ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ವಿಭಾಗದ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಈ ಬ್ಲಾಗ್ ನಲ್ಲಿ ಬರೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದ. ಇಲ್ಲಿ ಸಾರ್ವಜನಿಕರು, ಸಾಹಿತ್ಯಾಸಕ್ತ ಸಹೃದಯಿಗಳು, ಪತ್ರಿಕೋದ್ಯಮಿಗಳು ಹಾಗೂ ಕನ್ನಡ ಪ್ರೇಮಿಗಳು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು. ಇಲ್ಲಿ ಕಥೆ,ಕವನ, ಚುಟುಕು,ವಿಮರ್ಶೆ,ನುಡಿ ಚಿತ್ರ, ಚಿತ್ರ ಕವನ,ಲೇಖನ ಮತ್ತು ಛಾಯಾಚಿತ್ರಗಳನ್ನು ಪ್ರಕಟಿಸಲಾಗುವುದು.
9/28/15
1/21/15
ಸುಮ್ಮನೆ ಬರೆದುಕೊಂಡದ್ದು..!
ಚುಮು ಚುಮು ಚಳಿಯ ಮುಂಜಾವಿನಲ್ಲಿ ಸಾವಿನಂತ ನಿದ್ದೆಯಲ್ಲೂ ಅದೊಂದು ಹಾಳು ಕನಸು ಬೀಳದಿದ್ದರೆ ಎಚ್ಚರಗೊಳ್ಳುತ್ತಿರಲಿಲ್ಲವೇನೋ? ಕಣ್ಣು ಬಿಟ್ಟರೆ ಹಗ್ಗದಲ್ಲಿ ನೇತಾಡುತ್ತಾ ಮತ್ತೊಂದು ದಿನವನ್ನು ಹತ್ಯೆಮಾಡಲು ಕಾಯುತ್ತಿರುವ ಕ್ಯಾಲೆಂಡರ್! ಅದಾಗಲೇ ಮಸಣದಲ್ಲಿ ಉರಿಯುವ ಬೆಂಕಿಯಂತ ಈ ಹಾಳು ಸೂರ್ಯನಿಗೆ ಹಲ್ಲುಜ್ಜದ ಎಂಜಲು ಉಗಿಯಬೇಕೆನ್ನುವಷ್ಟರಲ್ಲಿ ಅಮ್ಮನ ಮಾಮೂಲು ಸುಪ್ರಭಾತ. ಅಪ್ಪನದ್ದು ಮಿಲಿಟ್ರಿ ನಡಿಗೆ. ಇನ್ನು ತಂಗಿಯದ್ದು ಜಾತ್ರೆಯ ಅಂಗಡಿಗಳ ಸಾಲು ನೆನಪಿಸುವ ಮೇಕಪ್ಪು! ಇವಿಷ್ಟನ್ನು ಹೊಂದಿಸಿಕೊಂಡು ಹೊರಡುವಷ್ಟರಲ್ಲಿ ಅರ್ಧ ಸುಟ್ಟ ಹೆಣದಂತೆ ಹಳತಾಗಿರುವ ಬೈಕ್! ಅದನ್ನು ಏರಿ ಕ್ಯಾಂಪಸ್ಗೆ ಬಂದರೆ, ಅರೆ! ಅದ್ಭುತ. ರಂಗು ರಂಗಿನ ಬಾನಿನಲ್ಲಿ ಬೇಕೆಂದರಲ್ಲಿ ಅಡ್ಡಾಡುವ ಬಾನಾಡಿಗಳಂತಹ, ಶುದ್ಧ ಕನಸ್ಸನ್ನು ಹೊತ್ತು ಸಾಗುತ್ತಿರುವ ದೀಪಗಳ ಸಾಲುಗಳಂತಹ ಮನಸ್ಸುಗಳ ಮೆರವಣಿಗೆ.ಹೀಗೆ ಪ್ರತೀ ದಿನದ ಹತ್ಯೆಯಲ್ಲೂ ಮರುದಿನದ ಗಂಗೋತ್ರಿಯ ಹರಿವಿಗೆ ಹೊಸತನ ದೊರಕುತ್ತಿರುತ್ತದೆ. ಇದೇನು ಇಂದು ನಿನ್ನೆಯದ್ದಲ್ಲ. ಸಾವಿರ ಸಾವಿರ ದಿನಗಳಲ್ಲೂ ಆಕಾಶ ಮತ್ತು ಚಂದ್ರನಿಗಿದ್ದಂತಹ ಗಟ್ಟಿ ಸಂಬಂಧ ಗಂಗೋತ್ರಿಯ ನೆಲದ್ದು. ಧೋ.. ಎಂದು ಭೋರ್ಗರೆವ ಹಾಳು ಮಳೆಗೂ ಕ್ಯಾಂಪಸ್ಸಿನಲ್ಲಿ ಕಲರವ ಇದ್ದೇ ಇರುತ್ತದೆ. ಇನ್ನು 'ಮಿಂಚು ಗುಡುಗುಗಳು' ಮಾಮೂಲು ದಾರಿಗಳಲ್ಲಿ, ಕ್ಯಾಂಟೀನು, ಬಸ್ಸ್ಟ್ಯಾಂಡ್ಗಳಲ್ಲಿ ದಿನಾ ಎದುರಾಗುತ್ತವೆ ಅಲ್ಲವೇ ಗೆಳೆಯರೆ. ಕುಣಿದು ಕುಪ್ಪಳಿಸುವುದಕ್ಕೆ, ಗೆಳೆಯರ ಹೆಗಲಿನಲ್ಲಿ ಪುಟ್ಟ ಮಗುವಾಗಿ ಕಣ್ಣೀರು ಸುರಿಸುವುದಕ್ಕೆ, ಅವಳಿಗಾಗಿ ಕಾಯುತ್ತಾ ಕಾಲ ಸವೆಸುವುದಕ್ಕೆ, ಅವಳಿಗಾಗಿಯೇ ಲೈಬ್ರೆರಿ, ಕ್ಯಾಂಟೀನ್, ಕ್ಲಾಸುಗಳಲ್ಲಿ ಅಡ್ಡಾಡುವುದಕ್ಕೆಲ್ಲಾ ಅವಕಾಶ ನೀಡುವುದು ಇದೇ ಗಂಗೋತ್ರಿ. ಗಂಗೋತ್ರಿಯ ಹಸಿವೇ ಅಂತಹದ್ದು. ಅಕ್ಷರದಿಂದ ಹಿಡಿದು ಅನ್ನದವರೆಗೆ, ದು:ಖದಿಂದ ಆರಂಭಿಸಿ ಕೇಕೆ ಹಾಕುವವರೆಗೆ, ಕಾಯುವ ಕಷ್ಟದಿಂದ ತೊಡಗಿ ಅವಳು ಕಾಣಿಸುವ ಸುಖಗಳಿಗೆಯವರೆಗೆ, ಕೊನೆಗೆ ಹಾಳು ನಿದ್ದೆಯಿಂದ ಎದ್ದು ನಮ್ಮ ಎಂದಿನ ಇನಿಯ-ಹಳೆಯ ಕಂಬಳಿ ಸುತ್ತಿ ಮಲಗುವವರೆಗೆ ಒಂದಿಡೀ ಕಾಲ ಚಕ್ರ ಸುತ್ತುವ ಹಾದಿಯಲ್ಲೆಲ್ಲಾ ಗಂಗೋತ್ರಿಯ ಮಣ್ಣಿನ ಸುವಾಸನೆ ಇದ್ದೇ ಇರುತ್ತದೆ ಗೆಳೆಯರೆ. ಮುಂದಿನ ದಿನಕ್ಕೆ ಆ ಹಸಿವು ಹಾಗೆ ಮುಂದುವರಿದಿರುತ್ತದೆ. ಬೇಕಿದ್ದರೆ ಹೊಟ್ಟೆಯ ಮೇಲೆ ಕೈಯಿಟ್ಟು ಆಲಿಸಿ ನೋಡಿ!!ಇದೆಲ್ಲಾ ನೆನಪಾದದ್ದು ಇದೇ ನಿನ್ನೆಯೆಂಬ ಶವದ ಮುಂದೆ ಕುಳಿತು 'ಮುಖಪುಟ' ನೋಡುತ್ತಿದ್ದಾಗ. ಇದೇ ಪುಟ್ಟ ಗೆಳೆಯನೊಬ್ಬ ಬಂದು ಪೆನ್ನಿನಿಂದ ಒಂದಕ್ಷರ ಕೆತ್ತಿಕೊಡಿ ಎಂದಾಗ. ಅರೆ, ನಾನು ಹೀಗೆ ಮನಸ್ಸಿನ ಮಾತಿಗೆ ಅಕ್ಷರದಲ್ಲಿ ಬಸಿರು ಮೂಡಿಸದೆ ಕಾಲವೆಷ್ಟಾಯಿತು? ಅಗೋ ಅಲ್ಲೇ ಅವಳ ಗೆಜ್ಜೆಯ ಸದ್ದು. ಹೂಂ ಅಂದದ್ದೂ ಸರಿಹೋಯಿತು. ಬರೆದು ಬಿಡಲೇ, ಅದು ನನ್ನ ಕೆಲಸ, ಊಟ ಮಾಡಿದಂತೆ, ಹೊಗೆಯಾಡಿದಂತೆ! ಆಗಬೇಕೆಂದರೆ ಬರೆಯಬೇಕು, ಅದನ್ನು ಯಾರಾದರೂ ಓದಿದಾಗ, ಓದುತ್ತಿರುವಾಗ ದೂರದಲ್ಲಿ ನಿಂತು, ನನ್ನ ಅಕ್ಷರದ ಘಮ ಹೀರುತ್ತಿರುವ ಮುಖಗಳ ಮುಗುಳ್ನಗುವನ್ನು ಕಂಡಾಗ ಆಗುವ ಸುಖ, ಅಸಲು ಸಾವಿನಲ್ಲೂ ಇರಲಿಕ್ಕಿಲ್ಲ ಗೆಳೆಯರೆ! ಹಾಗಾಗಿ ಸುಮ್ಮ ಸುಮ್ಮನೆ ಮನಸ್ಸಿನ ಮಾತಿಗೆ ಆಕಾರಗಳನ್ನು ಸೇರಿಸಿ ಮುಂದಿಟ್ಟುಬಿಡಿ, ಓದುವ ಕಣ್ಣುಗಳಿಗೆಲ್ಲಾ ಅದು ಸಾವಿರಾರು ರೂಪಗಳನ್ನು ಕೊಟ್ಟೀತು, ಯಾರಿಗೊತ್ತು! ನಿಮ್ಮ ಹೆಸರಿಗೆ ಹೆಸರು ಬಂದೀತು! ಯಾವುದೂ ಆಗದಿದ್ದರೆ ಪೆನ್ನಿನ ಶಾಯಿ ಮುಗಿದು, ಹೊಸ ಪೆನ್ನಾದರೂ ಕಿಸೆಯಲ್ಲಿ ರಾರಾಜಿಸೀತು!