1/21/15

ಗೆಳೆಯನಿಗೆ
ಕೆಟ್ಟವಳು ನಾನಲ್ಲ ಗೆಳೆಯಾ....
ಅದಾವ ದೃಷ್ಠಿಯಲ್ಲಿ ನನ್ನ ಕೆಟ್ಟವಳೆಂದು ಬಗೆದೆ ನೀ?
ಮಾತಾಡಿಲ್ಲವೆ? ನಾ ಮುನಿದೆನೆ?
ಕೆಟ್ಟತನದ ಅರ್ಥ ಅರಿಯದವಳಲ್ಲ ನಾನು
ಆದರೆ ನನ್ನ ಕೆಟ್ಟತನಕ್ಕೆ ನಿನ್ನ ನಾ ಯಾವತ್ತೂ ಒಳಪಡಿಸಿಲ್ಲ
ನಿನ್ನ ಕನಸುಗಳೆಲ್ಲಾ ನನಸಾಗಲಿ ಎಂದು ದೇವರಲ್ಲಿ ಪ್ರಾಥರ್ಿಸಿದೆ
ನಿನ್ನ ನಾನು, ನನಗರಿಯದೆ ನೋಯಿಸಿರಬಹುದು
ಆದರೆ ಗೆಳೆಯಾ.....
ಅಲ್ಲಿ ನನ್ನದು ಯಾವುದೇ ಸ್ವಾರ್ಥ, ವಂಚನೆ, ಕೆಟ್ಟತನ ಇರಲಿಲ್ಲಾ
ಗೆಳೆಯ ಒಂದು ಕಾಲದಲ್ಲಿ...
ನನ್ನ ನೋವು ದುಃಖ ದುಮ್ಮಾನಗಳಿಗೆ ನೀ ಕಿವಿಯಾಗಿದ್ದೆ
ನಿನ್ನ ಕಷ್ಟ ನಷ್ಟಗಳಿಗೆ ನಾ ಭಾಗಿಯಾಗಿದ್ದೆ
ನಿನ್ನ ಪ್ರತಿಯೊಂದು ಜಯದಲ್ಲಿ ನಾ ಹೃದಯದಿಂದ ನಕ್ಕಿದ್ದೆ
ನಿನ್ನ ಸುಖ ಸಂತೋಷಗಳಲ್ಲಿ ನನ್ನ ನಾ ಮರೆತಿದ್ದೆ
ನಮ್ಮೊಳಗೆ ಯಾವುದೇ ಮುಚ್ಚು ಮರೆಯಿರಲಿಲ್ಲಾ, ಅದ ನೀ ಅರಿತಿದ್ದೆ
ಆದರೂ..... ಆದರೂ... ನಾನು ಕೆಟ್ಟವಳು ಎನಿಸಿಕೊಂಡೆ
ನನ್ನ ನೆನೆದಾಗ ನಿನಗೇನೋ ಅನಿಸಬಹುದು
ಆದರೂ ಈ ಕೆಟ್ಟವಳು ನಿನ್ನ ನಗು ಮೊಗವನ್ನು
ಹುಸಿ ಮುನಿಸನ್ನು, ಕೀಟಲೆಗಳನ್ನು ತುಂಟಾಟವನು
ನೆನೆ-ನೆನೆದು....
ನೀನು ಈ ನನ್ನ ಪರಿಶುದ್ಧ ಸ್ನೇಹವನ್ನು ಅರಸಿ ಮತ್ತೆ ಬರುವುದಿಲ್ಲವೆಂದು
ತಿಳಿದೂ  ತಿಳಿದೂ... ನಾನು ಕಾದಿರುವೆ...
ಕೊನೆಯದಾಗಿ ನಿನ್ನ ಪರಿಶುದ್ಧ ಮನಸ್ಸಿನಿಂದ
ಈ ಕೆಟ್ಟವಳನ್ನು ಕ್ಷಮಿಸಿಬಿಡು ಓ ಗೆಳೆಯಾ....

-     ಅರ್ಚನಾ ಎಸ್. ಶೆಟ್ಟಿ
ಪ್ರಥಮ ಎಂ.ಎ. ಕನ್ನಡ ವಿಭಾಗ

No comments:

Post a Comment

  ಬಿತ್ತಿ ವಿಶೇಷಾಂಕ 2017