Showing posts with label ಕವನ. Show all posts
Showing posts with label ಕವನ. Show all posts

1/21/15

ವಂಚನೆ
ಹನಿ ಹನಿಯಾಗಿ ಸುರಿದೆ, ಜೇನ ಮಳೆಯಂತೆ
ಕನಸು ಕಂಗಳಿಗೆ ನಿನ್ನೊಲುಮೆಯ ಧಾರೆಯ
ಹರೆಯದ ಮುಗ್ಧ ಮನಸಿಗೇನು ಗೊತ್ತು
ನೀನೊಂದು ಹಜ್ಜೇನೆಂದು
ಅಲೆ ಅಲೆಯಾಗಿ ತೇಲಿ ಬಂದೆ 
ನನ್ನೊಳಗೆ ತಂಗಾಳಿಯಂತೆ 
ಬಾಳೆಂಬ ಬೆಳದಿಂಗಳಲಿ
ಬೆಳಕ ಚೆಲ್ಲಿ ಮರೆಯಾದೆ
ಕೋಲ್ಮಿಂಚಿನಂತೆ
ಮುತ್ತಿನ ಸುರಿಮಳೆ
ನಿನ್ನೊಲುಮೆಯಾ... ಸವಿಕನಸಿಗೆ
ಅರಳಿದೆ ಆಸೆಯ ಹೊಂಗನಸು
ತಡಕಾಡುತಿದೆ ಕೈ ಜಾರಿದ... ಪ್ರೀತಿಗಾಗಿ 
ಜಯಶ್ರೀ ದಿನೇಶ್
ಆರೋಗ್ಯ ಕೇಂದ್ರ ಮಂಗಳೂರು ವಿ.ವಿ

ನಿರುತ್ತರೆ
ಬೆಳೆದಳಿವಳು....ಮಮತೆಯಿರದ ತವರಲ್ಲಿ...
ಕರುಣೆಯಿರದ ಒಡಲಲ್ಲಿ...ಸ್ನೇಹವಿರದ ಸಂಗಡದಲಿ...
ಆಂತರಿಕ ವೇದನೆಯ ನಗುಮೊಗದಿ ಬಚ್ಚಿಟ್ಟು...
ಸಹನಮೂತರ್ಿಯ ರೀತಿ ಮ್ಯೆತಳೆದು ನಿಂತವಳು..
ಬಾಲ್ಯದಲೇ ಬಯಕೆಗಳ ಬದಿಗೊತ್ತಿ ಈಕೆ..
ನೀರವ ವೇದನೆಯ ನಸುನಗುತ ಮರೆತು..
ಜರೆಮಾತುಗಳನು ಸಹಿಸುತಲೇ ಇದ್ದು....
ಮೂಕಯಾತನೆಯ ಅನುಭವಿಸಿದವಳಿವಳು...
ಧಾರೆಯೆರೆದರು ಈಕೆ ಭಾರವೆಂಬಂತೆ..
ಕೋರಳಾಣಿಸಿ ನಿಂತಳು ಮಂಗಳ ಸೂತ್ರಕೆ 
ಅಶ್ರು ಉರುಳಿತು ನೇತ್ರದಿ ತವರಿನ ಅಗಲುವಿಕೆಗೆ 
ಪರಿಕಲ್ಪನೆ ಇತ್ತೇ ತವರಿನಾ ಮನೆಯವರಿಗೆ?!

ಪತಿಸೇವೆಗೆಂದೇ ಅಣಿಯಾದವಳಿವಳು
ಸಿಗಬಹುದೇನೋ ಪ್ರೀತಿಯೆಳೆಯೊಂದು 
ಎಂಬಾಸೆ ಮನದೊಳಗೆ ಚಿಗುರೊಡೆದು ಬೆಳೆದಿರಲು 
ವಂಚಿಸಿತು ವಿಧಿ ಸರ್ವವಿಧದಿಂದಲೂ 
ನಿಸ್ವಾರ್ಥ ಪ್ರೀತಿಯ ಬಯಸಿ ಬಂದಾಕೆಯನು 
ನೀರಸ ನಿರಾಶೆಯು ಮೆಲ್ಲನೆ ಸ್ವಾಗತಿಸಿತು...
ಮುರುಟಿಹೋದ ನಿರೀಕ್ಷೆಯು ಘಾಸಿಗೊಳಿಸಿತು ಮನವನು 
ತಡೆದು ನಿಂತಳು ಈಕೆ ತನ್ನೆಲ್ಲಾ ದುಖವನು...
ಯಾಂತ್ರಿಕತೆಯಾಯಿತು  ಜೀವನ ಕಾಲಸವೆಯುತ್ತಿದ್ದಂತೆ 
ಇಂದಿಗೊ ಕಣ್ಣೀರಿನ ಹೊಳೆ ಆ ಸುಪ್ತ ಮನದೊಳಗೆ
ಅರಿತವರಿರುವರೆ ಈಕೆಯ ಸಹನೆಯನು 
ಸಾದ್ಯವಾಗದು ಎಂದಿಗೂ ಈಕೆಯನು ಅಳೆಯಲು
ಅಂಬರಮಣಿ ಈಕೆ ಎಲ್ಲಾ ರೀತಿಯಲಿ 
ಸ್ಪಂದಿಸುವ ಹ್ರದಯವಿರದ 'ಏಕಾಂಗಿ'ಮೌನಿಯು
ವೈದೇಹಿಯಂತೆ ಮಹಾವನಿತೆಯಲ್ಲದಿದ್ದರೂ 
ಅಂಶುವಿನಂತೆ ಮನೆಬೆಳಗಿದಳು 
ಎಂದೂ ಮನಬಿಚ್ಚಿ ಸಂಕಟವ ತೋರದವಳಿವಳು 
ನುಚ್ಚು ನೂರಾದ ಕನಸ ಒಂದುಗೂಡಿಸಲು ಯತ್ನಿಸುವಳು 
ಆತ್ಮಸಂಯಮದ ಪ್ರತಿರೂಪ ಎಂಬಂತೆ 
ನಿರುತ್ತರೆ ಈಕೆ...... ಇಂದಿಗೂ..... ಇನ್ನೆಂದಿಗೂ ......
ಶ್ರೀಲತಾ ಎಂ.ಕೆ
ಪ್ರಥಮ ಎಂ. ಎ ಇಂಗ್ಲಿಷ್ ವಿಭಾಗ