ಹೀಗಂದುಕೊಂಡೇ ನಾನು ರಾತ್ರಿ ಬರೆಯಲು ಹೊರಟಿದ್ದು. ಬರೆದ ಶೀಷರ್ಿಕೆಯ ಮೊದಲ ಅಕ್ಷರಕ್ಕೇ ಪೆನ್ನು ಒಲ್ಲೆನೆಂದಿತು. ಹಾ, ಇನ್ನು ಈ ಕರೆಂಟೋ, ಅವಳ ನೋಟದಂತೆ ಚಶ್ಮಾದೊಳಗಿನಿಂದ ಕಣ್ಣುಮಿಟುಕಿಸಿದಂತೆ ಹಾಗೆ ಬಂದು ಹೀಗೆ ಹೋಯಿತು! ಹೊರಗೆ ಬಾನಿನಲ್ಲಿ ಚಂದ್ರನೂ ಇಲ್ಲದನ್ನು ಕಂಡು, ಅವನಿಗೂ ಬೈದು, ಕಂಬಳಿ ಸುತ್ತಿ ಮಕಾಡೆ ಮಲಗಿ ಕಣ್ಣುಮುಚ್ಚಿದೆ. ಬೆಳಗ್ಗೆ ಎದ್ದರೆ ಹೊಸ ಮುಂಜಾವು. ಅಂಗಡಿಗೆ ಬಂದು ತೆಗೆದುಕೊಂಡ ಹೊಸ ಪೆನ್ನಿನ ಶಾಯಿಯಲ್ಲೇ, ನಿನ್ನೆ ಉಳಿದುಹೋದ ಅಕ್ಷರಕ್ಕೆ, ಅಕ್ಷರ ಜೋಡಿಸುತ್ತಿದ್ದೇನೆ. ಆ ಹಾಳು ಕನಸಿಗೂ ಮತ್ತೊಂದು ಹೊಸ ಕನಸು ಪೋಣಿಸುವಂತಿದ್ದರೆ ಹೇಗಿರುತ್ತಿತ್ತು, ಅಬ್ಬಾ... ಇರಲಿ, ಹೊಸ ಕನಸಿನ ಮುಂಜಾವು ಹೀಗೆ ಎದುರಾಗಿದೆ, ಇನ್ನು ಅವಳೂ ಎದುರಾದಾಳು! ನೀವೆಲ್ಲರೂ ಕಂಡ ಕನಸಿನ ಬದುಕಿಗೆ ಗೆಜ್ಜೆ ಕಟ್ಟಿಕೊಳ್ಳಿ. ಕಣ್ಣೂ ನಿಮ್ಮದೇ, ಕನಸೂ ನಿಮ್ಮದೇ. ಕಂಡ ಕನಸ್ಸನ್ನು ಹೀಗೆ ಬರೆದುಕೊಳ್ಳಿ, ಬರವಣಿಗೆಯ ಸುಖ ನಿಮಗೆ ನೀವೇ ಅನುಭವಿಸಿಕೊಳ್ಳಿ...
ಯಶುಕುಮಾರ್. ಡಿ ಸಂಶೋಧನಾರ್ಥಿ ಕನ್ನಡ ವಿಭಾಗ

ಗಾಂಧಿಯ ದೂರದೃಷ್ಠಿಯಲ್ಲಿ ಮೋಡಿ ನಡೆದಿತೆ?
ಗಾಂಧಿ ಎಂದ ಕ್ಷಣ ನಾವೆಲ್ಲರೂ 'ರಾಷ್ಟ್ರಪಿತ' ಎನ್ನುವ ಕಲ್ಪನೆಯನ್ನು ಇಟ್ಟುಕೊಂಡಿದ್ದೇವೆ. ಮಾತ್ರವಲ್ಲ ಗಾಂಧಿಯವರ ದೂರದೃಷ್ಠಿ ಎಲ್ಲರಿಗೂ ಎಲ್ಲಾ ಸಮಯದಲ್ಲೂ ಅನ್ವಯವಾಗುವಂತದು. ಗಾಂಧೀಜಿಯವರು ಕಂಡ ಕನಸು ಸ್ವಾತಂತ್ರ್ಯೋತ್ತರ ಭಾರತವನ್ನು ಮಾದರಿ ರಾಜ್ಯವಾಗಿ ನಿರೂಪಿಸುವ ಮಹತ್ವಕಾಂಕ್ಷೆಯನ್ನು ಹೊಂದಿದವರು. ಸಾಕಷ್ಟು ಸುಧಾರಣೆಯ ಬಳಿಕ ರಾಮರಾಜ್ಯದ ಕಲ್ಪನೆಯ ಕನಸು ಹೊಂದಿದ್ದರು, ಇದನ್ನು ಇಂದಿನ ಯುವ ಜನಾಂಗಕ್ಕೆ ಊಹಿಸಲು ಅಸಾಧ್ಯ. ಯಾಕೆಂದರೆ ಗಾಂಧೀಜಿ ಯವರು ಕೆಲವರಿಗೆ ಆದರ್ಶ ವ್ಯಕ್ತಿಯಾದರೆ ಇನ್ನು ಕೆಲವರಿಗೆ ಗಾಂಧೀಜಿ ಯವರ ಬಗ್ಗೆ ತುಂಬಾ ಹಗುರವಾಗಿ ಮಾತನಾಡುವುದನ್ನು ನೋಡುತ್ತೇವೆ. ಯಾಕೆಂದರೆ ಇಂದಿನವರಿಗೆ ಗಾಂಧೀಜಿ ಬೇಡ, ಮೋದಿ ಬೇಕು. ಹೀಗಾಗಲು ಹಲವಾರು ಕಾರಣವಿರಬಹುದು. ಕೆಲವರು ' ಮೋದಿ ಎಂಬ ಎದೆಯೊಳಗಿನ ಕೂಸು' ಹೆಸರೆತ್ತಿದ ಕ್ಷಣ ಸಿಡಿಮಿಡಿಗೊಳ್ಳುವ, ಉರಿದು ಬೀಳುವ ಯುವ ಜನಾಂಗದ ಬಿಸಿನೆತ್ತರು ಉಕ್ಕುತ್ತಿದೆ. ಈ ಉಕ್ಕುವ ರಕ್ತವನ್ನು ಬಳಕೆ ಹೇಗೆ ಮಾಡಬೇಕು ಎನ್ನುವುದು ಗೊತ್ತಿಲ್ಲ? ಯಾಕೆಂದರೆ ಮೋದಿ ಬಗ್ಗೆ ತಿಳಿದಿರುವ ನಾವು ಮೋದಿ ಸರಕಾರ ರೂಪಿಸುತ್ತಿರುವ ಒಂದು ಮಹತ್ವಕಾಂಕ್ಷೆ ಯೋಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಲಬೇಕು. ಅದುವೆ 'ಸ್ವಚ್ಚ ಭಾರತ್' ಅಭಿಯಾನದಲ್ಲಿ ಯುವ ಜನಾಂಗದ ಪಾತ್ರ ಬಹಳ ಮಹತ್ತರವಾದದು. ಯಾಕೆಂದರೆ ಸಿಕ್ಕ ಸಿಕ್ಕ ಕಡೆಗಳಲ್ಲಿ ಕಸಗಳನ್ನು ಮತ್ತು ಬೇಡದ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುವ ಜಾಯಮಾನ ಇಂದಿನ ಯುವ ಪೀಳಿಗೆಯಲ್ಲಿದೆ. ಅಷ್ಟು ಮಾತ್ರವಲ್ಲ ಇಲ್ಲಿ ಕಸ ಹಾಕಬಾರದು ಎಂಬ ಸೂಚನ ಫಲಕ ಇದ್ದ ಜಾಗದಲ್ಲೆ ಉದ್ದೇಶ ಪೂರ್ವಕವಾಗಿ ಕಸವನ್ನು ಹಾಕುತ್ತೇವೆ. ಇದಕ್ಕೆ ಕಾರಣ ಅರಿವಿನ ಕೊರತೆ ಅಲ್ಲ, ಹೇಗಾದರೂ ಹೀಗೆ ಅಲ್ಲವೆ? ಎನ್ನುವ ಬೇಜಾವಬ್ದಾರಿ. ಈ ಯೊಜನೆಯನ್ನು ಜಾರಿಗೆ ತಂದ ಬಳಿಕ ಯುವ ಜನಾಂಗ ಬದಲಾದಿತು ಮತ್ತು ಸ್ವಚ್ಚ ದೇಶದ ಕಲ್ಪನೆಯು ಅವರ ಮನಸ್ಸುಗಳಲ್ಲಿ ಮೂಡಿತು ಎನ್ನುವ ಚಿಕ್ಕ ಆಸೆಯನ್ನು ಇಟ್ಟುಕೊಳ್ಳ ಬಹುದು.
ಹಾಗೆ ಎಂದು ಜನತೆ ಕನಸು ಕಾಣುತ್ತಾ ಸುಮ್ಮನೆ ಕುಳಿತುಕೊಳ್ಳುವುದು ಸರಿಯಲ್ಲ. ಯಾಕೆಂದರೆ ತಮ್ಮ ಶ್ರಮ ಕೂಡ ದೇಶಕ್ಕೆ ಅಮೂಲ್ಯವಾದದ್ದು ಎನ್ನುವುದನ್ನು ಮರೆಯಬಾರದು 'ಸ್ವಚ್ಚ' ಎಂದ ಕ್ಷಣ ಎಲ್ಲವೂ ಅದರಲ್ಲಿಯೂ ದೇಹ, ಮನಸ್ಸು, ನದಿಮೂಲ, ಜಲಮೂಲ, ಮಣ್ಣು ಎಲ್ಲವೂ ಸ್ವಚ್ಚವಾಗಬೇಕಲ್ಲ ಮಾತ್ರವಲ್ಲ ಯೋಚನೆಯ ಧಾಟಿ, ಹೀಗೆನೆ ನಮ್ಮ ದೇಶ ಸುಭೀಕ್ಷ ದೇಶವಾಗಲು 2019ರ ಗುರಿಯನ್ನು ಹೊಂದಿರುವ ಪ್ರಜೆಗಳು, ಕಾರ್ಯಮಗ್ನರಾಗಬೇಕು ಈ ಕ್ಷಣದಿಂದ ಅಲ್ಲವೆ?
