಿಂತೆ ಸಿರಿವಂತನಿಗೆ
       ಚಿಂತೆಯೆನ್ನುವುದು ಕರೆದೊಯ್ಯುವುದು....
       ಮನುಷ್ಯರನ್ನು ಚಿತೆಯೆಡೆಗೆ
ರವಿಯು ಮುಳುಗಿದನು ಪಶ್ಚಿಮದಲ್ಲಿ
ನೆಲೆಸಿಹುದು ಪ್ರಕೃತಿಯ ಮಡಿಲಲ್ಲಿ ಶಾಂತಿ...
ಖಗ - ಮೃಗಗಳೆಲ್ಲವೂ...
ತಮ್ಮ ಕನಸಿನ ಲೋಕಕೆ ಜಾರಿಹುದು..
       ಇದುವೇ ದಿನದ ಅಂತ್ಯ...
       ಹೀಗೆ ಉರುಳುವುದು...
       ದಿನ - ತಿಂಗಳು ವರುಷಗಳು...
       ಈ ಬಂಧನ ಮುಗಿಯುವುದು....
      
                           ಪ್ರಭಾಶ್ರೀ
                           ದ್ವಿತೀಯ ಎಂ. ಎಸ್ಸಿ. ಕೆಮಿಸ್ಟ್ರಿ

No comments:

Post a Comment

  ಬಿತ್ತಿ ವಿಶೇಷಾಂಕ 2017