ನಮ್ಮೆದೆಯ ಕವಿತೆಗಳು
ಚಾತಕರಾಗುತ್ತಿದ್ದೀರಾ ನೀವು?
ಈ ಬೆಳಕು ಸೋರಿ ಹೋಗುತ್ತಿರುವ ದಿಗಂತದಂಚಲ್ಲಿ 
ಈ ಅಂಚಲ್ಲಿ ಕುಳಿತು-
ಆ ಕಡೆಯಿಂದಲೋ ಹುಟ್ಟಿಬಂದಾನೆನ್ನುವ ಚಂದ್ರನ 
ಕಾಯುತ್ತಿದ್ದೀರಾ ನೀವು?
ಈ ಕೆಂಪು ಹನಿಗಳ ಕುಡಿದು 
ನಾಳಿನ ಹೃತ್ಕುಕ್ಷಿಗಳಿಗೆ ನೆತ್ತರು ಚುಂಬಿಸುತ್ತ
ಬದುಕ ಮಿಡಿಸುತ್ತಿದ್ದೀರೇನು?
ನಾವೆಲ್ಲಾ ಕೇಳಲಾಗದ ಪುಟ್ಟಸ್ವರಗಳೊಡೆಯರೆ
ನೀವು ಕೂಡ ನಮ್ಮ ಹಾಗೆ 
ಈ ಕಪ್ಪು ರೆಂಬೆಗಳ ತುಂಬ ಚೈತ್ರ ತುಂಬಲಾರದವರು
ದಿನದಂತೆ ಕಂತುವ ಈ ದಿನಗಳ 
ಲಗಾಮು ಹಿಡಿದು ನಿಲ್ಲಿಸಲಾಗದವರು.
ಬದಲಾಗದಂತೆ ಕಾಣುವ ಆದರೂ 
ದಿನಾ ಬದಲಾಗುವ ಸ್ಥಿತಿಯ ಯಾಂತ್ರಿಕತೆಯಲ್ಲಿ 
ಹಳತರಿಂದ ಕಳಚಲಾಗದೆ
ಹೊಸತನವ ತಡೆಯಲಾಗದೆ
ಹೀಗೆ ಕಾಲದ ಗೋಡೆಯ ಮೇಲೆ
ಕಪ್ಪಾಗಿ ನಿಲ್ಲುವ ಚಿತ್ರಗಳು ನೀವು-
ನಮ್ಮೆಲ್ಲರ ಎದೆಯ ಕಪ್ಪು ಕವಿತೆಗಳು.
ಪದ್ಮಿನಿ
ಸಿಬ್ಬಂದಿವರ್ಗ ಮಂಗಳೂರು ವಿ.ವಿ
ಮಾತೆ
ಓ ಮಾತೆ.......
ಇದೇಕೆ ನೀ ಹೀಗಾದೆ.....
ಇದ್ದೆನು ನಾನಂದು ಜೋತಾಡುವ ಕಬ್ಬಿಣದ ತೊಟ್ಟಿಲಲ್ಲಿ
ಕಿಲ ಕಿಲ ನಗುವ ನನ್ನ ನಗುವ ಮೋರೆಯನ್ನು ಕಂಡು 
ಬಳಿ ಬಂದುನಿಂತೆದ್ದರು ಅದೆಷ್ಟೋ ಮಂದಿ
ಕೆನ್ನೆ ಕೈಗಳ ತಟ್ಟಿ ಬಾರದ ನಗು ಬರಿಸಿ
ದೂರ ಸರಿದಿದ್ದರು ಅದೆಷ್ಟೋ ಮಂದಿ
ನನ್ನ ಮನಸ್ಸಿನ ಭಾವನೆಗಳನ್ನು ಅರಿಯದ ಜನ
ನನಗೆ ನಗುವನ್ನು ಬರಿಸಿ ಹೇಗೆ ದೂರ ಸರಿದರು.
ಸ್ವಚ್ಛಂದ ಮನದಿ ಹರುಷವ ಉಕ್ಕಿಸುವ
ನನ್ನ ಸನಿಹದಿ ಕುಳಿತಿದ್ದಳು ಆ ಮಾತೆ.
ಕೇಳಿದ್ದಳು, ಸಹಿಸಿದ್ದಳು ಎಷ್ಟೋ ಹೀನ ನುಡಿಗಳನ್ನು
ಅಂತಿದ್ದ ತಾಯಿ ಇದೇಕೆ ಹೀಗಾದಳು.
ಹೋದಲ್ಲಿ ಬಂದಲ್ಲಿ ತಪ್ಪು ಹುಡುಕುತ್ತಾ 
ಯಾರು ಮಾಡದ ಅಪರಾಧ ಮಾಡಿದೆ ಎಂಬಂತೆ....
ತಲೆಯೆತ್ತಿ ನಡೆದರೆ ತಲೆಬಾಗಿ ನಡೆವಂತೆ
ಪಿಸು ಮಾತನಾಡಿದರೆ ಮೌನಿಯಾಗಿರುವಂತೆ
ಯಾವ ಗೆಳತಿಯನ್ನು ಸೇರಲು ಬಿಡದೆ 
ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಬಿಡದೆ 
ಇದೆಲ್ಲವೂ ಏಕೆ? ನಾನು ಹೆಣ್ಣೆಂಬ ಕಾರಣಕ್ಕೋ?
ಮತಿಹೀನ ಜನರ ನಿಂದೆಯ ನುಡಿಗೋ?
ಪ್ರಕೃತಿಯ ವರವೋ? ಕಾಲವೋ?
ಹೆಣ್ಣಿನ ಬಾಳಿನ ಶಾಪವೋ!.
ಪ್ರವೀಣಾ ಪ್ರಜಾರಿ
ಪ್ರಥಮ ಎಂ ಎ ಕನ್ನಡ ವಿಭಾಗ
ಮುಂಜಾನೆಯಿಂದ ಮುಸ್ಸಂಜೆ
ಮುಂಜಾನೆ ಬೆಳಕು ಮೂಡಿದಾಗ
ತಂಗಾಳಿ ತಣ್ಣನೆ ಬೀಸಿದಾಗ
ಮೇಘವು ಮೆಲ್ಲನೆ ಮಳೆಯಾದಾಗ
ಚಿಗುರೆಲೆಯಲ್ಲಿ ಇಬ್ಬನಿ ನಗುವಾಗ
ಹಕ್ಕಿಗಳ ಚಿಲಿಪಿಲಿಯ ಸ್ವರ ಕೇಳಿದಾಗ
ಏಕಾಂಗಿಯಾಗಿ ನಾ ನಿಂತಿರುವಾಗ 
ನಿನ್ನ ಪ್ರೀತಿಯ ನೆನಪಾದಾಗ 
ನಿನ್ನ ನೋಡಲು ನನ್ನ ಹೃದಯ ಹಂಬಲಿಸಿದಾಗ
ಅದೇಕೋ ಕಾಣೆ ಕಣ್ಣೀರು ತುಂಬಿತು...
ಮನಸಿನ ನೋವಿನ ಮುಗಿಲು
ಕರಗಿ ಕಣ್ಣೀರಾಯಿತು...
ಮುಖದಲ್ಲೊಂದು ಹೂ ನಗು ಮೂಡಿತು...
ನನ್ನ ಕಣ್ಣಿನಿಂದ ನಿನ್ನ ರೂಪ ಮರೆಯಾದಾಗ 
ಮನದ ಮುಗಿಲು 
ಮತ್ತೊಮ್ಮೆ ಕವಿಯಿತು...
ಆ ಮುಂಜಾನೆಯು ನೋವಿನಲ್ಲಿಯೇ 
ಮುಸ್ಸಂಜೆಯತ್ತ ಸರಿಯಿತು.
ದೀಪಿಕಾ. ಎನ್. ಸಿ
ದ್ವಿತೀಯ ಎಂ ಎ ವಾಣ್ಯಿಜ್ಯ ವಿಭಾಗ