ಹೀಗೆ ಹೇಳಿದ ತಕ್ಷಣ ಇದಕ್ಕಾಗಿ ನಾವು ಏನು ಮಾಡಬೇಕು? ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಮೂಡಬಹುದು. ಇದಕ್ಕೆ ಉತ್ತರ ಕೂಡ ಯುವ ಜನಾಂಗದಲ್ಲಿ ಅಸ್ಪಷ್ಟವಾಗಿರಬಹುದು. ಯಾಕೆಂದರೆ ದೇಶದ ಕಲ್ಪನೆ ಅವರಿಗೆ ಇಲ್ಲದೆ ಇರಬಹುದು. ಆದರೆ ನಮ್ಮ ಮನೆ, ನಮ್ಮ ಊರು ಇವುಗಳ ಕಲ್ಪನೆ ಸಾಮಾನ್ಯವಾಗಿ ಇರುತ್ತದೆ. ಮೊದಲು ಯುವ ಜನಾಂಗ ಕೆಲವೊಂದು ಚಟಗಳನ್ನು ಬಿಡಬೇಕು. ಮಾತ್ರವಲ್ಲ ತಮ್ಮ ಮನೆಯ ಸುತ್ತಮುತ್ತ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಸ್ವಚ್ಚ ಎಂದ ತಕ್ಷಣ ಗುಡಿಸುವುದು, ನೆಲ ಒರೆಸುವುದು ಅಲ್ಲ. ಮನೆಯ ಪರಿಸರವನ್ನು ಸ್ವಚ್ಚ ಗೊಳಿಸುವುದು ಬಳಿಕ ತಮ್ಮ ಸುತ್ತಮುತ್ತಲಿನ ಮನೆಯವರಲ್ಲಿ ಜಾಗೃತಿಯನ್ನು ಮೂಡಿಸುವುದು ಮುಖ್ಯ. ಬಳಿಕ ತಿಳುವಳಿಕೆಯನ್ನು ನೀಡುವುದು ಮಾತ್ರವಲ್ಲ ತಾವು ಕೂಡ ಅದರಲ್ಲಿ ಭಾಗವಹಿಸಬೇಕು. ಇಷ್ಟು ಎಂದ ಮಾತ್ರಕ್ಕೆ ಎಲ್ಲಾ ಜವಾಬ್ದಾರಿಗಳು ಮುಗಿಯಿತು ಎಂದು ತಿಳಿಯವಾರದು.
ಇನ್ನಷ್ಟು ಕೆಲಸಗಳು ಬಾಕಿ ಉಳಿದಿವೆ. ಅದರಲ್ಲಿ ನದಿ ಮೂಲ ಸ್ವಚ್ಚಗೊಳಿಸುವುದು ಅದರಲ್ಲಿ ಗಂಗಾ ನದಿಯನ್ನು ಸ್ವಚ್ಚಗೊಳಿಸುವುದು ತುಂಬಾ ಗಂಭೀರವಾದ ವಿಚಾರ. ನದಿಯನ್ನು ಮಲಿನ ಮಾಡುವ ಮತ್ತು ಎಲ್ಲೆಂದರಲ್ಲಿ ಕಸ ಹಾಕುವವರಿಗೆ ತಡೆಯೊಡ್ದಲಾದಿತೇ? ಎನ್ನುವ ಪ್ರಶ್ನೆ ಮನಸಿನ ಆಳದಲ್ಲಿ ಮೂಡುತ್ತದೆ. ಯಾಕೆಂದರೆ ಇದಕ್ಕೆ ನಮ್ಮ ದೇಶದ ಇತಿಹಾಸ ಪುಟಗಳನ್ನು ತಿರುವಿ ಹಾಕುವಾಗ ಸಾಕಷ್ಟು ಘಟನೆಗಳು ಉದಾಹರಣೆಯಾಗಿ ಸಿಗುತ್ತವೆ. ಇದನ್ನೆಲ್ಲ ಗಮನಿಸಿದಾಗ ಮುಂದೆ ಏನಾಗಬಹುದು ಎನ್ನುವ ತಿಮರ್ಾನಕ್ಕೆ ಕೆಲವರಂತೂ ಬಂದಿರಬಹುದು. ಇದನ್ನು ಪುಷ್ಠಿಕರಿಸಲು ಪ್ರಮುಖವಾದ ಘಟನೆಗಳು ಕಣ್ಣ ಮುಂದೆ ಗರಿಬಿಚ್ಚಿ ಕುಣಿಯುತ್ತದೆ. ಆ ಘಟನೆಗಳು ಮುಂದೆ ಏನಾದೀತು ಎನ್ನುವ ಬಗ್ಗೆ ಭವಿಷ್ಯವನ್ನು ನುಡಿಯಬಹುದು, ಹಾಗೆಂದ ಮಾತ್ರಕ್ಕೆ 'ಸ್ವಚ್ಚ ಭಾರತ ಅಭಿಯಾನ' ಯಶಸ್ವಿಯಾಗಲಿಕ್ಕಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕಾಗಿಯೇ ಒಂದಷ್ಟು ಕಾಲಾವಧಿ ಹೆಚ್ಚು ತೆಗೆದುಕೊಳ್ಳಬಹುದು ಅಷ್ಟೆ. ಯಾಕೆಂದರೆ ನಮ್ಮ ದೇಶ ಮುಂದುವರಿಯುತ್ತಿರುವ ರಾಷ್ಟ್ರ. ಆದ್ದರಿಂದ ಇದು ಜನರ ಪಾಲುಗೊಳ್ಳುವಿಕೆಯನ್ನು ಒಳಗೊಂಡಿದೆ. ಇದರಲ್ಲಿ ಶೇಕಡ 20ರಷ್ಟು ಜನ ನಿಧಾನವಾಗಿ ಸೇರಿಕೊಳ್ಳುವವರು. ಇನ್ನು ಉಳಿದ ಜನರು ಭಾಗವಹಿಸದೇ ಇರಬಹುದು. ಇಷ್ಟೆಂದ ಮಾತ್ರಕ್ಕೆ ಸಾಧ್ಯವಿಲ್ಲ ಎಂದು ಅರ್ಥ ಅಲ್ಲ. ಅದಕ್ಕೆ ತಾಳ್ಮೆ, ಸಹನೆ, ಅಗತ್ಯ. ಈ ಎರಡು ಅಂಶಗಳು ಯುವ ಜನಾಂಗದಲ್ಲಿ ಇಲ್ಲ. ಆದ್ದರಿಂದ ಒಮ್ಮೆ ಭಾಗವಹಿಸಿದ ವ್ಯಕ್ತಿ ಮತ್ತೊಮ್ಮೆ ಭಾಗವಹಿಸೀಯಾನು ಎಂಬ ನಂಬಿಕೆ ಇಲ್ಲ. ಯಾಕೆಂದರೆ ಮಾನವನಿಗೆ ಇರುವ ಸ್ವಾರ್ಥ ಪ್ರಜ್ಞೆ ಎಲ್ಲವನ್ನು ನುಂಗಿ ನೀರು ಕುಡಿಯುತ್ತದೆ. ಇಂದಿನ ಯುವ ಜನಾಂಗ ಲಾಭದ ದೃಷ್ಟಿಯಿಂದ ನೋಡಿದರೆ, ಅದು ಯೋಜನೆ ಯಾವುದೇ ಇರಲಿ' ನೀರ ಮೇಲೆ ಮಾಡಿದ ಹೋಮವಾದೀತು' ಎಂದರೆ ತಪ್ಪಲ್ಲ. ಯಾಕೆಂದರೆ ಯುವ ಜನಾಂಗಕ್ಕೆ ಅಂಟಿರುವ ಮಹಾನ್ ವ್ಯಾಧಿ ಎಂದರೆ 'ಸ್ವಾರ್ಥ'. ಅದು ದೇಶವನ್ನು ಕೂಡ ಅಧೋಗತಿಗೆ ತಳ್ಳುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗೆನೆ ಇದರಿಂದ ಜನರನ್ನು ಬಂಧ ಮುಕ್ತಗೊಳಿಸಿದರೆ ಸ್ವಾರ್ಥ ಹೋಗಿ ದೇಶಾಭಿಮಾನ ಮೂಡಿತು. ಮಾತ್ರವಲ್ಲ ಆ ಶಕ್ತಿ ಇರುವುದು ಮೋದಿಯವರ ಭಾಷಣದಲ್ಲಿ ಎಂಬುದಂತು ಸತ್ಯ. 'ಭಾರತ ಸ್ವಚ್ಚವಾಗಲಿ' ನಾವೆಲ್ಲರೂ ಕೈ ಜೋಡಿಸೋಣ ಎಂದು ಇಷ್ಟು ಹೇಳಿದ ಮಾತ್ರಕ್ಕೆ ಯುವ ಜನಾಂಗಕ್ಕೆ ಅರ್ಥವಾಗಬೇಕಲ್ಲ? ಇವರುಗಳು ಅದರ ಬಗ್ಗೆ ಯೋಚಿಸಬೇಕಲ್ಲ. ಆದರೆ ಗಾಂಧೀಜಿ ಯವರ ಕನಸನ್ನು ನನಸು ಮಾಡಿಯಾರು ಎನ್ನುವ ಅಶಾಭಾವನೆಯಿಂದ ವಿರಾಮ ನೀಡುತ್ತಿದ್ದೇನೆ.
ಲೋಕೇಶ್ ಕುಂಚಡ್ಕ
ಪ್ರಥಮ ಎಂ.ಎ. ಕನ್ನಡ
ಏಕಾಂಗಿಯಾಗುತ್ತಿರುವ ಬಾಲ್ಯ ಜೀವನ
'ಕೂಡಿ ಬಾಳಿದರೆ ಸ್ವರ್ಗ ಸುಖ' ಎಂಬ ಸುಂದರವಾದ, ಅರ್ಥವತ್ತಾದ ಗಾದೆ ಮಾತೊಂದಿದೆ. ಈ ಗಾದೆಯನ್ನು ಇಲ್ಲಿ ಉಲ್ಲೇಖಿಸಲು ಕಾರಣವೇನೆಂದರೆ, ಒಂದು ಕಾಲವಿತ್ತು ಅದೇನು ಭಾರಿ ಹಿಂದಿನ ಕಾಲವಲ್ಲ ಕೆಲವೇ ದಶಕಗಳ ಹಿಂದೆ. ಆ ಕಾಲದಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಅವಿಭಕ್ತ ಕುಟುಂಬ ಪದ್ದತಿ ವ್ಯವಸ್ತೆಯಲ್ಲಿತ್ತು. ಈ ಕುಟುಂಬ ವ್ಯವಸ್ಥೆಯಲ್ಲಿಹಿರಿಯರಿಂದ ಕಿರಿಯರವರೆಗೆ ಒಟ್ಟಾಗಿ ಜೀವನ ನಡೆಸುತ್ತಿದ್ದರು. ಅ ಕುಟುಂಬ ಬಹಳ ಚೆನ್ನಾಗಿರುತ್ತಿತ್ತು. ಅಲ್ಲಿ ಹಿರಿಯ ಮುಖಂಡನ ಮಾತಿಗೆ ಬೆಲೆಯಿತ್ತು. ಆಚಾರ-ವಿಚಾರ, ರೂಢಿ-ಸಂಪ್ರದಾಯ, ಸಂಸ್ಕೃತಿ ಹಾಗೂ ಜೀವನದ ಮೌಲ್ಯಗಳನ್ನು ರೂಢಿಸಿಕೊಂಡು ಕುಟುಂಬದ ಎಲ್ಲರೂ ಜೊತೆಯಾಗಿ ಸುಖ-ಸಂತೋಷಗಳಿಂದ ಬದುಕಿ ಬಾಳುತ್ತಿದ್ದರು.
ಆಗಿನ ಕಾಲದ ಮಕ್ಕಳು ಆಟವಾಡುತ್ತಾ, ಕೂಟಕೂಡುತ್ತಾ, ಬೀಳುತ್ತಾ-ಏಳುತ್ತಾ ಯಾವುದೇ ನೋವಾದರೂ ಲೆಕ್ಕಿಸದೆ, ಶಾಲೆಯಲ್ಲಿ ಶಿಕ್ಷರಿಂದ ಬೈಗುಳ, ಪೆಟ್ಟು ತಿನ್ನುತ್ತಾ ದೃಢಕಾಯರಾಗಿ, ದೃಢಮನಸ್ಸಿನವರಾಗಿ ಚಿಕ್ಕಂದಿನಿಂದಲೇ ಬೆಳೆಯುತ್ತಿದ್ದರು. ಏಕಾಂಗಿತನ ಅವರ ಬಾಳಲ್ಲಿ ಎಂದೂ ಬಂದಿಲ್ಲ. ಮನುಷ್ಯ ಭಾವನಾ ಜೀವಿ. ಅವನಿಗೆ ಒಬ್ಬಂಟಿಗನಾಗಿ ಬಾಳಲು ಬಹಳ ಕಷ್ಟ ಎಂಬುದು ಸತ್ಯ.
ಈ ಲೆಖನದ ಶೀಷರ್ಿಕೆ "ಏಕಾಂಗಿಯಾಗುತ್ತಿರುವ ಬಾಲ್ಯ ಜೀವನ" ಅಂದರೆ ಇಂದು ಆಧುನಿಕ ಲೋಕದಲ್ಲಿ ಮಕ್ಕಳು ಏಕಾಂಗಿಯಾಗುತ್ತಿರುವುದನ್ನು ನಾವು ಕಾಣಬಹುದು. ಮಾಧ್ಯಮ ಲೋಕ ಮತ್ತು ಸಾಮಾಜಿಕ ಜಾಲತಾಣಗಳ ಮಾಯೆಗೆ ಸಿಲುಕಿರುವುದರಿಂದ ಸ್ನೇಹಿತರೊಟ್ಟಿಗೆ ಹಾಗೂ ಸಮಾಜದ ಜನರೊಟ್ಟಿಗೆ ಬೆರೆಯಲು, ವಿಚಾರಗಳನ್ನು, ಭಾವನೆಗಳನ್ನು ಹಂಚಿಕೊಳ್ಳಲು ಸಮಯವಿಲ್ಲ. ಒಬ್ಬಳು ತಾಯಿ ಮಗುವಿಗೆ ಜನ್ಮ ಕೊಟ್ಟು ಕೆಲವೆ ದಿನಗಳಲ್ಲಿ "ಪ್ಲೇ ಹೋಂ" ಗಳಲ್ಲಿ ಬಿಟ್ಟುತಾಯಿ-ತಂದೆಗಳಿಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಅವರ ಮುಖವನ್ನೂ ಮಗು ನೊಡುವುದು ಅಪೂರ್ವವಾಗಿದೆ. ತಾಯಿಯ ಎದೆಹಾಲು ಮಕ್ಕಳಿಗೆ ಅಮೃತ ಸಮಾನ. ಆದರೆ ಈಗಿನ ಒತ್ತಡದ ಜೀವನದಲ್ಲಿ ಅದೂ ದೊರಕದಾಗಿದೆ. ಇದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 3 ವರ್ಷ ಆದ ಕೂಡಲೆ ಮಕ್ಕಳನ್ನು ಶಿಕ್ಷಣ ಪಡೆಯಲು ಕಳುಹಿಸುತ್ತಾರೆ. ಆ ಒತ್ತಡ ಮಕ್ಕಳ ಮೇಲೆ ಗಾಢ ಪರಿಣಾಮ ಬಿರುತ್ತದೆ. ಶಾಲೆಯಿಂದ ಮನೆಗೆ ಬಂದರೆ ಒಬ್ಬಂಟಿತನ ಕಾಡುತ್ತದೆ.
ಸಮ್ಮೋಹಿನಿ ತಜ್ಞರ ಪ್ರಕಾರ ಒಬ್ಬ ವ್ಯಕ್ತಿ ಒಬ್ಬಂಟಿಯಾಗಿ ಶೂನ್ಯ ವ್ಯವಸ್ತೆಯಲ್ಲಿದ್ದಾಗ ಅಥವಾ ಮೈಮರೆತು ಯೋಚನೆಯಲ್ಲಿ ಇರುವಾಗ ಅನೇಕ ತರಹದ ಮಾನಸಿಕ ಕಾಯಿಲೆಗಳು ಆವರಿಸಿಕೊಳ್ಳುತ್ತವಂತೆ ಹಾಗೆಯೇ ಒಬ್ಬಂಟಿಯಾಗಿದ್ದಾಗ ದುರ್ಬಲ, ಋಣಾತ್ಮಕ ಚಿಂತನೆಗಳು ಆಳವಾಗಿ ಆವರಿಸಿ ಮನೋಸ್ತೆರ್ಯವನ್ನು ಕುಗ್ಗಿಸಬಹುದು, ಮಾನಸಿಕ ದೌರ್ಬಲ್ಯತೆ ಉಂಟಾಗಬಹುದು. ಏಕಾಂಗಿತನ ಬದುಕನ್ನು ಕುಂಟಿತಗೊಳಿಸಬಹುದು, ಮಾತಿನ ಕೌಶಲ್ಯತೆಗೆ ತೊಂದರೆಯಾಗಬಹುದು. ಎಲ್ಲರೊಟ್ಟಿಗೆ ಕೂಡಿ ಬಾಳುವುದರಲ್ಲಿ ಇರುವ ಸುಖ ಏಕಾಂಗಿತನದ ಬದುಕಿನಲ್ಲಿಲ್ಲ. ಈಗಿನ ಬಹುತೇಕ ಮಕ್ಕಳ ಜೀವನದಲ್ಲಿ ಏಕಾಂಗಿತನಕ್ಕೆ ಒಗ್ಗಿ ಮನೋಸ್ತೆರ್ಯ ಕುಗ್ಗಿ, ಆತ್ಮ ವಿಶ್ವಾಸದ ಕೊರತೆಯುಂಟಾಗಿ ಆತ್ಮಹತ್ಯೆ, ಮಾನಸಿಕ ಖಿನ್ನತೆ, ಜಿಗುಪ್ಸೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ಎಲ್ಲರೊಟ್ಟಿಗೆ ಬೆರೆತು ಕುಣಿದು ಕುಪ್ಪಳಿಸಿ, ಆಡಿಬೆಳೆದು ಸಧೃಡರಾಗಿ ಬೆಳೆಯಲು ಅವಕಾಶ ಕಲ್ಪಿಸೋಣ
ಬೆಳ್ಳಿಯಪ್ಪ
ಪ್ರಥಮ ಎಂ.ಎ ಕನ್ನಡ ವಿಭಾಗ
ಲೈಫು ಇಷ್ಟೇನೆ!!