ಜವ್ವನಿಗೆದ ಗೊಬ್ಬು
ಮೂಡಯಿಡ್ ಪುಟ್ಯೆ ಆಯೆ 
ದೇವೆರೆಗ್ ಸೊಲ್ಮೆಲು ಸಂದಾವೊಂದು
ಆಯೆನ ಜವ್ವನಿಗೆದ ಗೊಬ್ಬುನು ಪತ್ತೊಂದು
ಪೂಲೆನ್ ಮೋಕೆಡ್ ಅರಲ್ಪಾಯೆ
ಚಿಲಿಪಿಲಿ ಪುಟ್ಟಯರೆ ಪಕ್ಕಿಲೆನ್ ಲಕ್ಕಯೆ
ಆಯೆನ ಪೊಲರ್ುಗು ಭೂಮಿಲಾ ನಾಚೊಂಡು
ಆಯೆನ ನೊಟ್ಟಿಗೆ ಬತ್ತಿನ ತಂಪು ಗಾಳಿಲು 
ಆ ತಂಪುಗ್ ಮರ ತರೆಯಾಡಂಡ್
ಐನ್ ತೂವೊಂದು ಎನ್ನಲ್ಲ ತರೆಯಾಡ್ಂಡ್
ಪಡ್ಡಯಿಡ್ ಕಂತಿನಾಯೆ
ಆಯೆ ಪೊಯೆಂದ್ ಗೂಡು ಸೆರೊಂಡ ಮಾತಲ
ಆಯೆ ಪಿರ ಬಪರ್ಿನ ಸಾದಿನ್ ತೂವೊಂದು ಉಲ್ಲೆ!
      ಅಂಕಿತಾ ನಾಯ್ಕ್
ದ್ವಿತೀಯ ಎಂ ಎ ಕನ್ನಡ ವಿಭಾಗ

ಗೆಳತಿ
ನನಗಿಂತ ಒಳ್ಳೆಯ ಸ್ನೇಹಿತೆ
ನಿನಗೆ ಸಿಕ್ಕಿದರೆ
ಧೈರ್ಯವಾಗಿ ಸಾಗುಮುಂದೆ
ತಡೆಯಲಾರೆ ನಿನ್ನನ್ನು
ದ್ವೇಷಿಸಲಾರೆ ಎಂದಿಗೂ
ಆದರೆ
ಒಂದು ಮಾತ್ರ ನೆನಪಿರಲಿ
ಅವಳು ನಿನ್ನನ್ನು ಅಥರ್ೈಸಿಕೊಳ್ಳುವಲ್ಲಿ ಸೋತರೆ
ನಿನ್ನ ಸ್ನೇಹವನ್ನು ತಿರಸ್ಕರಿಸಿದರೆ
ನನ್ನ ಪ್ರೀತಿಯ ಗೆಳತಿ ದುಃಖಿಸದಿರು
ನಿನ್ನ ಕಣ್ಣುಗಳನ್ನು ಕಂಬನಿ ಒದ್ದೆ ಮಾಡದಿರಲಿ
ಒಂದು ನಿಮಿಷ ಹಿಂತಿರುಗಿ ನೋಡು
ಅಂದು ಕಾಣುವೆ ನಿನಗೆ ನಾನು
ಮುಗುಳುನಗೆಯೊಂದಿಗೆ ಅಲ್ಲಿ....
ದೂರದಲ್ಲಿ ಕಂಡ ಬೆಳಕನ್ನು
ಅರಸಿ ನೀನು ಹೋದಾಗ
ಇಲ್ಲಿ ಈ ಇರುಳಲ್ಲಿ
ನಾನು ಒಂಟಿಯಾಗಿ ಹೋದೆ
ಆದರೂ ದುಃಖವಿಲ್ಲ ನನಗೆ
ಆ ಬೆಳಕು ನಿನಗೆ ಸಿಗುವುದಾದರೆ.....
ಚೇತನಾ ಎಚ್ ಆರ್
ಪ್ರಥಮ ಎಂ ಎ ಕನ್ನಡ ವಿಭಾಗ
ಗೆಳೆಯನಿಗೆ
ಕೆಟ್ಟವಳು ನಾನಲ್ಲ ಗೆಳೆಯಾ....
ಅದಾವ ದೃಷ್ಠಿಯಲ್ಲಿ ನನ್ನ ಕೆಟ್ಟವಳೆಂದು ಬಗೆದೆ ನೀ?
ಮಾತಾಡಿಲ್ಲವೆ? ನಾ ಮುನಿದೆನೆ?
ಕೆಟ್ಟತನದ ಅರ್ಥ ಅರಿಯದವಳಲ್ಲ ನಾನು
ಆದರೆ ನನ್ನ ಕೆಟ್ಟತನಕ್ಕೆ ನಿನ್ನ ನಾ ಯಾವತ್ತೂ ಒಳಪಡಿಸಿಲ್ಲ
ನಿನ್ನ ಕನಸುಗಳೆಲ್ಲಾ ನನಸಾಗಲಿ ಎಂದು ದೇವರಲ್ಲಿ ಪ್ರಾಥರ್ಿಸಿದೆ
ನಿನ್ನ ನಾನು, ನನಗರಿಯದೆ ನೋಯಿಸಿರಬಹುದು
ಆದರೆ ಗೆಳೆಯಾ.....
ಅಲ್ಲಿ ನನ್ನದು ಯಾವುದೇ ಸ್ವಾರ್ಥ, ವಂಚನೆ, ಕೆಟ್ಟತನ ಇರಲಿಲ್ಲಾ
ಗೆಳೆಯ ಒಂದು ಕಾಲದಲ್ಲಿ...
ನನ್ನ ನೋವು ದುಃಖ ದುಮ್ಮಾನಗಳಿಗೆ ನೀ ಕಿವಿಯಾಗಿದ್ದೆ
ನಿನ್ನ ಕಷ್ಟ ನಷ್ಟಗಳಿಗೆ ನಾ ಭಾಗಿಯಾಗಿದ್ದೆ
ನಿನ್ನ ಪ್ರತಿಯೊಂದು ಜಯದಲ್ಲಿ ನಾ ಹೃದಯದಿಂದ ನಕ್ಕಿದ್ದೆ
ನಿನ್ನ ಸುಖ ಸಂತೋಷಗಳಲ್ಲಿ ನನ್ನ ನಾ ಮರೆತಿದ್ದೆ
ನಮ್ಮೊಳಗೆ ಯಾವುದೇ ಮುಚ್ಚು ಮರೆಯಿರಲಿಲ್ಲಾ, ಅದ ನೀ ಅರಿತಿದ್ದೆ
ಆದರೂ..... ಆದರೂ... ನಾನು ಕೆಟ್ಟವಳು ಎನಿಸಿಕೊಂಡೆ
ನನ್ನ ನೆನೆದಾಗ ನಿನಗೇನೋ ಅನಿಸಬಹುದು
ಆದರೂ ಈ ಕೆಟ್ಟವಳು ನಿನ್ನ ನಗು ಮೊಗವನ್ನು
ಹುಸಿ ಮುನಿಸನ್ನು, ಕೀಟಲೆಗಳನ್ನು ತುಂಟಾಟವನು
ನೆನೆ-ನೆನೆದು....
ನೀನು ಈ ನನ್ನ ಪರಿಶುದ್ಧ ಸ್ನೇಹವನ್ನು ಅರಸಿ ಮತ್ತೆ ಬರುವುದಿಲ್ಲವೆಂದು
ತಿಳಿದೂ  ತಿಳಿದೂ... ನಾನು ಕಾದಿರುವೆ...
ಕೊನೆಯದಾಗಿ ನಿನ್ನ ಪರಿಶುದ್ಧ ಮನಸ್ಸಿನಿಂದ
ಈ ಕೆಟ್ಟವಳನ್ನು ಕ್ಷಮಿಸಿಬಿಡು ಓ ಗೆಳೆಯಾ....

-     ಅರ್ಚನಾ ಎಸ್. ಶೆಟ್ಟಿ
ಪ್ರಥಮ ಎಂ.ಎ. ಕನ್ನಡ ವಿಭಾಗ
ನನ್ನ ಪ್ರೀತಿಯ ಅಣ್ಣ

ನನ್ನ ಪ್ರೀತಿಯ ಅಣ್ಣ
ನೋಡಲು ಚೆಲುವಗಾರನಾತ
ಗುಳಿಕೆನ್ನೆಯ ಸುಂದರನಾತ
ಕೇಳುವರು ಎಲ್ಲರು ಯಾರು ಆತನೆಂದು
ಹೇಳುವೆನು ನಾನು, ನನ್ನ ಪ್ರೀತಿಯ ಅಣ್ನನಾತ

ಪ್ರೀತಿ ತುಂಬಿದ ಹೃದಯ ಅವನದು
ಗುಬ್ಬಿಯಂತೆ ಪ್ರೀತಿಸುವ ತಂಗಿಯನು
ಹೂವು ತುಂಬಿದ ಮರವಾಗಿ
ಯಾವಗಲೂ ತಂಗಿಗೆ ನೇರಳಾಗಿರುವಾತ

ದೈರ್ಯವಂತನಾತ....
ದೇಶ ಕಾಯುವ ಧೀರ ವೀರನಾತ
ದಿನವೂ ಕಾಯುವೆ ಈಗ ಬರುವನೆಂದು
ಆದರೂ ಮನದಲ್ಲಿ ಸಂತೋಷವಿದೆ
ದೇಶವನ್ನು ಕಾಯುವ ಸೈನಿಕನೆಂದು

ಪರಿಚಯ
ಪ್ರಥಮ ಎಂ.ಲಿಬ್
ಲೈಬ್ರರಿ ಸೈನ್ಸ್
ಹಗುರ - ಭಾರ
ಕೆಲವೊಮ್ಮೆ ಹಗುರ ವಿಚಾರಗಳೂ
ಅನಿಸುತ್ತವೆ ಬಲು ಭಾರ
ಪರ್ವತವನ್ನೇರಿ ಕುಳಿತವನು
ಸೂಜಿಯ ಮೇಲೆ ಕೂರಲಾರ

ಪ್ರಾಣಿಪ್ರಿಯ !
ಪ್ರಾಣಿಗಳು ಅವನ
ಪ್ರೀತಿಗೆ ಪಾತ್ರ
ಆದರೆ ಅವುಗಳು
ಸತ್ತು ಹೋಗಿದ್ದರೆ ಮಾತ್ರ...!
  ರಾತ್ರಿಯ ನಲ್ಲೆ
ರಾತ್ರಿ ಹಾಡು ಹಾಡುತ್ತಾ,
ಕೆನ್ನೆಗೆ ಮುತ್ತಿಕ್ಕುವ ನಲ್ಲೆ...
ಅಪಾರ್ಥ ಮಾಡ್ಕೋಬೇಡಿ ಸ್ವಾಮಿ
ಅದು ಹೆಣ್ಣು ಸೊಳ್ಳೆ....!!!

                                         ವಿಶ್ವನಾಥ್. ಎನ್.
                                         ಪ್ರಥಮ ಎಂ. ಎ. ಕನ್ನಡ

ಪ್ರತಿಭೆಯ ಮಾತು
ಆಹಾಹಾ.... ಆಹಾಹಾ...
ಆಹಾಹಾ ಹಾಹಾ....ಆ
ಆಹಾ ಗಹಾ...ಹಾ....ಆಹಾಹಾ ಹಾಹಾ
ಏನಾಗಲಿ ಪ್ರತಿಬೆ ತೋರು ನೀ
ಗೌರವಿಸುವ ಮಂಗಳಗಂಗೋತ್ರಿಯಲಿ
ಹೊ ಹೊ ಹೋ....
ಕಲೆಯನ್ನು ಕೊಲ್ಲಬೇಡ ನಿನ್ನಲ್ಲಿ
ಆಹಾಹಾ...ಆಹಾಹಾ...
ಅಡಗಿರೋ ಕಲೆಯನು
ಹೊರಗೊಡು ನೀ ಇನ್ನೂ
ಇಂತ ಸಮಯವೇ... ಸ್ಥೈರ್ಯವೇ...
ಅಂಜುವಾ ಮನಸಲಿ....
ತುಂಬುವಂತೆ ಮನಕೆ, ಮಾಡಿತಲ್ವಾ
ನಮಗೆ ಈ ವಿ.ವಿ ಯ
ಮಂಗಳಾ ವಿ.ವಿ ಯು
ಸಂತೋಷಾ ಕೊಡುತಿರೋ
ಕಲೆಗೆಂದೂ ಬೆಲೆಯಿದೆ....
ಸಾಧಿಸಿ ತೋರುವ ಸ್ಪೂತರ್ಿಯೂ ನಮಗಿದೆ
ಪ್ರೀತಿಯಾ ಹಂಚುತಾ....
ಜೀವನಾ ಮಾರ್ಗಕೋ....
ಕರೆದೊಯ್ಯುವಾ ವಿಧ್ಯೆಯೇ ಒಳಗಿದೆ
ಹರಸುವಾ ಗುರುಗಳು....
ಬೆಳೆಸುವಾ ಕಲೆಗಳು
ತೋರುತಿಹವು ಇಂದು
ಮಾನವೀಯ ಮೌಲ್ಯವು ನಮ್ಮಲ್ಲಿ
ಪ್ರತಿಕ್ಷಣ... ಬಯಸುವಾ....
ಸುಖವನೂ ನಿಡುತಿರೋ....
ಈ ಪ್ರದರ್ಶನಕೇ ಸಾಕ್ಷಿಯು ಎಂದೂ
ಈ ಸಭಾಂಗಣಾ.....
ಮಂಗಳಾ ಸಭಾಂಗಣ
ಏನಾಗಲಿ ಪ್ರತಿಭೆ ಆತ್ಮ ವಿಶ್ವಾಸದಲಿ....ಹೋ
ಕಲೆಗೆಂದೂ ಕೊನೆ ಇಲ್ಲಾ ಬಾಳಲಿ ಆಹಾಹಾ....

ಆನಂದ ಆರ್. ಬಿ.
ಯೋಗ ವಿಜ್ಞಾನ ವಿಭಾಗ.
ಸಾಟಿ
ಮಾತೃವಾತ್ಸಲ್ಯಕ್ಕೆ
ಬೇರೆ ಇಲ್ಲ ಸಾಟಿ
ಖರೀದಿಸಲು ಸಾಧ್ಯವಿಲ್ಲ
ಕೊಟ್ಟರು ಕೋಟಿ-ಕೋಟಿ
ಸವಿತಾ
ಪ್ರಥಮ ಎಂ,ಎಸ್ಸಿ.ಯೋಗ ವಿಜ್ಞಾನ


ಕೊರತೆ
ತಾಯಿ ಇಲ್ಲದ ಬದುಕು ನಿಷ್ಪ್ರಯೋಜಕ
ಅದರಲ್ಲಿ ತಾಯಿಯ ಪ್ರೀತಿಯ ಕೊರತೆ
ತಂದೆ ಇಲ್ಲದ ಬದುಕು ಅರ್ಥಹೀನ
ಅಲ್ಲಿ ಜಾಗ್ರತೆ ಮಾಡುವ ಮನಸ್ಸಿನ ಕೊರತೆ
ಅಣ್ಣನಿಲ್ಲದ ಬದುಕು ನಿರರ್ಥಕ
ಅಲ್ಲಿ ಬಾಂಧವ್ಯದ ಕೊರತೆ
ಸ್ನೇಹಿತರಿಲ್ಲದ ಬದುಕು ನಶ್ವರ
ಅಲ್ಲಿ ನೆನಪುಗಳ ಕೊರತೆ
ಬಂಧುಗಳಿಲ್ಲದ ಬದುಕು ಅರ್ಥಹೀನ
ಅಲ್ಲಿ ಬಾಂಧವ್ಯದ ಕೊರತೆ.