ಜೀವನ ಅಂದ್ರೇನೆ ಎಷ್ಟು ವಿಚಿತ್ರ ಅಲ್ವಾ!! ಜೀವನ; ಜೀವನ ಏನಿದು ಜೀವನ?? ಬರೀ ದುಃಖ!! ಬರೀ ಸುಖ!! ಸುಖ ದುಃಖಗಳ ಸಮ್ಮಿಲನ. ಬಹುಷಃ ಮೂರನೇ ವ್ಯಾಖ್ಯಾನ ಸರಿ ಅನಿಸುತ್ತೆ. ಮುಸ್ಸಂಜೆಯ ಈ ಹೊತ್ತಲ್ಲಿ ಜೀವನದ ಬಗ್ಗೆ ಬರಿತಿರೋ ನಾನು ಜೀವನದ ಬಗ್ಗೆ ತಿಳ್ಕೊಂಡಿರೋದಾದ್ರುನು ಎಷ್ಟು? ಬರೀ ಜೀವನದ ಯಾವುದೋ ಒಂದು ಮಜಲನ್ನು ಇದೇ ಜೀವನ ಅಂತ ತಿಳ್ಕೊಂಡಿರೋರು ಎಷ್ಟು ಜನನೋ! ಹಾಗೆ ಜೀವನದ ಬಾಗಿಲು ಮುಚ್ಚಿ ಹೋಗಿದೆ ಅಂತ ಸಾವಿನ ಮನೆಯ ಕದ ತಟ್ಟೋರು ಅದೆಷ್ಟು ಮಂದಿನೋ? ಏನೇ ಇರ್ಲಿ ಏಳು ಬೀಳಿನ ಹಾದಿಯಲ್ಲಿ ಏಳಿಗೆಯನ್ನೇ ಬಯಸೋ ಜನ ನಾವು; ಹಾಗೇ ಜನರೇಶನ್ ನಮ್ದು ಅಪ್ಪ ಅಮ್ಮನೇ ಕಿರಿ ಕಿರಿ ಅನ್ನೋ ಈ ಕಾಲದ ಮಕ್ಕಳಿಗೆ ಜೀವನ ಅಂದ್ರೆ ಏನು ಅಂತ ತಿಳಿಹೇಳುವಷ್ಟು ಟೈಮ್ ಇಲ್ದಿರೋ ಪೇರೆಂಟ್ಸ್! ಈ ನಾಲ್ಕು ದಿನಗಳ ನಮ್ಮ ಜೀವನದ ಆಟದಲ್ಲಿ ಎಷ್ಟೋ ಮಂದಿ ಬತರ್ಾರೆ; ಹೋಗ್ತಾರೆ; ಟಿ.ವಿ ಸೀರಿಯಲ್ ತರಾ! ಅಲ್ವಾ? ಇವೆಲ್ಲವುಗಳ ನಡುವೆ ಕಳೆದು ಹೋಗೋ ಈ ನಾಲ್ಕು ದಿನಗಳ ಲೈಫು......... ಲೈಫು ಇಷ್ಟೇನೆ!!!

ಸ್ವಾತಿ
ದ್ವಿತೀಯ ಎಂ.ಎ ಅರ್ಥಶಾಸ್ತ್ರ ವಿಭಾಗ
Subscribe to:
Posts (Atom)
ಬಿತ್ತಿ ವಿಶೇಷಾಂಕ 2017
-
2014-15ನೇಯ ಸಾಲಿನ "ಬಿತ್ತಿ" ಸಾಪ್ತಾಹಿಕ ಪತ್ರಿಕೆಯ ಸಂಪಾದಕ ಮಂಡಳಿ ಗೌರವ ಸಂಪಾದಕರು - ಪ್ರೊ.ಸಬಿಹಾ ಭೂಮಿಗೌಡ ಅಧ್ಯಕ್ಷರು ಎಸ್.ವಿ .ಪಿ.ಕ...
-
“ಬಿತ್ತಿ” ಎಂಬ ಹೆಸರಿನ ಸಾಪ್ತಾಹಿಕ ಸಾಹಿತ್ಯಿಕ ಪತ್ರಿಕೆಯು 1-1-1991ರಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಮೂಲಕ ಆರಂಭವಾಗಿದ್ದು...