ಶ್ರೀಲತಾ ಬಿ,ಸ್
ದ್ವಿತೀಯ ಎಂ,ಎ ಕನ್ನಡ
ನಿನ್ನದೇ ನೆನಪು
ಈ ಮನಸ್ಸಿನ ತುಂಬಾ ನಿನ್ನದೇ ನೆನಪು...
ಈ ಹೃದಯದ ಬಡಿತವಾಗಿರುವುದು
ನಿನ್ನದೇ ನೆನಪು.....
ನನ್ನ ಕಣ್ಣುಗಳಲ್ಲಿ ಕಂಬನಿಯಾಗಿರುವುದು
ನಿನ್ನದೇ ನೆನಪು.....
ನನ್ನ ಉಸಿರಲ್ಲಿ ಉಸಿರಾಗಿ ಹಸಿರಾಗಿರುವುದು
ನಿನ್ನದೇ ನೆನಪು......
ಏಕಾಂತದಲ್ಲಿ ನನ್ನ ಸ್ನೇಹಿತನಾಗುವುದು
ನಿನ್ನದೇ ನೆನಪು......
ಮೌನದಲ್ಲೂ ನನ್ನ ಜೊತೆ
ನೂರಾರು ಮಾತುಗಳನ್ನಾಡುವುದು
ನಿನ್ನದೇ ನೆನಪು......
ಒಂಟಿಯಾಗಿ ನಾ ನಡೆದರೆ
ನೆರಳಾಗಿ ಹಿಂಬಾಲಿಸುವುದು
ನಿನ್ನದೇ ನೆನಪು......
ನಾ ಎಲ್ಲೇ ಹೋದರು
ನನ್ನ ಪ್ರತಿಬಿಂಬವಾಗಿ ಜೊತೆಯಾಗಿರುವುದು
ನಿನ್ನದೇ ನೆನಪು......
ನಿದಿರೆಯ ಮಂಪರಿನಲ್ಲಿ
ಕನಸಾಗಿ ಸುಳಿದಾಡುವುದು
ನಿನ್ನದೇ ನೆನಪು......
ನೋವಲ್ಲಿ ನಲಿವಾಗಿ,
ನಲಿವಲ್ಲಿ ಮುದ್ದು ನಗುವಾಗಿ,
ನನ್ನ ನಗಿಸುವುದು
ನಿನ್ನದೇ ನೆನಪು.....
ಒಲವಿನ ಭಾವನೆಗಳು
ನನ್ನಲ್ಲೇ ಹುಟ್ಟಿ, ನನ್ನಲ್ಲೇ ಸಾಯುವಾಗ
ಕಾಡುವುದು ಕೇವಲ
ನಿನ್ನದೇ ನೆನಪು......
ಈ ಹೃದಯ
ಪ್ರೀತಿಯ ಸಾಮಿಪ್ಯ ಬಯಸಿದಾಗ
ನೆನಪಾಗುವುದು
ನಿನ್ನದೇ ನೆನಪು......

ದೀಪಿಕಾ. ಎನ್. ಸಿ.
ದ್ವಿತೀಯ ಎಂ.ಕಾಂ ವಿಭಾಗ

ಬಿತ್ತಿ ಬಿತ್ತಿ
ಅದೊಂದು ದಿನ ಮನದ ತವಕ
ಎಲ್ಲರಲ್ಲೂ ಬಿತ್ತಿ ಬ್ಲಾಗ್ ನ ಪುಳಕ
ವಾಚಿಸುತ್ತಿದ್ದರು ಕವನ
ಅವರಿಗೆ ನನ್ನ ಕೋಟಿ ನಮನ
ಪ್ರಾರಂಭವಾಯಿತು ಕವಿಗೋಷ್ಠಿ
ನನ್ನ ಕೈಗಳಿತ್ತು ಮುಷ್ಠಿ
ಮನದೊಳಗೆ ಮಿಡಿಯುತ್ತಿತ್ತು ಬಿತ್ತಿ ಬಿತ್ತಿ
ನಾ ಗೀಚಿದೆ ಪೆನ್ನನ್ನು ಒತ್ತಿ ಒತ್ತಿ
ರಂಜಿತ್  ಪ್ರಥಮ ಎಂ.ಎ. 
    ಕನ್ನಡ ವಿಭಾಗ
ಗೆಳೆಯನೇ, ನಿನ್ನೊಲವ ನಾ ಹೇಗೆ ಬಣ್ಣಿಸಲಿ?

ಕವಿಯಲು ಮನದಲ್ಲಿ
ನೋವಿನ ಮುಗಿಲು
ಪ್ರೀತಿಯ ಮಾತಲ್ಲಿ
ನೀ ತರುವೆ ಸಂತಸದ ಹೊನಲು
ನನ್ನ ಕನಸಲ್ಲೂ ಪ್ರೀತಿಸುವೆ
ಈ ಕಣ್ಣಿಗೆ ರೆಪ್ಪೆಯಾಗಿ
ಕಾಯುವೆ ಕಂಬನಿಯ
ಕಿರುಬೊಗಸೆಯಲ್ಲಿ ಹಿಡಿದು....
ಈ ಬಾಳದಾರಿಯಲ್ಲಿ
ಏಕಾಂಗಿ ಯಾನದಲ್ಲಿ
ಮನಸೆಂಬ ಮಲ್ಲಿಗೆಯು
ಮೌನದಲ್ಲಿ ಬಾಡಿರಲು
ನೀ ತುಂತುರು ಹನಿಯಾಗಿ
ತುಂಟ ನಗುವಲ್ಲಿ
ನನ್ನ ನಗಿಸುವೆ
ಒಲವಿನ ಹೂ ಮಳೆ ಸುರಿದು.....

- ದೀಪಿಕಾ ಎನ್. ಸಿ.
   ದ್ವಿತೀಯ ಎಂ.ಕಾಂ ವಿಭಾಗ
 ಜೀವನ
ಮೂಡುವನು ಸೂರ್ಯನು ಪೂರ್ವದಲ್ಲಿ
ಜನರ ಕಾಯಕವು ಆರಂಭ
ಖಗ - ಮೃಗಗಳ ಆಟೋಟ...
ಭಗವಂತ ತಿರುಗಿಸಿದ ಬುಗುರಿಯಂತೆ...
       ಮಕ್ಕಳ ಶಾಲೆಗೆ ಪಯಣ
       ಆಟಪಾಠಗಳ ಸಮ್ಮಿಲನ
       ಮುಗ್ಧ ಮನಸ್ಸಿನ ಪುಟಾಣಿಗಳು
       ಭಗವಂತನ ಇನ್ನೊಂದು ರೂಪದಂತೆ
ರಾತ್ರಿಯ ನಿಶ್ಯಬ್ಧ ವಾತಾವರಣ
ಕಲುಷಿತವಾಗಲು ಶುರುವಾಯ್ತು...
ಮನುಷ್ಯ - ಮನುಷ್ಯರ ನಡುವೆ ಕಲಹ
ಕಟ್ಟಾಟ ಹೊಡೆದಾಟ ಜಗಳವಯ್ಯ...
       ತಾನು ಆಡಿಸಿದ ಆಟವನು
       ನೋಡಿ ಭಗವಂತ ನಗುವನು...
       ಇಹದ ಮೋಹದಲ್ಲಿರುವ ಜನರು...
       ಆಡುವರು ಪರದ ಜ್ಞಾನವಿಲ್ಲದಂತೆ...
ಒಂದೊಂದು ಕಡೆಯಲ್ಲಿ ಬಡತನ,
ತಿನ್ನಲು ಗತಿಯಿಲ್ಲದ ಜನ,
ಇನ್ನೊಂದು ಕಡೆಯಲ್ಲಿಹರು ಸಿರಿವಂತ ಜನ
ಮೋಜು ಮಸ್ತಿಯ ಮಾಡುತಿಹರು...
       ಹಣವಿಲ್ಲವೆಂಬ ಚಿಂತೆ ಬಡವನಿಗೆ
       ಹಣವಿದ್ದರೂ ಚಿಂತೆ ಸಿರಿವಂತನಿಗೆ
       ಚಿಂತೆಯೆನ್ನುವುದು ಕರೆದೊಯ್ಯುವುದು....
       ಮನುಷ್ಯರನ್ನು ಚಿತೆಯೆಡೆಗೆ
ರವಿಯು ಮುಳುಗಿದನು ಪಶ್ಚಿಮದಲ್ಲಿ
ನೆಲೆಸಿಹುದು ಪ್ರಕೃತಿಯ ಮಡಿಲಲ್ಲಿ ಶಾಂತಿ...
ಖಗ - ಮೃಗಗಳೆಲ್ಲವೂ...
ತಮ್ಮ ಕನಸಿನ ಲೋಕಕೆ ಜಾರಿಹುದು..
       ಇದುವೇ ದಿನದ ಅಂತ್ಯ...
       ಹೀಗೆ ಉರುಳುವುದು...
       ದಿನ - ತಿಂಗಳು ವರುಷಗಳು...
       ಈ ಬಂಧನ ಮುಗಿಯುವುದು....
      
                           ಪ್ರಭಾಶ್ರೀ
                           ದ್ವಿತೀಯ ಎಂ. ಎಸ್ಸಿ. ಕೆಮಿಸ್ಟ್ರಿ
  ಆ ನೆನಪುಗಳು
ಓ ಮುದ್ದು ಗೆಳತಿ
ನೆನಪಿದೆಯೇ ನಿನಗೆ
ಬಾಲ್ಯದ ಆ ಸುಂದರ
ಮುಂಜಾವುಗಳು
ಮುಗ್ಧ ಮನಸಿನ ನಿರ್ಮಲ ನಗುವಿನಲಿ
ಒಂದಾಗಿ ಬೆರೆತು ಓಡಾಡಿದ
ತುಂಟಾಟದ ಬಾಲ್ಯ ದಿನಗಳು
ಎಂದೆಂದಿಗೂ ಅಚ್ಚಳಿಯದೇ ಉಳಿಯುವ
ಸಿಹಿ ನೆನಪುಗಳು ನನ್ನೆದೆಯಲ್ಲಿ
ಆ ದಿನಗಳ ಕೂಗಿ ಮತ್ತೇ ಕರೆದರೂ
ಮರಳಿ ಬಾರದ ಅಮೂಲ್ಯ ಕ್ಷಣಗಳು

                                  ಸೌಜನ್ಯ
                                  ದ್ವಿತೀಯ ಎಂ.ಎ.

ದಾನ

ಧರ್ಮ ಶಾಸ್ತ್ರದಲ್ಲಿ ಹೇಳಿದೆ
ದಾನದಲ್ಲಿ ಶ್ರೇಷ್ಠ ಅನ್ನದಾನ
ಸಂವಿಧಾನದಲ್ಲಿ ಬರೆದಿದೆ
ಪ್ರಜಾಪ್ರಭುತ್ವದಲ್ಲಿ ಮತದಾನ
ಮನಃಶಾಸ್ತ್ರದಲ್ಲಿ ತಿಳಿಸಿದೆ
ಮನುಷ್ಯನ ಬುದ್ಧಿಗೆ ಸಮಾಧಾನ


ಲೋಕೇಶ್ ಕುಂಚಡ್ಕ
ಪ್ರಥಮ ಎಂ.ಎ.
ಕನ್ನಡ ವಿಭಾಗ

ಚುಟುಕುಗಳು
ನನ್ನವಳು
ಊಟದಲ್ಲಿದ್ದಂತೆ ಹೋಳಿಗೆ
ನೀನು ನನ್ನ ಬಾಳಿಗೆ ಎನ್ನದಿದ್ದರೆ,
ಹಬ್ಬಕ್ಕೆ ಮಾಡಿಟ್ಟ ಹೋಳಿಗೆ
ಬಡಿಸುವುದೇ ಇಲ್ಲ ಅವಳು ನನ್ನ ಬಾಳೆಗೆ..

ಹಗುರ - ಭಾರ
ಕೆಲವೊಮ್ಮೆ ಹಗುರ ವಿಚಾರಗಳೂ
ಅನಿಸುತ್ತವೆ ಬಲು ಭಾರ
ಪರ್ವತವನ್ನೇರಿ ಕುಳಿತವನು
ಸೂಜಿಯ ಮೇಲೆ ಕೂರಲಾರ

ಪ್ರಾಣಿಪ್ರಿಯ !
ಪ್ರಾಣಿಗಳು ಅವನ
ಪ್ರೀತಿಗೆ ಪಾತ್ರ
      ಆದರೆ ಅವುಗಳು
      ಸತ್ತು ಹೋಗಿದ್ದರೆ ಮಾತ್ರ...!

       ರಾತ್ರಿಯ ನಲ್ಲೆ
ರಾತ್ರಿ ಹಾಡು ಹಾಡುತ್ತಾ,
       ಕೆನ್ನೆಗೆ ಮುತ್ತಿಕ್ಕುವ ನಲ್ಲೆ...
       ಅಪಾರ್ಥ ಮಾಡ್ಕೋಬೇಡಿ ಸ್ವಾಮಿ
       ಅದು ಹೆಣ್ಣು ಸೊಳ್ಳೆ....!!!

                                         ವಿಶ್ವನಾಥ್. ಎನ್.
                                         ಪ್ರಥಮ ಎಂ. ಎ. ಕನ್ನಡ
ನರಜನ್ಮ

ತನುವೆಂಬ ಮನೆಯಲ್ಲಿ
ಸುಸ್ಥಿರ ನೆಲೆಯೇ ಇಲ್ಲ
ಬಾಡಿಗೆ ಕೊಡುವವರೆಗೆ
ವಾಸವಷ್ಟೆ,,,,,,,

ನಿನ್ನರಾಗ ಭೋಗಕ್ಕಾಗಿ
ಪರರ ಚಿಂತೆ ಬದಿಗಿಟ್ಟಾಗ
ಅಂದುಕೊಂಡ ಭೋಗ ಇಂದು
ಯಾರಿಗಾಯಿತು,,,,,,,

ಅಜ್ಞಾನ ಸುಜ್ಞಾನಗಳ
ಬೇಲಿದಾಟಿ ಹೋಗುವಾಗ
ಹೆತ್ತ ಕರುಳು ಹೊತ್ತ ಧರಣಿ
ಜೊತೆಗೆ ಬಾರದು,,,,,,,

ನಿನ್ನಿಷ್ಟ ಪರರ ಇಷ್ಟ
ಹೊತ್ತುಕೊಂಡು ನಡೆದೆ ನೀನು
ಸತ್ತುಹೋದ ಮೇಲೆ ಇಷ್ಟ
ಬಂದಿತಾವುದು,,,,,,,,


- ಲತೇಶ್.ಯು
ಪ್ರಥಮ ಎಂ.ಎಸ್ಸಿ. 
ಕಂಪ್ಯೂಟರ್ಸಯನ್ಸ್ ವಿಭಾಗ


ನಿನ್ನೊಲವ ನಾ ಹೇಗೆ ಬಣ್ಣಿಸಲಿ
ಕಣ್ಣಿನೊಳಗೆ ಕನಸಾಗಿ, 
ಮನಸಿನೊಳಗೆ ನೆನಪಾಗಿ,
ಹೃದಯದೊಳಗೆ ಪ್ರೀತಿಯ ಹೂವಾಗಿ
ಈ ಜೀವದ ಉಸಿರಾಗಿ 
ಸದಾ ನನ್ನ ಜೊತೆಯಿರುವ

ನನ್ನಮ್ಮ
ಹಾಲುಣಿಸಿ ಮಾತು ಕಲಿಸಿ, ನಡೆಸಿ
ಬಂಗಾರದ ಬದುಕನ್ನು ನೀಡಿದ ಜೀವ
ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಜೀವ
ಕಷ್ಟ ಬಂದರೂ, ನೋವುಂಡರೂ ನಲುಗದ ಜೀವ
ಅವಳೇ ನನ್ನಮ್ಮ
ಕಷ್ಟಗಳು ಬಂದರೂ ಮಕ್ಕಳಿಗಾಗಿ
ಮರುಗುವ
ಸರ್ವಸ್ವವನ್ನೇ ಜೀವನದುದ್ದಕ್ಕೂ
ಧಾರೆಯೆರೆವ
ಎಲೆ ಮರೆಯ ಕಾಯಿಯಂತೆ
ದುಡಿಯುವ
ಅವಳೇ ನನ್ನಮ್ಮ
ದಣಿದು, ಸೋತು ಬಂದಾಗ ಮೈದಡವಿ
ಸಾಂತ್ವನ ನೀಡುವ
ಬಿದ್ದಾಗ ಪೆಟ್ಟು ಕೊಟ್ಟು ನಿಲ್ಲಿಸುವ
ಆರೈಕೆ ಪ್ರೀತಿಕೊಟ್ಟು ಪ್ರತಿಫಲ
ನಿರೀಕ್ಷಿಸದ ಜೀವ 
ಅವಳೇ ನನ್ನಮ್ಮ
ಗಂಡನ ಹುಟ್ಟುಹಬ್ಬಕ್ಕೆ
ಶುಭಾಶಯ ಹೇಳುವ
ಮಕ್ಕಳ ಹುಟ್ಟುಹಬ್ಬಕ್ಕೆ 
ಪಾಯಸ ಮಾಡುವ
ಆ ಬಡಪಾಯಿ ಜೀವದ ಋಣ
ತೀರಿಸಲಾಗುತ್ತದೆಯೇ?
ಅವಳೇ ನನ್ನಮ್ಮ....

-ರಂಜಿತ್
 ಪ್ರಥಮ ಎಂ.ಎ.
 ಕನ್ನಡ ವಿಭಾಗ.

  ಬಿತ್ತಿ ವಿಶೇಷಾಂಕ 2017